ಮಂಡ್ಯ: ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಇಂದು ಸುಮಲತಾ ಅಂಬರೀಶ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ. ಈ ವೇಳೆ ನಟ ದರ್ಶನ್ ಸಾಥ್ ನೀಡಿದ್ದಾರೆ.ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ವೇದಿಕೆಯಲ್ಲಿ ಮಾತನಾಡಿದ ಸುಮಲತಾ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮಂಡ್ಯದಿಂದ ಸ್ಪರ್ಧಿಸುತ್ತಿಲ್ಲ. ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಬಂಬಲ ನೀಡುವುದಾಗಿ ಘೋಷಿಸಿದರು. ಜೊತೆಗೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿರುವುದಾಗಿ ಘೋಷಿಸಿದರು.
ಅವರ ಈ ರೀತಿ ಘೋಷಣೆ ಮಾಡುವಾಗ ನಟ ದರ್ಶನ್ ಕೂಡಾ ಪಕ್ಕದಲ್ಲೇ ಇದ್ದರು. ಈ ವೇಳೆ ಅವರ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು. ಇದಕ್ಕೆ ಮೊದಲು ಕೆಲವು ದಿನಗಳ ಮೊದಲು ಮ್ಯಾಟ್ನಿ ಸಿನಿಮಾ ಈವೆಂಟ್ ನಲ್ಲೂ ದರ್ಶನ್ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದರು.
ದರ್ಶನ್ ಕೈ ನೋವಿನಿಂದ ಬಳಲುತ್ತಿದ್ದು ಅವರು ಈಗಾಗಲೇ ಶಸ್ತ್ರಚಿಕಿತ್ಸೆಗೊಳಗಾಗಬೇಕಾಗಿತ್ತು. ಆದರೆ ಇಂದು ಸುಮಲತಾ ಜೊತೆಗಿರಬೇಕು ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆಯನ್ನು ಮುಂದೂಡಿದ್ದಾರೆ.