Sandalwood Leading OnlineMedia

ಬೆಂಗಳೂರಲ್ಲಿ ಪಬ್ ಕೇಸ್: ದುಬೈನಲ್ಲಿ ದರ್ಶನ್ ಬಿಂದಾಸ್ ಫೋಟೋ ಶೂಟ್

ಬೆಂಗಳೂರು: ಇತ್ತೀಚೆಗೆ ಕಾಟೇರ ಸಿನಿಮಾ ಸಕ್ಸಸ್ ಖುಷಿಯಲ್ಲಿ ಬೆಂಗಳೂರಿನ ಪಬ್ ಒಂದರಲ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದ್ದಕ್ಕೆ ನಟ ದರ್ಶನ್ ಮತ್ತು ಸ್ನೇಹಿತರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.ಆದರೆ ಒಂದೆಡೆ ತಮ್ಮ ಮೇಲೆ ಪ್ರಕರಣ ದಾಖಲಾಗಿದ್ದರೆ ದರ್ಶನ್ ಮಾತ್ರ ಇದೀಗ ಕಾಟೇರ ಶೋ ನಿಮಿತ್ತ ದೂರದ ದುಬೈನಲ್ಲಿ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ದುಬೈನಲ್ಲಿ ಕಾಟೇರ ಪ್ರದರ್ಶನಕ್ಕಾಗಿ ದರ್ಶನ್ ಮೊನ್ನೆಯೇ ಇಲ್ಲಿಗೆ ಬಂದಿದ್ದರು. ಅವರನ್ನು ಅಲ್ಲಿನ ಕನ್ನಡಿಗರು ಪ್ರೀತಿಯಿಂದ ಸ್ವಾಗತಿಸಿದ್ದರು. ಅಲ್ಲಿನ ಪ್ರೇಕ್ಷಕರ ಜೊತೆ ಕುಳಿತು ಕಾಟೇರ ಸಿನಿಮಾವನ್ನೂ ವೀಕ್ಷಿಸಿದ್ದರು.
ಈ ನಡುವೆ ದರ್ಶನ್ ದುಬೈನಲ್ಲಿ ಬೋಟಿಂಗ್ ಮಾಡುತ್ತಾ ಫೋಟೋ ಶೂಟ್ ಮಾಡಿಸಿಕೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದರ್ಶನ್ ಸಖತ್ ಸ್ಟೈಲಿಶ್ ಆಗಿ ಪೋಸ್ ನೀಡುವಾಗ ಸುತ್ತಲಿದ್ದವರು ಸಾರಥಿ ಹಾಡು ಪ್ಲೇ ಮಾಡಿ ಚಿಯರ್ ಅಪ್ ಮಾಡಿದ್ದಾರೆ. ಸ್ವಲ್ಪ ಹೊತ್ತು ನಿಂತು ಬೇಸರವಾದಾಗ ಎಷ್ಟು ಹೊತ್ತು ಮಾಡ್ತೀರಿ? ಇಷ್ಟು ಹೊತ್ತು ಇದ್ದಿದ್ದರೆ ಒಂದು ಸಿನಿಮಾ ಮಾಡಿ ಮುಗಿಸುತ್ತಿದ್ದೆ ಎಂದು ಪಕ್ಕದಲ್ಲಿದ್ದವರಿಗೆ ಪ್ರೀತಿಯಿಂದಲೇ ಗದರುತ್ತಾರೆ. ಇತ್ತ ಭಾರತಕ್ಕೆ ಬರುತ್ತಿದ್ದಂತೇ ದರ್ಶನ್ ಗೆ ಪಬ್ ಕೇಸ್ ಸುತ್ತಿಕೊಳ್ಳಲಿದೆ.

Share this post:

Related Posts

To Subscribe to our News Letter.

Translate »