Sandalwood Leading OnlineMedia

ವೈರಲ್ ಆಯ್ತು ದರ್ಶನ್ ಟ್ವೀಟ್ಸ್, ಹೊರಬೀಳುತ್ತಾ ಟ್ವೀಟ್‌ಗಳ ಹಿಂದಿನ ಅಸಲಿಯತ್ತು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಗತ್ಯವಾಗಿ ಟ್ವೀಟ್ ಮಾಡೋಕೆ ಹೋಗಲ್ಲ. ಏನಾದರೂ ಗಂಭೀರ ವಿಷಯಗಳಿದ್ದರೆ ಮಾತ್ರ ಟ್ಟೀಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡುತ್ತಾರೆ. ಇಲ್ಲವೇ ಯಾರಿಗಾದರೂ ವಿಶ್ ಮಾಡಬೇಕಿದ್ದರೆ, ಹಬ್ಬಕ್ಕೆ ಶುಭ ಕೋರುವುದಕ್ಕೆ ಟ್ವೀಟ್ ಮಾಡೋದು ವಾಡಿಕೆ ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡುತ್ತಿದ್ದಾರೆ. ಕಳೆದೆರಡು ದಿನಗಳಿಂದ ದರ್ಶನ್ ವಿಭಿನ್ನವಾಗಿ ಟ್ವೀಟ್ ಮಾಡುತ್ತಿದ್ದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿರೋದಂತೂ ನಿಜ. ಇತ್ತ ದರ್ಶನ್ ಕೂಡ ಒಂದೊಂದೇ ಹೊಸ ಹೊಸ ಸುದ್ದಿಯನ್ನು ನೀಡುತ್ತಿದ್ದಾರೆ. ದರ್ಶನ್ ‘ಏಕಾಂಗಿ’ ಟ್ವೀಟ್ ಏನಿದು? ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಕಳೆದೆರಡು ದಿನಗಳಿಂದ ಮಾರ್ಮಿಕವಾಗಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಇಂದು (ಆಗಸ್ಟ್ 28) ಬೆಳ್ಳಂಬೆಳಗ್ಗೆನೇ ಎರಡು ಜೋಡೆತ್ತಿನ ಫೋಟೊ ಜೊತೆಗೆ “ಕಾಲಾಯ ತಸ್ಮಯ್ ನಮಃ..” ಎಂದು ಟ್ವೀಟ್ ಮಾಡಿದ್ದರು. ಅದನ್ನು ಡಿಕೋಡ್ ಮಾಡುತ್ತಿರುವಾಗಲೇ ‘ಏಕಾಂಗಿ’ ಸಿನಿಮಾದ ಹಾಡಿನ ಸಾಲುಗಳನ್ನೇ ಇಟ್ಟುಕೊಂಡು ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್ ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿಸುದೀಪ್ ಕಾಂಬಿನೇಷನ್‌ನಲ್ಲಿ ಮೆಗಾ ಪ್ರಾಜೆಕ್ಟ್? ಹುಟ್ಟು ಹಬ್ಬಕ್ಕೆ `ಹೊಂಬಾಳೆ’ ಗಿಫ್ಟ್?!

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮದೊಂದು ಸ್ಟೈಲಿಶ್ ಫೋಟೊವನ್ನು ಶೇರ್ ಮಾಡಿದ್ದಾರೆ. ಇದರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಏಕಾಂಗಿ’ ಸಿನಿಮಾದ ಹಾಡಿನ ಸಾಲುಗಳನ್ನು ಬರೆದಿದ್ದಾರೆ. ” ಬಿ ಅಲೋನ್ ಟು ಬಿ ಹ್ಯಾಪ್.. ಬಿ ಹ್ಯಾಪಿ ಟು ಬಿ ಅಲೋನ್.. ವಿಥ್ ಮೈ ಸೆಲೆಬ್ರೆಟೀಸ್. (ಏಕಾಂಗಿ ಆಗಿ ಇರಿ.. ಸಂತೋಷದಿಂದ ಇರಲು.. ಸಂತೋಷದಿಂದ ಇರಲು, ಏಕಾಂಗಿ ಆಗಿ ಇರಿ..ನನ್ನ ಸೆಲೆಬ್ರಿಟಿಗಳೊಂದಿಗೆ)” ಅಂತ ಬರೆದು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್‌ ನೋಡಿ ಫ್ಯಾನ್ಸ್‌ಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗುತ್ತಿಲ್ಲ. ಇತ್ತೀಚೆಗೆ ಆರು ವರ್ಷದ ಮುನಿಸು ಮರೆತು ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈ ಬೆನ್ನಲ್ಲೇ ಇಬ್ಬರೂ ಒಂದಾಗ್ತಿದ್ದಾರೆ ಅನ್ನೋ ಸುದ್ದಿ ಫ್ಯಾನ್ಸ್‌ಗೂ ಕಿಕ್ ಕೊಟ್ಟಿತ್ತು. ಇದೇ ಖುಷಿಯಲ್ಲಿರುವಾಗಲೇ ‘ಏಕಾಂಗಿ’ ಹಾಡಿನ ಸಾಲುಗಳನ್ನು ಟ್ವೀಟ್ ಮಾಡಿ ಮತ್ತೇನೋ ಸಂದೇಶ ನೀಡಿದ್ದಾರೆ. ಆದರೆ, ಈ ಸಂದೇಶವನ್ನು ಡಿಕೋಡ್ ಮಾಡುವುದಕ್ಕೆ ಇನ್ನೆರಡು ದಿನ ಕಾಯಬೇಕಿದೆ.

 

 

ಇದನ್ನೂ ಓದಿ:  ದರ್ಶನ್ & ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್!? ಮತ್ತೆ ಒಂದಾದ ಚಂದನವನದ ದಿಗ್ಗಜರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ವೀಟ್ ಬೆನ್ನಲ್ಲೇ ಇನ್ನೆರಡು ದಿನ ಎಲ್ಲವೂ ಸರಿ ಹೋಗಲಿದೆ. ದಿಗ್ಗಜರಿಬ್ಬರು ದೊಡ್ಡ ಸಂದೇಶವನ್ನೇ ನೀಡುತ್ತಾರೆ. ಸುಮಲತಾ ಅವರ ಸಮ್ಮುಖದಲ್ಲಿ ಈ ಸಂದೇಶ ಹೊರಬೀಳಲಿದೆ ಎಂದು ಸ್ಯಾಂಡಲ್‌ವುಡ್‌ ಮಂದಿ ಹೇಳುತ್ತಿದ್ದಾರೆ. ಆ ಸಂದೇಶವೇನು? ಈ ಟ್ವೀಟ್‌ನ ಮರ್ಮವೇನು? ಕಿಚ್ಚ ದಚ್ಚು ಇಬ್ಬರೂ ಒಂದಾದ್ರಾ? ಈ ಎಲ್ಲಾ ಪ್ರಶ್ನೆಗೂ ಉತ್ತರ ಇನ್ನೆರಡು ದಿನಗಳಲ್ಲಿ ಸಿಗುತ್ತಾ? ಸದ್ಯಕ್ಕಂತೂ ಯಕ್ಷ ಪ್ರಶ್ನೆ.

 

 

Share this post:

Translate »