ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲ, ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ಈ ಹೆಸರು ಚಿರಪರಿಚಿತ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್. ಹತ್ತಿ ಬಂದ ಏಣಿಯನ್ನು ಮರೆಯಬಾರದು ಎಂಬ ಮಾತಿದೆ.
ಎಷ್ಟೋ ಜನರು ಊಟಕ್ಕೂ ಕಷ್ಟಪಡುವ ಪರಿಸ್ಥಿತಿಯಿಂದ 5 ಸ್ಟಾರ್ ಹೋಟೆಲ್ನಲ್ಲಿ ಊಟ ಮಾಡುವಂತ ಹಂತಕ್ಕೆ ಬಂದಿರುತ್ತಾರೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ ಎಂಬ ಮಾತಿನಂತೆ ಎಷ್ಟೋ ಮಂದಿ ತಾವು ಬೆಳೆದು ಬಂದ ಹಾದಿಯನ್ನು ಮರೆಯುತ್ತಾರೆ. ಕಷ್ಟಪಟ್ಟು ಮೇಲೆ ಬಂದವರು ಎಂದಿಗೂ ಹಳೆಯದನ್ನು ಮರೆಯುವುದಿಲ್ಲ. ಆ ಗುಂಪಿಗೆ ಸೇರಿದವರು ನಟ ದರ್ಶನ್.
ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ದರ್ಶನ್, ಸಿನಿಮಾ ಹೊರತಾಗಿ ಸರಳತೆ ಮತ್ತು ಸೌಮ್ಯ ಸ್ವಭಾವದ ಮೂಲಕ, ಚಿತ್ರಪ್ರಿಯರ ಹೃದಯಗೆದ್ದಿದ್ದಾರೆ. ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾದ ದರ್ಶನ್ ಇಂದು ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದಾರೆ.
ಹಿರಿಯ ನಟ ತೂಗುದೀಪ ಶ್ರೀನಿವಾಸ್ ಕೂಡ ಬಹಳ ಶ್ರಮ ವಹಿಸಿ ಮೇಲೆ ಬಂದವರು. ತಮ್ಮ ಪುತ್ರನಿಗೂ ಸರಳತೆಯನ್ನು ಕಲಿಸಿದರು. ಸಿನಿಮಾಗಳಿಂದ ಮಾತ್ರವಲ್ಲ ತೆರೆ ಹಿಂದೆ ಕೂಡಾ ಡಿ ಬಾಸ್ ಹೀರೋನೆ. ತಮ್ಮ ಸರಳತೆ ಹಾಗೂ ಸಮಾಜ ಸೇವೆ ಗುಣದಿಂದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಾನೊಬ್ಬ ಸ್ಟಾರ್ ಆದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಗುಣದಿಂದಲೇ ದರ್ಶನ್ ಎಲ್ಲರಿಗೂ ಬಹಳ ಇಷ್ಟವಾಗುತ್ತಾರೆ. ತಮ್ಮನ್ನು ಸ್ಟಾರ್ ಪಟ್ಟಕ್ಕೆ ಏರಿಸಿದ ಅಭಿಮಾನಿಗಳನ್ನು ದರ್ಶನ್ ಸ್ನೇಹಿತರಂತೆ ಕಾಣುತ್ತಾರೆ.
ಇತ್ತೀಚೆಗೆ ನಡೆದ D56 ಮುಹೂರ್ತ ಸಮಾರಂಭದಲ್ಲೂ ಅವರು ಎಂತ ಸ್ನೇಹಜೀವಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಎಲ್ಲರೊಂದಿಗೆ ಬೆರೆತು ಯೋಗ ಕ್ಷೇಮ ವಿಚಾರಿಸಿದ್ದಾರೆ. ಪ್ರೀತಿಯಿಂದ ಮಾತನಾಡಿಸಿ ಎಲ್ಲರ ಹೃದಯ ಕದ್ದಿದ್ದಾರೆ. ದರ್ಶನ್ ಎಷ್ಟು ಸಿಂಪಲ್ ಅಲ್ವಾ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.
ತಮ್ಮ ಸರಳತೆ ಮೂಲಕ ಮತ್ತೆ ಅನೇಕ ಹೃದಯಗಳನ್ನು ಕದ್ದಿದ್ದಾರೆ ದರ್ಶನ್.ಸದ್ಯಕ್ಕೆ ದರ್ಶನ್ ತಮ್ಮ ಮುಂದಿನ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಹೊರತುಪಡಿಸಿ ದರ್ಶನ್ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಚೆಗೆ ಅವರು ಪ್ರಾಣಿ-ಪಕ್ಷಿ ದತ್ತು ಸ್ವೀಕಾರಕ್ಕೆ ಕರೆ ನೀಡಿದಾಗ ಅಭಿಮಾನಿಗಳು ಯಾವ ರೀತಿ ಸ್ಪಂದಿಸಿದರು ಎಂಬುದನ್ನು ನಾವು ನೋಡಿದ್ದೇವೆ, ದರ್ಶನ್ ಸಹಾಯ ಮಾಡಿದರೆ ಯಾರಿಗೂ ಹೇಳಿಕೊಳ್ಳಲ್ಲಅದು ಅವರ ದೊಡ್ಡ ಗುಣ . ಸರಳತೆಗೆ ಇನ್ನೊಂದು ಹೆಸರು ಎಂದರೆ ದರ್ಶನ್ ಎನ್ನಬಹುದು.