ನೋಡೋಕೆ ಆರಡಿ ಕಟೌಟು. ಎತ್ತ ಕಡೆಯಿಂದ ನೋಡಿದರು ಹುಡುಗಿಯರು ಫಿದಾ ಆಗೋದಂತೂ ನಿಜ. ಯಾಕಂದ್ರೆ ಇವರ ಎತ್ತರವೇ ಆ ರೀತಿ ಇದೆ. ನೋಡುಗರನ್ನ ಒಂದೇ ಸಾರಿ ಕಣ್ಮನ ಸೆಳೆಯುವಂತೆ ಮಾಡುತ್ತೆ. ಇವರಿಗೆ ಅಭಿಮಾನಿಗಳು ಒಬ್ಬರ, ಇಬ್ಬರ ಕೋಟ್ಯಾಂತರ ಜನರಿದ್ದಾರೆ. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ, ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಮಾಡಿರುವ ಎಷ್ಟೋ ಚಿತ್ರಗಳು ನೂರು ದಿನ ಓಡಿವೆ.
ದರ್ಶನ್ ಬಣ್ಣದ ಲೋಕದ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಚಿತ್ರರಂಗದಲ್ಲಿ ಏನಾದರೂ ಸಾಧಿಬೇಕು ಎನ್ನುವ ಹಠ, ಛಲ ಅವರನ್ನು ಇಂದು ಈ ಸ್ಥಾನದಲ್ಲಿ ನಿಲ್ಲಿಸಿದೆ. 25 ವರ್ಷಗಳನ್ನು ಪೂರೈಸಿರುವ ಈ ಶುಭ ಸಂದರ್ಭದಲ್ಲಿ ದರ್ಶನ್ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಚಾಲೆಂಜಿಂಗ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ.
ಲೈಟ್ ಬಾಯ್ ಆಗಿ ಕೆಲಸ ಪ್ರಾರಂಭ ಮಾಡಿದ್ದ ದರ್ಶನ್ ಬಳಿಕ ಕಿರುತೆರೆಯಲ್ಲಿ ಬಣ್ಣ ಹಚ್ಚಲು ಪ್ರಾರಂಭಿಸಿದರು.ಆನಂತರ ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ ‘ಮೆಜೆಸ್ಟಿಕ್’ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು.
ದರ್ಶನ್ ಅವರಿಗೆ ಮೆಜೆಸ್ಟಿಕ್ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ ತಡ, ತನ್ನೆಲ್ಲಾ ಪ್ರತಿಭೆಯನ್ನ ಹೊರ ಹಾಕಬೇಕೆಂದು ನಿರ್ಧರಿಸಿದ್ದರು. ತನ್ನ ನೋವು, ನಲಿವುಗಳೆನ್ನೆಲ್ಲಾ ಬದಿಗಿಟ್ಟು, ಈ ಸಿನಿಮಾದಲ್ಲಿ ನಟಿಸಿದ್ರು. ಇವರಿಗೆ ಕೈ ಹಿಡಿದಿದ್ದೆ ಈ ಸಿನಿಮಾ. ಅಂದ್ರೆ ಇವರು ಮೊದಲ ಬಾರಿ ನಟಿಸಿದ ಚಿತ್ರವೇ, ಎಲ್ಲರ ಮನೆ, ಮನ ಗೆದ್ದಿತ್ತು. ಯಾಕಂದ್ರೆ ದರ್ಶನ್ ಚಿತ್ರದಲ್ಲಿ ಆ ರೀತಿ ನಟಿಸಿದ್ದರು. ನೋಡುಗರಿಗೆ ಒಂದೇ ಕ್ಷಣದಲ್ಲಿ ಅನಿಸಿತ್ತು. ಎಂತ ನಟನಯ್ಯ ಇವರು ಅಂತ. ಇದೆ ರೀತಿ ಚಂದನವನದಲ್ಲಿ ತಮ್ಮ ಕೆರಿಯರ್ ನ ಶುರು ಮಾಡಿದ್ರು.
ಬಳಿಕ ಪ್ರೇಮ್ ನಿರ್ದೇಶನದಲ್ಲಿ ಬಂದ ಕರಿಯಾ ಸಿನಿಮಾ ಮತ್ತೊಂದು ದೊಡ್ಡ ಸಕ್ಸಸ್ ತಂದು ಕೊಟ್ಟಿತು. ದರ್ಶನ್ ಜೀವನದಲ್ಲಿ ಅತಿ ಹೆಚ್ಚು ಬಾರಿ ರಿ-ರಿಲೀಸ್ ಆದ ಸಿನಿಮಾ ಅಂದರೆ ಕರಿಯಾ. ಸಾಕಷ್ಟು ಏಳು-ಬೀಳುಗಳ ನಡುವೆ ದರ್ಶನ್ ಇಂದು ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ.
ನಟ ದರ್ಶನ್ 55 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಹೆಚ್ಚು ಜನಪ್ರಿಯ ಚಲನಚಿತ್ರಗಳಾದ ಕರಿಯಾ , ನನ್ನ ಪ್ರೀತಿಯ ರಾಮು , ಕಲಾಸಿಪಾಳ್ಯ , ಗಜ, ಸಾರಥಿ. ಸಂಗೊಳ್ಳಿ ರಾಯಣ್ಣ ಬುಲ್ ಬುಲ್, ಅನೇಕ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದ ಯಶಸ್ಸಿನಿಂದ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ದರ್ಶನ್ ಅಭಿನಯದ ಕ್ರಾಂತಿ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದ್ದು, ಅಭಿಮಾನಿಗಳೆಲ್ಲ ಕ್ರಾಂತಿಚಿತ್ರದ ರಿಲೀಸ್ಗೆ ಕಾಯುತ್ತಿದ್ದಾರೆ.
ಕೇವಲ ನಟನಾಗಿ ಮಾತ್ರವಲ್ಲದೇ ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲೂ ತೊಡಗಿಕೊಂಡವರು. 2006ರಲ್ಲಿ ತೂಗುದೀಪ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ದರ್ಶನ್ರನ್ನು ಸಕಲಕಲಾ ವಲ್ಲಭ ಎಂದರೆ ತಪ್ಪಾಗಲಾರದು. ಚಿತ್ರಗಳಲ್ಲಿ ಪೋಷಕ ಪಾತ್ರ, ಖಳನಾಯಕ, ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಜಾದಿನಗಳಲ್ಲಿ ಮೈಸೂರಿನ ಮೃಗಾಲಯಕ್ಕೆ ಹೋಗುತ್ತಿದ್ದ ದರ್ಶನ್‌ಗೆ ಅಲ್ಲಿನ ನಿರ್ವಾಹಕ ಪುಂಡಲೀಕರು ಒಂದು ಹುಲಿಯನ್ನು ನೋಡಿಕೊಳ್ಳಲು ಕೊಡುತ್ತಿದ್ದರು.ಅಲ್ಲಿಂದಲೇ ಪ್ರಾಣಿಗಳ ಮೇಲೆ ನಂಟು ಮತ್ತು ಪ್ರಾಣಿಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದರು.ಈಗಲೂ ಮೈಸೂರಿನ ಮೃಗಾಲಯದಲ್ಲಿನ ಹಲವು ಪ್ರಾಣಿಗಳನ್ನು ದತ್ತು ತೆಗೆದು ಕೊಂಡಿದ್ದಾರೆ.
ಮೈಸೂರಿನ ಟಿ.ನರಸೀಪುರದ ಹತ್ತಿರ ಒಂದು ಮಿನಿ ಫಾರ್ಮ್ ಹೌಸ್ ಹೊಂದಿರುವ ದರ್ಶನ್ ಅಲ್ಲಿ ಕುದರೆ,ಹಸು ಸೇರಿದಂತೆ ಮುಂತಾದ ಸುಮಾರು 120 ಕ್ಕೂ ಹೆಚ್ಚು ಪ್ರಾಣಿಗಳನ್ನು ಸಾಕಿದ್ದಾರೆ. ಸಂಗೊಳ್ಳಿ ರಾಯಣ್ಣ ,ಸಾರಥಿ ಮುಂತಾದ ಚಿತ್ರಗಳಲ್ಲಿ ತಮ್ಮ ಫಾರ್ಮ್‌ನ ಸಾಕು ಕುದುರೆ `ಬಾದಲ್’ ಮೇಲೆ ಸವಾರಿ ಮಾಡಿದ್ದು ವಿಶೇಷ. ದರ್ಶನ್‌ರ ವಿಶೇಷ ಪ್ರೀತಿಪಾತ್ರ ಕುದುರೆ `ಸ್ಟಾನ್‌ಲೀ’ ಪಾಂಡಿಚೆರಿಯಲ್ಲಿ ಮಡಿದಾಗ ಅಪಾರವಾಗಿ ನೊಂದಿದ್ದ ದರ್ಶನ್ ಅದರ ಚಿತ್ರವನ್ನು ತಮ್ಮ ಬಲತೋಳಲ್ಲಿ ಹಾಕಿಸಿಕೊಂಡಿದ್ದರು. 2018 ರಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.