ಅಕ್ಟೋಬರ್ 18ಕ್ಕೆ ’ಟಗರು ಪಲ್ಯ’ ಮೊದಲ ನೋಟ ಅನಾವರಣ..ನಟರಾಕ್ಷಸ ಧನಂಜಯ್ ನಿರ್ಮಾಣದ ಸಿನಿಮಾಗೆ ಡಿಬಾಸ್ ಬೆಂಬಲನಟರಾಕ್ಷಸ ಡಾಲಿ ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ ಟಗರು ಪಲ್ಯ ಬಿಡುಗಡೆ ದಿನಾಂಕ ನಿಗದಿಯಾಗಿದೆ. ನೆನಪಿರಲಿ ಪ್ರೇಮ್ ಪುತ್ರಿ ಹಾಗೂ ನಾಗಭೂಷಣ್ ನಾಯಕಿ ಹಾಗೂ ನಾಯಕನಾಗಿ ನಟಿಸಿರುವ ಚಿತ್ರ ಇದೇ ತಿಂಗಳ 27ಕ್ಕೆ ಬೆಳ್ಳಿತೆರೆಯಲ್ಲಿ ಮೆರವಣಿಗೆ ಹೊರಡಲಿದೆ.
ಇದನ್ನೂ ಓದಿ ನಿಖಿಲ್ ಕುಮಾರ್ ಅಭಿನಯದ ಚಿತ್ರದಲ್ಲಿ ದುನಿಯಾ ವಿಜಯ್ .
ಟಗರು ಪಲ್ಯಕ್ಕೆ ಡಿಬಾಸ್ ಸಾಥ್
ಟಗರು ಪಲ್ಯ ಸಿನಿಮಾದ ಟೀಸರ್ ಹಾಗೂ ಎರಡು ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಇದೀಗ ಚಿತ್ರತಂಡ ಟ್ರೇಲರ್ ಅನಾವರಣ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದೇ 18ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಗರು ಪಲ್ಯ ಸಿನಿಮಾದ ಮೊದಲ ನೋಟ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಲಿದ್ದಾರೆ.
ಇದನ್ನೂ ಓದಿ ‘ಕಚೋರಿ’ ಸ್ವಲ್ಪಸಿಹಿ, ಸ್ವಲ್ಪಖಾರ ಇರೋ ಪ್ರೇಮಕಥೆ
ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ್ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಸಿನಿಮಾಗೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಿಂದ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ‘ಟಗರು ಪಲ್ಯ’ ಮೂಲಕ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಎಲ್ಲರ ನಿರೀಕ್ಷೆ ಈಗ ಇವರ ಮೇಲಿದೆ.
‘ಟಗರು ಪಲ್ಯ’ ಸಿನಿಮಾದಲ್ಲಿ ನಾಗಭೂಷಣ ಹಾಗೂ ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ತಾರಾ ಬಳಗವೇ ಜೊತೆಯಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಎಸ್. ಕೆ. ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಸಿನಿಮಾ ಪ್ರಚಾರ ಆರಂಭ ಆಗಿದ್ದು, ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಅಕ್ಟೋಬರ್ 27ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.