ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್‌ಗೇನು ಕಮ್ಮಿಯಿಲ್ಲ. ಸೂಪರ್‌ಸ್ಟಾರ್‌ಗಳ ನಡುವೆ ಒಂದು ಕಾಂಪಿಟೇಷನ್ ಅಂತೂ ಇದ್ದೇ ಇದೆ. ಅದು ನಿನ್ನೆ ಮೊನ್ನೆಯದ್ದಲ್ಲ. ಹಲವು ದಶಕಗಳಿಂದ ಈ ಸ್ಪರ್ಧೆ ನಡೆಯುತ್ತಲೇ ಬಂದಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಆದರೆ, ಈಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೀರೊಗಳ ಮಧ್ಯೆ ಹಾಗಿಲ್ಲ. ಒಬ್ಬರಿಗೊಬ್ಬರು ಅವರೇ ಸಪೂರ್ಟ್ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಧನ್ವೀರ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಹೀಗೆ ಇವರೆಲ್ಲರೂ ಒಬ್ಬರ ಸಿನಿಮಾಗೆ ಇನ್ನೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ನೋಡೋಕೆ ಸಿಗೋದು ತೀರಾ ಅಪರೂಪ.
ಇದನ್ನೂ ಓದಿ “ಕೋಣ” ಚಿತ್ರದಲ್ಲಿ ಕೋಮಲ್ ಕುಮಾರ್. ಇದು ಕೋಮಲ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ .
ಅದನ್ನೇ ದರ್ಶನ್ ಕೂಡ ಪುನರುಚ್ಚರಿಸಿದ್ದಾರೆ. ತಮ್ಮದೇ ಸ್ಟೈಲ್‌ನಲ್ಲಿ ಯುವನಟರಿಗೆ ಸಲಹೆ ನೀಡಿದ್ದಾರೆ. ಯಾರು ಏನೇ ಹೇಳಿದ್ರೂ ಕೇಳಬೇಡಿ. ಹಿತ್ತಾಳೆ ಕಿವಿ ಮಾಡಿಕೊಳ್ಳಬೇಡಿ ಅಂತ ಯುವ ನಟರಿಗೆ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯುವ ನಟರಿಗೆ ಹೇಳಿದ್ದೇನು? ತಿಳಿಯಲು ಮುಂದೆ ಓದಿ..
ಇದನ್ನೂ ಓದಿ ’ಕ್ಲಾಂತ’ ಮೂಲಕ ಕನ್ನಡಕ್ಕೆ ಬಂದ ವಿಘ್ನೇಶ್..ಭರವಸೆ ಹುಟ್ಟಿಸಿದ ತುಳು ಹೀರೋ..
“ಹಿತ್ತಾಳೆ ಕಿವಿ ಮಾಡಿಕೊಳ್ಳಬೇಡಿ” ಕನ್ನಡ ಚಿತ್ರರಂಗದ ಯುವ ನಟರ ಸಿನಿಮಾಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಅದರಲ್ಲೂ ದರ್ಶನ್ ಜೊತೆ ಗುರುತಿಸಿಕೊಂಡಿರೊ ಧನ್ವೀರ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಸೇರಿದಂತೆ ಹಲವು ನಟರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಯುವ ನಟರು ಕೂಡ ಅಷ್ಟೇ ಆತ್ಮೀಯರಾಗಿದ್ದಾರೆ. ಈ ಕಾರಣಕ್ಕೆ ಒಬ್ಬರನ್ನೊಬ್ಬರು ಬಿಟ್ಟುಕೊಡಬೇಡಿ. ಒಗ್ಗಟ್ಟಾಗಿರಿ ಎಂದು ದರ್ಶನ್ ಸಲಹೆ ನೀಡಿದ್ದಾರೆ. ಪಿನ್ ಇಡೋಕೆ ಬಂದ್ರೆ, ಒಂದು ಕಾಲ್ ಅಷ್ಟೆ ದರ್ಶನ್ ಪರೋಕ್ಷವಾಗಿ ಯಾವುದೋ ಘಟನೆ ಬಗ್ಗೆ ಹೇಳೋಕೆ ಹೊರಟಿದ್ದರು ಅಂತ ಅನಿಸುತ್ತೆ. ಯುವ ನಟರ ಮಧ್ಯೆ ಯಾರೋ ತಂದಿಡೋ ಕೆಲಸಕ್ಕೆ ಮುಂದಾಗಿದ್ದರು ಅಂತ ದರ್ಶನ್ ಮಾತುಗಳಿಂದ ಭಾವವಾಗಿದ್ದರೂ, ಅದನ್ನ ಅವರು ರಿವೀಲ್ ಮಾಡಿಲ್ಲ. “ನಿಮ್ಮೆಲ್ಲರಿಗೂ ಒಂದು ಮಾತು ಹೇಳಿಕೊಡ್ತೀನಿ. ಪ್ಲೀಸ್ ಬೇಜಾರು ಮಾಡಿಕೊಳ್ಳಬೇಡಿ. ದಯವಿಟ್ಟು ಹಿತ್ತಾಳೆ ಕಿವಿ ಮಾಡಿಕೊಳ್ಳಬೇಡಿ. ನಿಮ್ಮ ನಂಬರ್ ಅವರ ಬಳಿ ಇರುತ್ತೆ. ಅವರ ನಂಬರ್ ನಿಮ್ಮ ಬಳಿ ಇರುತ್ತೆ. ಯಾವ ನನ್ ಮಗ ಬಂದು ಪಿನ್ ಇಟ್ಟರೂ ಏನಪ್ಪ ಅಂದೆ.. ಒಂದೇ ಒಂದು ಕಾಲ್.. ಅಲ್ಲಲ್ಲೇ ಆಗಿ ಹೋಗುತ್ತೆ.” ಎಂದು ದರ್ಶನ್ ಹೇಳಿದ್ದಾರೆ.
ಇದನ್ನೂ ಓದಿ ಕುತೂಹಲ ಮೂಡಿಸಿದೆ ಅದಿತಿ ಪ್ರಭುದೇವ – ಪವನ್ ತೇಜ ಅಭಿನಯದ “ಅಲೆಕ್ಸಾ” ಟ್ರೇಲರ್
ಹೀಗೆ ಸಾಥ್ ಕೊಟ್ಟುಕೊಂಡು ಇರಿ ಯುವ ನಟರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ಜೊತೆಯಾಗಿರಿ ಎಂದು ಹೇಳಿದ್ದಾರೆ. “ಇದರ ಮೇಲೆ ಯಾರ ಕಣ್ಣು ಬಿದ್ದರೂ, ಬೀಳದೇ ಇದ್ದರೂ ಒಳ್ಳೆಯದೇ. ಯಾವತ್ತೂ ಹೀಗೆ ಸಾಥ್‌ಗಳನ್ನು ಕೊಟ್ಟುಕೊಂಡು ಹೋದರೆ, ಹೀಗೆ ಒಂದಾಗಿರುತ್ತೇವೆ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ.” ಎಂದು ಹೇಳಿದ್ದಾರೆ. ಚಿಕ್ಕಣ್ಣ ಕಾಲೆಳೆದ ದರ್ಶನ್ ವೇದಿಕೆ ಮೇಲೆ ಚಿಕ್ಕಣ್ಣ ಜೂನಿಯರ್ ಎಂದು ಹೇಳಿಕೊಂಡಿದ್ದರು. ಅದಕ್ಕೆ ದರ್ಶನ್ ನಾನೇ ಜೂನಿಯರ್ ಚಿಕ್ಕಣ್ಣನೇ ಸೀನಿಯರ್ ಎಂದು ಹೇಳಿ ಕಾಲೆಳೆದಿದ್ದಾರೆ. “ಚಿಕ್ಕಣ್ಣ ಜೂನಿಯರ್ ಅಂತ ಹೇಳಿದ್ರು. ನಮ್ಮದು 50 ಸಿನಿಮಾ ಸ್ವಾಮಿ.. ಅವರು 250 ಸಿನಿಮಾ ಮಾಡಿದ್ದಾರೆ. ಈಗ ಜೂನಿಯರ್ ಯಾರು? ಸೀನಿಯರ್ ಯಾರು ಅಂತ ಹೇಳ್ಬೇಕು. ಈಗ ನಾನು ಜೂನಿಯರ್ ಅಲ್ವಾ? ನೀವು ಸೀನಿಯರ್ ಸ್ವಾಮಿ. ನೀವು ಹಾಕಿದ ದಾರಿಯಲ್ಲಿ ನಾವು ನಡೀತಿದ್ದೀವಿ.” ಎಂದು ದರ್ಶನ್ ಉಪಾಧ್ಯಕ್ಷ ಚಿಕ್ಕಣ್ಣ ಕಾಲೆಳೆದಿದ್ದಾರೆ.