Sandalwood Leading OnlineMedia

‘ಕುಬೇರ’ನಾದ ಧನುಷ್….ಶಿವರಾತ್ರಿಗೆ ಫಸ್ಟ್ ಲುಕ್ ಟೀಸರ್ ರಿಲೀಸ್

ರಾಷ್ಟ್ರಪ್ರಶಸ್ತಿ ವಿಜೇತ ಧನುಷ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಕುಬೇರ ಎಂಬ ಟೈಟಲ್ ಇಡಲಾಗಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದೆ ಚಿತ್ರತಂಡ.

ಕುಬೇರನ ಫಸ್ಟ್ ಲುಕ್ನಲ್ಲಿ ಧನುಷ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಗುರುತಿಸದಷ್ಟು ಬದಲಾಗಿದ್ದಾರೆ. ಶಿವ ಭಿಕ್ಷೆ ಬೇಡುತ್ತಿರುವ ಚಿತ್ರದ ಮುಂದೆ ಧನುಶ್ ನಿಂತಿರುವ ದೃಶ್ಯವನ್ನು ಟೀಸರ್ನಲ್ಲಿ ತೋರಿಸಲಾಗಿದೆ. ‘ಕುಬೇರ’ ಸಂಪತ್ತಿನ ದೇವರು. ಆದರೆ ಪೋಸ್ಟರ್ನಲ್ಲಿ ಧನುಷ್ ಬಡವನಂತೆ ಕಾಣಿಸಿಕೊಂಡಿರುವುದನ್ನು ನೋಡಬಹುದು. ಆತನ ಬಟ್ಟೆ ಕೂಡ ಬಡತನವನ್ನು ಎತ್ತಿ ತೋರಿಸುವಂತಿದೆ.

ಫಿದಾ, ಲವ್ ಸ್ಟೋರಿ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ನ್ಯಾಷನಲ್ ಅವಾರ್ಡ್ ವಿನ್ನರ್ ಡೈರೆಕ್ಟರ್ ಶೇಖರ್ ಕಮ್ಮುಲ ಅವರು ಕುಬೇರ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀವೆಂಕಟೇಶ್ವರ ಸಿನಿಮಾಸ್ ಮತ್ತು ಒಮಿಗೋಸ್ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುನೀಲ್ ನಾರಂಗ್ ಮತ್ತು ಪುಸ್ಕುರ್ ರಾಮ್ ಮೋಹನ್ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

 

ಧನುಷ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ್, ಜಿಮ್ ಸರ್ಭ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದರೆ, ನಿಕೇತ್ ಬೊಮ್ಮಿ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.

Share this post:

Related Posts

To Subscribe to our News Letter.

Translate »