ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ವಿವಾದಕ್ಕೂ ಬಿಡಲಾರದ ನಂಟು ಅಂತ ಅನಿಸುತ್ತಿದೆ. ಬೇಡ ಅಂದರೂ ಒಂದಲ್ಲ ಒಂದು ವಿವಾದಗಳು ಇವರನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ. ಇತ್ತೀಚೆಗಷ್ಟೇ ಪ್ರಕರಣವೊಂದರಲ್ಲಿ ಪೊಲೀಸರ ಮುಂದ ಹಾಜರಾಗಿ ಬಂದಿದ್ದ ದರ್ಶನ್ ಮತ್ತೊಂದು ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ದರ್ಶನ್ ಇತ್ತೀಚೆಗೆ ಅವರ ಅಭಿಮಾನಿ ಬಳಗ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಅಭಿಷೇಕ್ ಅಂಬರೀಶ್ ಕೂಡ ಭಾಗಿಯಾಗಿದ್ದರು. ಇಷ್ಟೇ ಆಗಿದ್ದರೆ ಎಲ್ಲರೂ ಸುಮ್ಮನಿರುತ್ತಿದ್ದರೋ ಏನೋ. ಆದರೆ, ದರ್ಶನ್ ಅಭಿಮಾನಿಗಳು ನೀಡಿದ ಬೆಳ್ಳಿ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದರು. ಇದೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಜಯನಗರದ 4ನೇ ಬ್ಲಾಕ್‌ನಲ್ಲಿ ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದಕ್ಕೆ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರೂ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ದರ್ಶನ್ ಅಭಿಮಾನಿಯೊಬ್ಬ ಇಬ್ಬರೂ ಬೆಳ್ಳಿಯ ಲಾಂಗ್ ಅನ್ನು ಉಡುಗೊರೆಯಾಗಿ ನೀಡಿದ್ದರು. ದರ್ಶನ್ ಲಾಂಗ್ ಹಿಡಿದು, ಅಭಿಷೇಕ್ ಬೆಳ್ಳಿ ಕಿರೀಟ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದರ್ಶನ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಲಾಂಗ್ ಜೊತೆ ಪೋಸ್ ಕೊಟ್ಟಿದ್ದಕ್ಕೆ ಟೀಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ ರಚಿತಾ ರಾಮ್ ಲಕ್ಕಿ ಚಾರ್ಮ್ ಎಂದ ಶ್ರೀನಗರ ಕಿಟ್ಟಿ , ಯಾಕೆ??
ದರ್ಶನ್ ಮತ್ತೊಂದು ವಿವಾದಕ್ಕೆ ಸಿಕ್ಕಿಕೊಂಡಿದ್ದು, ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅಭಿಮಾನಿಯ ಅತಿಯಾದ ಅಭಿಮಾನ ಈಗ ದರ್ಶನ್‌ರನ್ನು ಸಂಕಷ್ಟಕ್ಕೆ ಸಿಲುಕಿದೆ. ಲಾಂಗ್ ಜೊತೆ ಪೋಸ್ ಕೊಟ್ಟಿದ್ದಕ್ಕೆ ಕೇಸ್ ದಾಖಲಾದರೆ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಕ್ಕಿಕೊಂಡಂತೆಯೇ.. ಕೆಲವು ದಿನಗಳ ಹಿಂದಷ್ಟೇ ದರ್ಶನ್ ಮನೆಯ ನಾಯಿ ಮಹಿಳೆಯನ್ನು ಕಚ್ಚಿತ್ತು. ಈ ಸಂಬಂಧ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ರಾಜರಾಜೇಶ್ವರಿ ಪೊಲೀಸರು ನೀಡಿದ ದೂರಿನ ಮೇರೆಗೆ ದರ್ಶನ್ ವಿಚಾರಣೆಗೆ ಹಾಜರಾಗಿ ಬಂದಿದ್ದರು. ಈಗ ಮತ್ತೆ ಸಾರ್ವಜನಿಕವಾಗಿ ಲಾಂಗ್ ಹಿಡಿದು ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ದರ್ಶನ್ ಸಿನಿಮಾ ವಿಚಾರಕ್ಕೆ ಬರೋದಾದರೇ ಈಗ ‘ಕಾಟೇರ’ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿದ ಈ ಸಿನಿಮಾದ ಪ್ರಚಾರ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಈ ಮಧ್ಯೆ ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಕೂಡ ಸೆಟ್ಟೇರಿದ್ದು, ಅದರ ಶೂಟಿಂಗ್ ಕೂಡ ಆರಂಭ ಆಗಿದೆ.