ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟು ಕ್ರೇಜ್ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಪ್ರಾಣಿಯ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದ ಒಂದು ಸಂಗತಿ ಇದೆ. ಅದನ್ನ ಇಲ್ಲಿ ಹೇಳ್ತೀವಿ ಕೇಳಿ. ದರ್ಶನ್ ಅವರು ತಮಗೆ ಅಂತ ಅಪ್ಪ ಕೊಡುತ್ತಿದ್ದ ಹಣದಲ್ಲಿ ತಿನ್ನುವುದನ್ನು ಬಿಟ್ಟು ಪ್ರಾಣಿಗಳಿಗೆ ಮೇವು ತರುತ್ತಿದ್ದರಂತೆ. ಅಷ್ಟೆ ಅಲ್ಲ ತಮ್ಮ ಮತ್ತು ಅಕ್ಕನ ಬಳಿ ಹೋಗಿ, ತಿಂಡಿ ತಿಂದು ಉಳಿದ ಹಣವನ್ನು ಕೊಡಿ, ಪ್ರಾಣಿಗೆ ಆಹಾರ ತಂದರೆ ನಿಮಗೂ ಪುಣ್ಯ ಬರುತ್ತದೆ ಅಂತ ಹೇಳಿ ಉಳಿದ ಹಣವನ್ನು ತೆಗೆದುಕೊಂಡು ಬರ್ತಾ ಇದ್ರಂತೆ.
ಬೀದಿಯಲ್ಲಿ ಯಾವುದಾದರೂ ಮೋರಿಯ ಕೆಳಗೆ ಒಂದು ನಾಯಿ ಮರಿ ಹಾಕಿದೆ ಎಂದರೆ ಸಾಕು ಅದನ್ನ ಮನೆಗೆ ತಂದು ಆರೈಕೆ ಮಾಡ್ತಾ ಇದ್ರಂತೆ. ಅದಕ್ಕೆ ಹಾಲಿಲ್ಲ ಅಂದ್ರೆ, ಅಮ್ಮ ದರ್ಶನ್ ಅವರಿಗೆ ಕೊಟ್ಟ ಹಾಲಲ್ಲಿ ಅರ್ಧ ಕುಡಿದು ಇನ್ನರ್ಧ ಆ ನಾಯಿ ಮರಿಗೆ ಕೊಡುತ್ತಿದ್ದರಂತೆ. ಆಗಿನಿಂದಲೇ ದರ್ಶನ್ ಅವರ ಪ್ರಾಣಿ ಪ್ರೀತಿ ಎಕ್ಸ್‌ಟ್ರೀಂ ಲೆವೆಲ್‌ನಲ್ಲಿ ಇತ್ತಂತೆ.
ಅಷ್ಟೇ ಅಲ್ಲ ಒಮ್ಮೆ ಒಂದು ಕುದುರೆಗಾಗಿ ಕಳ್ಳತನಕ್ಕೂ ಇಳಿದಿದ್ದರಂತೆ. ದರ್ಶನ್ ಎಲ್ಲಿ, ಕಳ್ಳತನ ಎಲ್ಲಿ. ಏನಪ್ಪಾ ಇದು ಅಂದೊಂಡ್ರಾ, ಹೌದು, ದರ್ಶನ್ ಒಂದು ಕುದುರೆ ಮರಿಯನ್ನು ಕಂಡು ಅದು ಬೇಕೇ ಬೇಕೆಂದು ಅದನ್ನು ಕದಿಯಲು ಸ್ಕೆಚ್ ಹಾಕಿ ಎಕ್ಸಿಕ್ಯೂಟ್ ಮಾಡಲು ಸಹ ಮುಂದಾಗಿದ್ದರು. ಅದೊಂದು ದಿನ ಕಿಟಕಿಯಿಂದ ಹೊರಗೆ ನೋಡುತ್ತಿದ್ದ ದರ್ಶನ್‌ಗೆ ಕೆಳಗೆ ಲಾಯದಲ್ಲಿ ಕಟ್ಟಿದ್ದ ಕುದುರೆಯೊಂದು ಮರಿ ಹಾಕಿರುವುದು ಕಂಡಿತು. ಆ ಮರಿಯನ್ನು ನೋಡಿ- ದ ದರ್ಶನ್‌ರಿಗೆ ಅದು ಬೇಕೇಬೇಕೆಂಬ ಹಠ, ಅಲ್ಲಿಂದ ಶುರುವಾಯ್ತು ಅದನ್ನ ಹೇಗೆ ತೆಗೆದುಕೊಂಡು ಹೋಗೋದು ಎಂಬ ಪ್ಲಾನ್, ಆಗ ಹೊಳೆದ ಐಡಿಯಾ ಕುದುರೆ ಮರಿ ಕದಿಯೋದು. ಸರಿ, ಒಬ್ಬರೆ ಮಾಡಲಾಗದ ಕೆಲಸ ಅದು, ಇವರ ಪಾರ್ಟ್ನರ್ ಇನ್ ಕ್ರೈಂ ಆದವರು ತಮ್ಮ ದಿನಕರ್ ಮತ್ತು ಕೆಲವು ಗೆಳೆಯರು. ಗ್ಯಾಂಗ್ ಹೊರಟಿದ್ದು ಕುದುರೆ ಲಾಯಕ್ಕೆ, ಇನ್ನೇನು ಕುದುರೆ ಮರಿ ಕದೀಬೇಕು ಕುದುರೆ ದರ್ಶನ್‌ರಿಗೆ ಝಾಡಿಸಿ ಹೊಟ್ಟೆಯ ಭಾಗಕ್ಕೆ ಜೋರಾಗಿ ಒದ್ದಿತು. ಅದನ್ನು ಕಂಡ ಗೆಳೆಯರು ಅಲ್ಲಿಂದ ಕಾಲ್ಕಿತ್ತರು. ಆದರೆ ತಮ್ಮ ದಿನಕರ್ ಅಸಹಾಯಕರಾಗಿ ಅಲ್ಲೇ ನಿಂತಿದ್ದರು. ಅದ್ಯಾಕೆ ಅವರು ಹೆಲ್ಸ್ ಮಾಡ್ಲಿಲ್ಲ ಅಂದ್ಯೋಬೇಡಿ, ಪಾಪ ಹೆಲ್ಸ್ ಮಾಡೋ ವಯಸ್ಸು ದಿನಕರ್‌ರದ್ದಾಗಿರಲ್ಲ. ಆಗ ದಿನಕರ್ ಒಂದನೇ ತರಗತಿ ಓದುತ್ತಿದ್ದರು ಮತ್ತು ದರ್ಶನ್ ಮೂರನೇ ತರಗತಿಯಲ್ಲಿದ್ದರು.
ಅಣ್ಣನ ಸ್ಥಿತಿ ನೋಡಿ ಅಳುತ್ತಾ ನಿಂತ ದಿನಕರ್‌ರನ್ನ ಸಮಾಧಾನ ಮಾಡಿದ ದರ್ಶನ್ ದಿನಕರ್‌ರನ್ನು ಕರೆದುಕೊಂಡು ಮನೆ ತಲುಪಿದರು. ಅಷ್ಟು ಹೊತ್ತಿಗಾಗಲೇ ಇವರು ಶಾಲೆಗೆ ಹೋಗಿಲ್ಲ ಎಂಬ ಸುದ್ದಿ ದಿವ್ಯಾರಿಂದ ತೂಗುದೀಪ ಶ್ರೀನಿವಾಸ್‌ರಿಗೆ ತಿಳಿದಿತ್ತು. ಕೋಪ ಕೆಂಡಾಮಂಡಲವಾಗಿತ್ತು. ಬಂದ ಮೇಲೆ ದರ್ಶನ್‌ರನ್ನು ಕುರ್ಚಿಗೆ ಬಿಗಿದು, ತಂದೆ ತೋರಿಸಿದ ಬೆಲ್ಲಿನ ರುಚಿ ಇಂದಿಗೂ ದರ್ಶನ್ ತಾಯಿಯ ಕಣ್ಣಂಚಲ್ಲಿ ನೀರು ತರಿಸುತ್ತದೆ. ಆದರೆ ಅಂದು ಶ್ರೀನಿವಾಸ್‌ರ ಹೊಡೆತದಲ್ಲಿದ್ದದ್ದು ಮಗ ದಾರಿ ತಪ್ಪಬಾರದೆಂಬ ಕಳಕಳಿಯಷ್ಟೇ. ಆದರೆ ದರ್ಶನ್ ಪ್ರಾಣಿ ಪ್ರೀತಿಯ ಅತಿರೇಕವೆಂದರೆ ಮರು ದಿನ ಮತ್ತೆ ಆ ಕುದುರೆ ಕೈತಪ್ಪಬಾರದೆಂಬ ಚಿಂತೆ ಬಂದಿತಾದರೂ ಬೆಲ್ಲಿನ ರುಚಿ ಅದನ್ನು ಎಲ್ಲೋ ಮರೆಮಾಚಿಸಿತಾದರೂ ಆ ಹಂಬಲ ಇಂದು 32 ಕುದುರೆಗಳ ಸರದಾರನನ್ನಾಗಿಸಿದೆ.