ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇದು ಖುಷಿಯ ಸಂಗತಿ ಎನ್ನಬಹುದು. ಈ ಇಬ್ಬರು ನಾಯಕ ನಟರು ಕೆಲವು ವೈಯಕ್ತಿಕ ಕಾರಣಗಳಿಂದ ಆರು ವರ್ಷಗಳ ಹಿಂದೆ ಮುನಿಸಿಕೊಂಡು ದೂರವಾಗಿದ್ದರು. ಎಷ್ಟರ ಮಟ್ಟಿಗೆ ಎಂದರೆ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಪರಸ್ಪರ ಮುಖಾಮುಖಿಯಾಗುತ್ತಿರಲಿಲ್ಲ. ಒಬ್ಬರ ಬಗ್ಗೆ ಮತ್ತೊಬ್ಬರು ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಾಗಲಿ, ಮಾತನಾಡುವುದು ಕೂಡ ಮಾಡುತ್ತಿರಲಿಲ್ಲ. ಆದರೆ ನಿನ್ನೆ ನಡೆದ ಬೆಳವಣಿಗೆ ಇಬ್ಬರ ಸಿನಿವೃತ್ತಿಗೆ, ವೈಯಕ್ತಿಕ ಜೀವನಕ್ಕೆ ಮತ್ತು ಸ್ಯಾಂಡಲ್ ವುಡ್ ಪಾಲಿಗೂ ಉತ್ತಮ ಬೆಳವಣಿಗೆ ಎನ್ನಬಹುದು.
ಇದನ್ನೂ ಓದಿ: ಜಲಪಾತ ದಲ್ಲಿ ಪ್ರಮೋದ್ ರ ಲುಕ್ ರಿವಿಲ್ ಮಾಡಿದ ಸುಪ್ರೀತಾ ಶೆಟ್ಟಿ
ಇತ್ತೀಚಿಗೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಅವರ 60ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮ ಸಂಭ್ರಮದಿಂದ ನಡೆದಿತ್ತು. ಅದರಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಸುಮಲತಾ ಮಧ್ಯಸ್ಥಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಇಬ್ಬರ ಮಧ್ಯೆ ರಾಜಿ ಸಂಧಾನ ನಡೆದಿತ್ತಾ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ: *ನಿಶ್ಚಿತ್ ಕೊರೋಡಿ ನಟನೆಯ ‘Supplier ಶಂಕರ್’ ಸಿನಿಮಾದ ಮೊದಲ ಹಾಡು ಅನಾವರಣ…ತಾಯಿ ಕಳೆದುಕೊಂಡ ಮಗನ ನೋವಿನ ಗೀತೆ ಇದು*
ಸುಮಲತಾ ಅವರೇ ಸಂಧಾನ ಮಾಡಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದ್ದು ಅದಕ್ಕೆ ಪೂರಕವೆಂಬಂತೆ ಪಾರ್ಟಿಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದ ವಿಡಿಯೋಗಳೂ, ಫೋಟೋಗಳು ಇಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ.