ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯ ವಿಡಂಬನಾತ್ಮಕ ಕಥಾಹಂದರ ಹೊಂದಿರುವ ಚಿತ್ರ ದರ್ಬಾರ್. ಸತೀಶ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ಬಹಳ ಸಮಯದ ಬಳಿಕ ವಿ.ಮನೋಹರ್ ನಿರ್ದೇಶನ ಮಾಡಿದ್ದಾರೆ. ಈಚೆಗೆ ನಡೆದ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ಹಾಡಿರುವ ಚುನಾವಣೆ ವಿಶ್ಲೇಷಣೆ ಮಾಡುವ ಹಾಡನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ.ಹರೀಶ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಬಹಳ ಸಮಯ ಚಿತ್ರ ನಿರ್ದೇಶನ ಸಾಧ್ಯವಾಗಿರಲಿಲ್ಲ. ಹಾಡು ಬರೆಯುವ ಪ್ರಯತ್ನದಲ್ಲಿ ಈ ಅವಕಾಶ ನನಗೆ ಸಿಕ್ಕಿದೆ ಎಂದರು ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್. ಈ ಸಂದರ್ಭದಲ್ಲಿ ಹಾಡುಗಳ ವಿಶೇಷತೆಗಳ ಬಗ್ಗೆ ಮುಖ್ಯ ಪಾತ್ರ ನಿರ್ವಹಿಸಿರುವ ನಟ ಸತೀಶ್ ವಿವರ ನೀಡಿದರು. ಉಪೇಂದ್ರ ಅವರ ಹಾಡಂತೂ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿದರು.
Pentagon’ Kannada Movie Review : ಪಂಚ ಕಥೆಗಳ ಪವರ್‌ಫುಲ್ ಪಂಚ್!`
ಸೈಕಾಲಾಜಿ ವಿದ್ಯಾರ್ಥಿ ಪಾತ್ರ ನನ್ನದು ಎಂದವರು ನಟಿ ಜಾಹ್ನವಿ. ರಜಾ ದಿನಗಳಲ್ಲಿ ಊರಿಗೆ ಬಂದಾಗ ಪ್ರೇಮದ ಸಿಲುಕುವ ಪಾತ್ರ. ಇದು ಮುಂದೆ ಸಾಧನೆಗೆ ಪ್ರೇರಣೆ ಹೇಗೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬೇಕು ಎಂದರು. ಆಡಿಯೋ ಹಕ್ಕು ಪಡೆದಿರುವ ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ, ಛಾಯಾಗ್ರಾಹಕ ಸಾಮ್ರಾಟ್ ಎಸ್. ಚಿತ್ರದ ಬಗ್ಗೆ ವಿವರಗಳನ್ನು ನೀಡಿದರು.ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧುಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ವಿವರಗಳು ಬಂದವು. ಈ ಚಿತ್ರವನ್ನು ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಸತೀಶ್ ಅವರ ಪತ್ನಿ ಬಿ.ಎನ್. ಶಿಲ್ಪ ನಿರ್ಮಾಣ ಮಾಡಿದ್ದು, ಮಾಸ್ ಮಾದ, ವಿನೋದ್ ಸಾರಥ್ಯದ ಮೂರು ಸಾಹಸ ದೃಶ್ಯಗಳು ವಿಶೇಷವಾಗಿವೆ. ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ ಚಿತ್ರೀಕರಣ ನಡೆದಿದೆ ಎಂಬ ಮಾಹಿತಿಯೂ ಬಂತು. ಇನ್ನು `ದರ್ಬಾರ್’ ಚಿತ್ರದ ಹಾಡುಗಳನ್ನು ಸಿರಿ ಮ್ಯೂಸಿಕ್‌ನಲ್ಲಿ ರಿಲೀಸ್ ಆಗಿದ್ದು, ಕಾರ್ಯಕ್ರಮದಲ್ಲಿ ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ ಹಾಜರಿದ್ದು ಚಿತ್ರತಂಡಕ್ಕೆ ಶುಭಕೋರಿದರು.