Sandalwood Leading OnlineMedia

ರಣ್‌ಬೀರ್ ಕಪೂರ್‌ನೊಂದಿಗಿನ ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ರಣ್ ಬೀರ್ ಜೊತೆ ಕೆಲಸ ಮಾಡೋದು ನನ್ನ ವ್ಯಕ್ತಿತ್ವವನ್ನು ಇನ್ನಷ್ಟು ಸುಂದರಗೊಳಿಸುತ್ತೆ. ಪಾತ್ರದಲ್ಲಿ ತಲ್ಲೀನಳಾಗೋದಕ್ಕೆ ಹೆಚ್ಚು ಸಹಕಾರವಾಗುತ್ತೆ ಎಂದಿದ್ದಾರೆ. ಎಂಟು ವರ್ಷಗಳ ಹಿಂದೆ ನಾವು ಅಭಿನಯಿಸುವಾಗ ತುಂಬಾ ನರ್ವಸ್ ಆಗುತ್ತಿದ್ದೆವು.ಆದ್ರೆ ಇವತ್ತು ನಾವು ನಮ್ಮ ಮೊದಲ ಸಿನಿಮಾದ ಬಗ್ಗೆ ಕುಳಿತು ಮಾತನಾಡುತ್ತೇವೆ. ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

ರಣ್ ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪರಸ್ಪರ ದೂರವಾದ ಬಳಿಕ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ರಣ್ ಬೀರ್ ಜೊತೆ ಅಭಿನಯಿಸಲು ನಾನು ಯಾಕೆ ಒಪ್ಪಿಕೊಂಡೆ ಅನ್ನೋದರ ಬಗ್ಗೆ ಇದೀಗ ದಿಪ್ಪಿ ಬಾಯ್ಬಿಟ್ಟಿದ್ದಾರೆ.
ನಾವು ನಡೆದು ಬಂದ ಹಾದಿಯನ್ನು ತಿರುಗಿ ನೋಡಿದಾಗ ಖುಷಿಯಾಗುತ್ತೆ ಅಂತಾ ದೀಪಿಕಾ ಹೇಳಿದ್ದಾರೆ.ರಣ್ ಬೀರ್ ಕಪೂರ್ ಒಬ್ಬ ಉತ್ತಮ ವ್ಯಕ್ತಿ ಅವರ ಜೊತೆ ಕೆಲಸ ಮಾಡೋದು ನನಗೆ ತುಂಬಾನೇ ಖುಷಿ ಕೊಡುತ್ತೆ ಅಂತಾ ದೀಪಿಕಾ ಹೇಳಿದ್ದಾರೆ.
ಈ ಹಿಂದೆ ದೀಪಿಕಾ ಹಾಗೂ ರಣ್ ಬೀರ್ ಬಚ್ನಾ ಯೇ ಹಸೀನೋ ಹಾಗೂ ಎ ಜವಾನಿ ಹೇ ದಿವಾನಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದೀಗ ಇಮ್ತಿಯಾಜ್ ಅಲಿ ಅವರ ಸಿನಿಮಾದ ಮೂಲಕ ಅವರು ತೆರೆ ಮೇಲೆ ಮತ್ತೆ ಒಂದಾಗಿದ್ದಾರೆ.

Share this post:

Related Posts

To Subscribe to our News Letter.

Translate »