Sandalwood Leading OnlineMedia

ಸ್ಯಾಂಡಲ್ವುಡ್ ಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿರುವ ಯುವ ನಟ ದಕ್ಷ ನಾಯಕತ್ವದ ‘ನೇತ್ರ೦’ ಚಿತ್ರದ ಬಿಡುಗಡೆಯ ದಿನಾಂಕದ ಘೋಷಣೆ ಆಗಿದ್ದು,ಚಿತ್ರ ರಾಜ್ಯಾದ್ಯಂತ ಇದೇ ನವೆಂಬರ್ 17ಕ್ಕೆ ಬರುತ್ತಿದೆ..

ಸ್ಯಾಂಡಲ್ವುಡ್ ಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿರುವ ಯುವ ನಟ ದಕ್ಷ ನಾಯಕತ್ವದ, ಮಕ್ ದುಮ್ ಪಟೇಲ್,ಶೇಕ್ ಸಬೀರ್ ನಿರ್ಮಾಣದ,ನೇತ್ರ೦ ಚಿತ್ರದ ಬಿಡುಗಡೆಯ ದಿನಾಂಕದ ಘೋಷಣೆ ಆಗಿದ್ದು,ಚಿತ್ರ ರಾಜ್ಯಾದ್ಯಂತ ಇದೇ ನವೆಂಬರ್ 17ಕ್ಕೆ ಬರುತ್ತಿದೆ..

ಚಿತ್ರದ ನಾಯಕ ನಟ ದಕ್ಷ ಮಾತನಾಡಿ ಅಲ್ಲಿನ ವಾತಾವರಣವನ್ನು ತಿಳಿ ಮಾಡಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವ್ರನ್ನ ನೆನೆದು,ಅವರಿದ್ದರೆ ಖಂಡಿತಾ ಪ್ರೆಸ್ಸ್ ಮೀಟ್ ಗೆ ಬರ್ತಾ ಇದ್ರು, ನಮಗೆ ಆ ಅದೃಷ್ಟ ಇಲ್ಲ ಎನ್ನುವುದರ ಮೂಲಕ ಭಾವುಕರಾದರು..ಅಪ್ಪು ಬಾಸ್ ನ ಭೇಟಿಯಾಗೆ ಬಂದು,ಚಿತ್ರದ ಬಿಡುಗಡೆಯ ಪತ್ರಿಕಾ ಗೋಷ್ಠಿ ಮಾಡ್ತಾ ಇದೀವಿ ಎನ್ನುವುದರ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದರು..

ಸಿನಿಮಾ ಮೇಲಿನ ಅತಿಯಾದ ಪ್ರೀತಿ ಮತ್ತು ಆಸಕ್ತಿಯಿಂದ ಸಿನ್ಮಾ ಮಾಡಿದ್ದು,ಬೇರೆ ಯಾರೋ ಮಾಡಬೇಕಿದ್ದ ಚಿತ್ರಕ್ಕೆ ನಾವೇ ಇಬ್ಬರು ಸೇರಿ ಬಂಡವಾಳ ಹೂಡಿದ್ದೇವೆ .ಕಣ್ಣುಗಳ ಮಹತ್ವ ಸಾರುವಂತಹ,ಸಪ್ಸನ್ಸ್ ಥ್ರಿಲ್ಲರ್ ಜಾನರ್ ಲೈನ್ ಇದಾಗಿದ್ದು, ತುಂಬಾ ಕುತೂಹಲ ಭರಿತವಾದ ಕಥೆ ಟ್ರಾವೆಲ್ ಆಗತ್ತೆ,ನಾಯಕ ದಕ್ಷ ನೂರಕ್ಕೆ ನೂರು ಅಂಕ ಪಡೆದು ಪಾಸಾಗಿದ್ದಾನೆ ಅನ್ನೋದು ನಿರ್ದೇಶಕ ಮಾತು..

ಸಿನ್ಮಾ ಬೇಗನೆ ಸಿದ್ಧವಾಗಿತ್ತು ಆದ್ರೆ,ಕೋರೋನ ಬಂದಿದ್ದರಿಂದ ಸ್ವಲ್ಪ ತಡವಾಯಿತು,ನೇತ್ರ೦ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬರ್ತಾ ಇದೆ, ಒಟ್ಟು ಮೂರು ಹಾಡುಗಳು ಹಾಗೂ ಭರ್ಜರಿ ಫೈಟ್ಸ್ ಗಳು ಆಡಿಯನ್ಸ್ ಗೆ ಗುಡ್ ಫೀಲ್ ಕೊಡತ್ತೆ,ನಮ್ ನೇತ್ರo ಕ್ಕೆ ಸೆನ್ಸಾರ್ A ಸರ್ಟಿಫಿಕೇಟ್ ನೀಡಿದೆ..

Share this post:

Related Posts

To Subscribe to our News Letter.

Translate »