ಚಾಲೆಂಜಿಂಗ್ ಸ್ಟಾರ್ ದರ್ಶನ್ ರೀಲ್ ನಲ್ಲಷ್ಟೇ ಅಲ್ಲ..ರಿಯಲ್ ಲೈಫ್ ನಲ್ಲಿಯೂ ಸಹ ತನ್ನವರಿಗೆ ಬಲವಾಗಿ ನಿಲ್ಲುವ ನಾಯಕ. ತಾನು ಬೆಳೆದು ತನ್ನವರನ್ನು ಬೆಳೆಸುವ ಡಿಬಾಸ್ ಗುಣ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಸಿನಿಮಾ, ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮಿಸ್ಟರ್.ಐರಾವತ ಆತ್ಮೀಯ ಗೆಳೆಯನ ಹೊಸ ಹೆಜ್ಜೆಗೆ ಸಾಥ್ ಕೊಟ್ಟಿದ್ದಾರೆ. ಡಿ ಪಡೆಯಲ್ಲಿ ಗುರುತಿಸಿಕೊಂಡಿರುವ ಗೆಳೆಯ ವಿ.ವಿನಯ್ ಎಂಬುವವರು ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಆ ನಿರ್ಮಾಣ ಸಂಸ್ಥೆ ಅನಾವರಣ ಮಾಡಿ ಡಿಬಾಸ್ ಗೆಳೆಯನ ಕನಸಿಗೆ ಸಾಥ್ ಕೊಟ್ಟಿದ್ದಾರೆ.
‘ಮತ್ತೆ ಮದುವೆ’ ಅಂಗಳದಿಂದ ಬಂತು `ಉರುಳೋ ಕಾಲವೇ’ ಮೊದಲ ಸಾಂಗ್
ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಹಂಚಿಕೊಂಡು ಡಿಬಾಸ್ ಸ್ನೇಹಿತರಾದ ವಿನಯ್.ವಿ, ಇದು ಬಹಳ ದಿನಗಳ ಕನಸ್ಸು. ವಿಭಿನ್ನ ಆಗಿ ಏನಾದರೂ ಮಾಡಬೇಕು ಎಂಬ ಹಂಬಲ ಇಟ್ಟುಕೊಂಡು ಹೊಸ ಹೆಜ್ಜೆ ಇಟ್ಟಿದ್ದೇನೆ. ಅದೇ ರೀತಿ ಪ್ರಯತ್ನ ಮಾಡುತ್ತಿದ್ದೇವೆ. ಕೆಲ ದಿನಗಳಲ್ಲಿ ಈ ಬಗ್ಗೆ ಹೊಸ ಅಪ್ ಡೇಟ್ ಕೊಡುತ್ತೇವೆ. ವಿರೌಡ್ ಅನ್ನೋದು ನನ್ನ ನಿರ್ಮಾಣ ಸಂಸ್ಥೆ ಹೆಸರು. ವಿ ಅಂದರೆ ವಿನಯ್. ರೌಡ್ ಅಂದರೆ ಸ್ಪ್ಯಾನಿಶ್ ಭಾಷೆಯಲ್ಲಿ ಐರಾನ್ ಎಂದು. ನಾವು ಏನೇ ಮಾಡಿದರು ದರ್ಶನ್ ಸರ್ ಬೆಂಬಲ ಇದೆ. ಎಲೆಕ್ಷನ್ ನಲ್ಲಿ ಬ್ಯುಸಿ ಇದ್ದರು ಅವರು ನನ್ನ ನಿರ್ಮಾಣ ಸಂಸ್ಥೆ ಅನಾವರಣ ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡರು.
`PS-2 Movie’ Press Meet Exclusive Photos
ವಿನಯ್ ಬಿಡದಿ ಬಳಿಕ ತಮ್ಮದೇ ಹೆಸರಿನಡಿ ‘ವಿರೌಡ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಇವರಿಗೆ ಸಿನಿಮಾ ಮೇಲೆ ಅಪಾರ ಒಲವು ಅವರನ್ನು ಈ ಕೆಲಸಕ್ಕೆ ಅಣಿಗೊಳಿಸಿದೆ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ಮಿಸುವ ಹಂಬಲ ಹೊಂದಿರುವ ವಿನಯ್, ಹತ್ತು ಸಿನಿಮಾ ಮಾಡುವ ಬದಲು ಒಂದೊಳ್ಳೆ ಕಂಟೆಂಟ್ ಹಾಗೂ ಎಂಟರ್ಟೈನ್ಮೆಂಟ್ ಚಿತ್ರ ನಿರ್ಮಿಸುವ ಕನಸ್ಸು ಕಟ್ಟಿಕೊಂಡಿದ್ದಾರೆ. ಅದರಂತೆ ವಿರೌಡ್ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರ ನಿರ್ಮಾಣ ತಯಾರಿ ನಡೆಯುತ್ತಿದ್ದು, ವಿನಯ್ ಆಪ್ತ ಗೆಳೆಯರೊಬ್ಬರು ನಿರ್ದೇಶನ ಮಾಡಲಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿರು ಅವರು ಕನ್ನಡ ಸಿನಿಮಾ ಮೂಲಕ ನಿರ್ದೇಶಕನಾಗಿ ಚೊಚ್ಚಲ ಹೆಜ್ಜೆ ಇಡ್ತಿದ್ದಾರೆ. ಶೀಘ್ರದಲ್ಲಿಯೇ ಈ ಬಗ್ಗೆ ಅಪ್ ಡೇಟ್ ನೀಡುವುದಾಗಿ ವಿರೌಡ್ ಸಂಸ್ಥಾಪಕ ವಿನಯ್ ತಿಳಿಸಿದ್ದಾರೆ.