ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರ ಬಿಡುಗಡೆಯಾಗಿ ಒಂದು ವಾರ ಪೂರೈಸಿದೆ. ಹೌದು, ಕಳೆದ ಗುರುವಾರ ಗಣರಾಜ್ಯೋತ್ಸವದ ಪ್ರಯುಕ್ತ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಕ್ರಾಂತಿ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಿತ್ತು. ಬರೋಬ್ಬರಿ 22 ತಿಂಗಳುಗಳ ಬಳಿಕ ಬಿಡುಗಡೆಯಾದ ತಮ್ಮ ನೆಚ್ಚಿನ ನಟನ ಚಿತ್ರವನ್ನು ಬೆಳ್ಳಿತೆರೆ ಮೇಲೆ ವೀಕ್ಷಿಸಲು ದರ್ಶನ್ ಅಭಿಮಾನಿಗಳು ಮುಗಿಬಿದ್ದಿದ್ದರು. ದೊಡ್ಡ ಮಟ್ಟದ ಕ್ರೇಜ್ ಅನ್ನು ಹುಟ್ಟುಹಾಕಿದ್ದ ಕ್ರಾಂತಿ ಚಿತ್ರ ಮುಂಗಡ ಬುಕಿಂಗ್‌ನಿಂದಲೇ 5 ಕೋಟಿ ರೂಪಾಯಿಗಳನ್ನು ಸಂಪಾದಿಸಿತ್ತು. ಈ ಕಲೆಕ್ಷನ್ ಸೇರಿದಂತೆ ಮೊದಲ ದಿನ ಕ್ರಾಂತಿ 12.85 ಕೋಟಿ ರೂಪಾಯಿಗಳನ್ನು ಗಳಿಸಿತು. ಹೀಗೆ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿ ದೊಡ್ಡ ಓಪನಿಂಗ್ ಅನ್ನೇ ಪಡೆದುಕೊಂಡ ಕ್ರಾಂತಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಒಳ್ಳೆಯ ಬುಕಿಂಗ್ ಪಡೆದುಕೊಳ್ಳುತ್ತಿದೆ ಎಂದು ಚಿತ್ರದ ನಿರ್ಮಾಪಕಿಯಾದ ಶೈಲಜಾ ನಾಗ್, ನಿರ್ದೇಶಕ ವಿ ಹರಿಕೃಷ್ಣ ಹಾಗೂ ನಟಿ ರಚಿತಾ ರಾಮ್ ಸಾಲು ಸಾಲು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಆದರೆ ದರ್ಶನ್ ಅವರು ಕ್ರಾಂತಿ ಬಿಡುಗಡೆಯಾದ ನಂತರ ಚಿತ್ರದ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಳ್ಳದೇ ಇರುವುದಕ್ಕೆ ಬಲವಾದ ಕಾರಣವೂ ಸಹ ಇದೆ.
ಗಮನಸೆಳೆಯುತ್ತಿದೆ ವಿಭಿನ್ನವಾಗಿ ರಿಲೀಸ್ ಆದ `ರೂಪಾಯಿ’ ಚಿತ್ರದ ಟ್ರೇಲರ್
ದರ್ಶನ್ ಕ್ರಾಂತಿ ಚಿತ್ರ ಬಿಡುಗಡೆಯಾದ ದಿನ ಚಿತ್ರದ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಚಿತ್ರ ಚೆನ್ನಾಗಿ ಪ್ರದರ್ಶನವಾಗುತ್ತಿದೆ ಬಂದು ನೋಡಿ ಎಂದು ಯಾವುದೇ ಪೋಸ್ಟ್‌ಗಳನ್ನೂ ಸಹ ಹಾಕಿಲ್ಲ. ಬಿಡುಗಡೆಗೂ ಮುನ್ನ ಸಾಲು ಸಾಲು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ದರ್ಶನ್ ಚಿತ್ರ ಬಿಡುಗಡೆಯಾದ ನಂತರ ಸೈಲೆಂಟ್ ಆಗಿದ್ದೇಕೆ ಎಂಬ ಪ್ರಶ್ನೆ ಹುಟ್ಟಿದೆ. ಈ ಪ್ರಶ್ನೆಯ ಜತೆ ದರ್ಶನ್ ಬೇಸರಕ್ಕೊಳಗಾಗಿ ಈ ರೀತಿ ಸೈಲೆಂಟ್ ಆಗಿದ್ದಾರಾ ಎಂಬ ಅನುಮಾನವೂ ಸಹ ಉಂಟಾಗಿತ್ತು. ಆದರೆ ದರ್ಶನ್ ಈ ಪ್ರಶ್ನೆ ಹಾಗೂ ಅನುಮಾನಗಳಿಗೆಲ್ಲಾ ಚಿತ್ರ ಬಿಡುಗಡೆಯಾಗುವ ಮುನ್ನವೇ ಉತ್ತರ ನೀಡಿದ್ದರು.
‘ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಸದ್ಯ ದರ್ಶನ್ ಅವರು ಕ್ರಾಂತಿ ಬಿಡುಗಡೆಯಾದ ಬಳಿಕ ಸೈಲೆಂಟ್ ಆಗಲು ಕಾರಣವೇನೆಂಬುದನ್ನು ಈ ಹಿಂದೆ ಅವರೇ ಹೇಳಿದ್ದರು. ಕ್ರಾಂತಿ ನಮ್ಮ ಸಿನಿಮಾವಲ್ಲ, ಇದು ನನ್ನ ಸೆಲೆಬ್ರಿಟಿಗಳ ಸಿನಿಮಾ, ಇದನ್ನು ಅವರ ಕೈಗೆ ಕೊಡುತ್ತಿದ್ದೇನೆ, ಇನ್ನುಮುಂದೆ ಅವರೇ ನೋಡಿಕೊಳ್ಳುತ್ತಾರೆ ಎಂದಿದ್ದರು. ಹಾಗಾಗಿಯೇ ಬಿಡುಗಡೆಯಾದ ಮೇಲೆ ದರ್ಶನ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಮಾಡಿದ ಚಿತ್ರವನ್ನು ಅವರಿಗೆ ನೀಡಿದ ಮೇಲೆ ದರ್ಶನ್ ಸೈಲೆಂಟ್ ಆಗಿದ್ದಾರೆ.