ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ಈಗಾಗಲೇ ಶುರುವಾಗಿದೆ. ಪತಿ ರಣ್‌ವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆಆಗಮಿಸಿ ವೋಟ್ ಮಾಡಿದ್ದಾರೆ. ನಟಿಯ ಬೇಬಿ ಬಂಪ್ ವಿಡಿಯೋ ವೈರಲ್ ಆಗಿದೆ. ಬಿಟೌನ್‌ನ ಹಲವು ಸೆಲೆಬ್ರಿಟಿಗಳು ಇಂದು ಮತದಾನ ಮಾಡಿದ್ದು, ಇದೀಗ ದೀಪಿಕಾ ಪಡುಕೋಣೆ ದಂಪತಿ ಮುಂಬೈನ ಪಾಲಿ ಹಿಲ್‌ನಲ್ಲಿ ಮತ ಚಲಾಯಿಸಿದ್ದಾರೆ.
ವೈಟ್ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ ಬೇಬಿ ಬಂಪ್‌ನೊಂದಿಗೆ ದೀಪಿಕಾ ಕಾಣಿಸಿಕೊಂಡರು. ಈ ವೇಳೆ ರಣ್‌ವೀರ್, ಪತ್ನಿ ದೀಪಿಕಾರ ಕೈ ಹಿಡಿದು ಎಚ್ಚರಿಕೆಯಿಂದ ಕಾರಿನಲ್ಲಿ ಕೂರಿಸಿದ್ದರು. ಈ ಹಿಂದೆ ಸಿನಿಮಾ ಶೂಟಿಂಗ್, ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ನಟಿಯನ್ನು ನೋಡಿ ನಿಜಕ್ಕೂ ಗರ್ಭಿಣಿನಾ? ಎಂದು ಪ್ರಶ್ನಿಸಿದ್ದರು.
ಅಂದಹಾಗೆ, ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾದ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ಈ ಸಿನಿಮಾದ ತಮ್ಮ ಪಾತ್ರಕ್ಕೆ ಹಿಂದಿ ಮತ್ತು ಕನ್ನಡದಲ್ಲಿ ನಟಿ ಡಬ್ ಮಾಡಿದ್ದಾರೆ.