Sandalwood Leading OnlineMedia

ಶೀಘ್ರದಲ್ಲೇ ಮಗು ಮಾಡಿಕೊಳ್ಳುವ ಬಗ್ಗೆ ಬಯಕೆ ವ್ಯಕ್ತಪಡಿಸಿದ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ತಮ್ಮ ಕೌಟುಂಬಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.2018 ರಲ್ಲಿ ದೀಪಿಕಾ ಪಡುಕೋಣೆ ತಮ್ಮ ಗೆಳೆಯ ರಣವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆಯಾಗಿ ಐದು ವರ್ಷವೇ ಕಳೆದಿದೆ.
ಇದುವರೆಗೆ ಇಬ್ಬರ ಕಡೆಯಿಂದ ಗುಡ್ ನ್ಯೂಸ್ ಬಂದಿಲ್ಲ. ಆದರೂ ದೀಪಿಕಾ ಗರ್ಭಿಣಿ ಎನ್ನುವ ರೂಮರ್ ಹಲವು ಬಾರಿ ಹರಿದಾಡಿದ್ದಿದೆ. ಇದೀಗ ಸಂದರ್ಶನವೊಂದರಲ್ಲಿ ಮುಂದೆ ಮಗು ಮಾಡಿಕೊಳ್ಳುವ ಯೋಜನೆ ಇದೆಯಾ ಅಂತ ಪ್ರಶ್ನೆ ಕೇಳಿದ್ದಾರೆ.ಇದಕ್ಕೆ ಉತ್ತರಿಸಿರುವ ದೀಪಿಕಾ ‘ಖಂಡಿತಾ. ನನಗೆ ಮತ್ತು ರಣವೀರ್ ಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾವು ನಮ್ಮ ಮಗು ಬರಮಾಡಿಕೊಳ್ಳುವ ದಿನಕ್ಕಾಗಿ ಎದಿರು ನೋಡುತ್ತಿದ್ದೇವೆ. ನನ್ನ ತಂದೆ ತಾಯಿ ನನ್ನನ್ನು ಜೀವನದಲ್ಲಿ ಮೌಲ್ಯಯುತ ವ್ಯಕ್ತಿಯಾಗಿ ಬೆಳೆಸಿದರು. ನಿಮ್ಮ ಮಕ್ಕಳನ್ನೂ ಅದೇ ರೀತಿ ಬೆಳೆಸಿ ಎಂದು ಅವರು ನಮಗೆ ಹೇಳುತ್ತಿರುತ್ತಾರೆ’ ಎಂದಿದ್ದಾರೆ ದೀಪಿಕಾ.

Share this post:

Related Posts

To Subscribe to our News Letter.

Translate »