Sandalwood Leading OnlineMedia

`ದಸರಾ ಗೊಂಬೆಯೆ..’ ಹಾಡು ಬರೆದ ನಾದಬ್ರಹ್ಮರಿಂದ ದಸರಾ ಉದ್ಘಾಟನೆ

ವಿಶ್ವಪ್ರಸಿದ್ಧ ಮೈಸೂರು ದಸರಾವನ್ನು ಈ ವರ್ಷ ‘ನಾದಬ್ರಹ್ಮ’ ಎಂದು ಕರೆಯಲ್ಪಡುವ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಬಾರಿ ಕೂಡ ಮೈಸೂರು ದಸರಾವನ್ನು ಸಾಂಪ್ರದಾಯಿಕಬದ್ಧವಾಗಿ ಆಚರಿಸಲಾಗುವುದು ಎಂದು ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿಯೇ ಇಂದು ಘೋಷಿಸಿದರು.

ಇದನ್ನೂ ಓದಿ:  `ಜೈಲರ್’ನಿಂದಾಗಿ ಬಾಲಿವುಡ್ ಎಂಟ್ರಿ ಕೊಡ್ತಾರಾ ಶಿವಣ್ಣ? ವಿಶೇಷ ಮಾಹಿತಿ ಇಲ್ಲಿದೆ.

ದಸರಾ ಅಕ್ಟೋಬರ್​ 15 ರ ಬೆಳಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅಲ್ಲದೇ ಈ ಬಾರಿ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ ಎಂದು ಹೇಳಿದರು.

 

 

ಇದನ್ನೂ ಓದಿ:  ವೈರಲ್ ಆಯ್ತು ದರ್ಶನ್ ಟ್ವೀಟ್ಸ್, ಹೊರಬೀಳುತ್ತಾ ಟ್ವೀಟ್‌ಗಳ ಹಿಂದಿನ ಅಸಲಿಯತ್ತು?

ಮೈಸೂರಿನ 119 ವೃತ್ತಗಳಲ್ಲಿ ಅಂದರೇ ಬರೋಬ್ಬರಿ 135 ಕಿ.ಮೀ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲು ತೀರ್ಮಾನಿಸಲಾಗಿದೆ. ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್​ಹೌಸ್ ವೃತ್ತ, ಎಲ್​ಐಸಿ ವೃತ್ತ ಸೇರಿ ನಗರದ ಹಲವು ಕಡೆ ದೀಪಾಲಂಕಾರ, ಮೈಸೂರಿನ ಸರ್ಕಾರಿ ಕಟ್ಟಡಗಳಿಗೂ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ ಎಂದರು. ಇನ್ನು ವಿಶೇಷವೆಂದರೆ.. `ದಸರಾ ಗೊಂಬೆಯೆ..’ ಸಾಹಿತ್ಯ ಬರೆದವರೇ ದಸರಾ ಉದ್ಘಾಟಿಸುತ್ತಿರುವುದು. ಹೌದು, ದಸರಾ ಗೊಂಬೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು 1995ರಲ್ಲಿ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ದಸರಾ ಗೊಂಬೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

 

 

Share this post:

Related Posts

To Subscribe to our News Letter.

Translate »