ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಜಯಭೇರಿ ಬಾರಿಸಿದ ಬಳಿಕ ದರ್ಶನ್ ದುಬೈಗೆ ಪ್ರಯಾಣ ಬೆಳೆಸಿದ್ದರು. ‘ಕಾಟೇರ’ ಸಿನಿಮಾವನ್ನು ದುಬೈನಲ್ಲೂ ರಿಲೀಸ್ ಮಾಡಿದ್ದರಿಂದ ಅಲ್ಲಿನ ಭಾರತೀಯರಿಗಾಗಿ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿತ್ತು. ಹೀಗಾಗಿ ಅತಿಥಿಯಾಗಿ ದರ್ಶನ್ ಹಾಗೂ ಅವರ ತಂಡ ದುಬೈಗೆ ತೆರಳಿತ್ತು. ಸಿನಿಮಾ ಕೆಲಸ ಮುಗಿಯುತ್ತಿದ್ದಂತೆ ದರ್ಶನ್ ಫುಲ್ ಜಾಲಿ ಮೂಡಿನಲ್ಲಿದ್ದಾರೆ.
ಇದನ್ನೂ ಓದಿ ಜನವರಿ 12 ರಂದು ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ “BAD” ಚಿತ್ರದ ಟ್ರೇಲರ್
ದುಬೈನ ಮೃಗಾಲಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿಯೇ ಹುಲಿಯ ಮೈ ಸವರಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದೆ. ಹುಲಿ ಮೈ ಸವರುತ್ತಿರುವ ದರ್ಶನ್ ವಿಡಿಯೋಗೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹುಲಿ ಜೊತೆ ಜೊತೆಗೆ ದರ್ಶನ್ ಹಾವನ್ನು ಕೊರಳಿಗೆ ಸುತ್ತಿಕೊಂಡು ಪೋಸ್ ಕೊಟ್ಟಿದ್ದಾರೆ.
ಇದನ್ನೂ ಓದಿ ಮುಂದಿನ ತಿಂಗಳು ರಶ್ಮಿಕಾ ಜೊತೆ ನಿಶ್ಚಿತಾರ್ಥ: ವಿಜಯ್ ದೇವರಕೊಂಡ ಟೀಂ ಹೇಳಿಕೆ
ಇನ್ನೊಂದು ಕಡೆ ಚಿಂಪಾಜಿ ಕೈ ಹಿಡಿದ ದರ್ಶನ್‌ರನ್ನು ಕರೆದುಕೊಂಡು ಹೋಗಿರುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ದುಬೈನಲ್ಲೂ ದರ್ಶನ್ ಪ್ರಾಣಿ ಪ್ರೀತಿಯನ್ನು ಕಂಡು ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮೆಂಟ್‌ಗಳಲ್ಲಿ ದರ್ಶನ್‌ರನ್ನು ಹಾಡಿ ಹೊಗಳುತ್ತಿದ್ದಾರೆ. ಕೆಲ ಡಿ ಬಾಸ್ ಅಭಿಮಾನಿಗಳು ಫುಲ್ ವಿಡಿಯೋವನ್ನು ಹಾಕುವಂತೆ ಒತ್ತಾಯ ಕೂಡ ಮಾಡಿದ್ದಾರೆ.
ಇದನ್ನೂ ಓದಿ ‘ ದಿ ಸೂಟ್’ ಚಿತ್ರದ ಮೂಲಕ ಚಂದನವನಕ್ಕೆ ಬಹುಮುಖ ಪ್ರತಿಭೆ ಕಲೀಮ್ ಪಾಷ
ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಬಂದಿರೋ ‘ಕಾಟೇರ’ ಕರ್ನಾಟಕದಲ್ಲಿ ಉತ್ತಮ ಗಳಿಕೆ ಕಂಡಿದೆ. ಈ ಮೂಲಕ ಮತ್ತೆ ದರ್ಶನ್‌ಗೆ ಬಿಗ್ ಸಕ್ಸಸ್ ಸಿಕ್ಕಿದೆ. ‘ಕ್ರಾಂತಿ’ ಬಳಿಕ ದರ್ಶನ್ ಇಂತಹದ್ದೊಂದು ಯಶಸ್ಸನ್ನು ಎದುರು ನೋಡುತ್ತಿದ್ದರು. ಅದಕ್ಕೆ ತಕ್ಕಂತೆ ಅಪ್ಪಟ ಕನ್ನಡ ಸಿನಿಮಾ ‘ಕಾಟೇರ’ ಬಾಕ್ಸಾಫೀಸ್ ಅಬ್ಬರಿ ಜೋರಾಗಿಯೇ ಸದ್ದು ಮಾಡುತ್ತಿದೆ.