Sandalwood Leading OnlineMedia

‘ಕೆಂಡ’ದಂತಹ ಕಥೆ ಹೇಳಿದ ಕೆಲವಡಿ‌‌‌ ಪಾಲಿಗೆ ಪ್ರಶಸ್ತಿಯ ಗರಿ

ಮೊದಲ ಹೆಜ್ಜೆಯಲ್ಲಿಯೇ `ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ ಪಾಲಿಗೆ ರೋಮಾಂಚಕ ಗೆಲುವು ಸಿಕ್ಕಿದೆ. ಸಿನಿಮಾವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಈ ಸಿನಿಮಾ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್ ಗೆ ಪ್ರವೇಶ ಪಡೆದಿರುವ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಇದೀಗ ಮತ್ತೊಂದು ಸಂಭ್ರಮದ ಸಂಗತಿಯನ್ನು ಚಿತ್ರ ತಂಡ ಹಂಚಿಕೊಂಡಿದೆ. ಈ ಚಿತ್ರಕ್ಕೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್ ಲಭಿಸಿದೆ. ಈ ಮೂಲಕ ಸಹದೇವ್ ಕೆಲವಡಿ ಮೊದಲ ಪ್ರಯತ್ನದಲ್ಲಿಯೇ ತಮ್ಮ ನಿರ್ದೇಶನದ ಕಸುವನ್ನು ಸಾಬೀತುಪಡಿಸಿದ್ದಾರೆ. ಈ ಸುದ್ದಿಯೊಂದಿಗೆ ಕೆಂಡದ ಸುತ್ತ ಹಬ್ಬಿಕೊಂಡಿರುವ ನಿರೀಕ್ಷೆಗಳಿಗೆ ಮತ್ತೊಂದಷ್ಟು ಆವೇಗ ಬಂದಂತಾಗಿದೆ.

 

 

 

ಇದನ್ನೂ ಓದಿ :`ಕನ್ನಡ ಮಾಧ್ಯಮ’ ಚಿತ್ರದ ಬೆನ್ನಿಗೆ ನಿಂತರು ಹಿರಿಯ ಚಿತ್ರ ಸಾಹಿತಿ ದೊಡ್ಡರಂಗೇಗೌಡ

ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಪ್ರವೇಶ ಪಡೆದುಕೊಂಡಿತ್ತು. ಈ ಹಂತದಲ್ಲಿ ಅಟತ್ಯಂತ ಕ್ಲಿಷ್ಟಕರ ಸ್ಪರ್ಧೆಯನ್ನು ದಾಟಿಕೊಂಡಿದ್ದ `ಕೆಂಡ’ ಚಿತ್ರ ಕಡೆಗೂ ಅತ್ಯುತ್ತಮ ಚೊಚ್ಚಲ ನಿರ್ದೇಶನ ವಿಭಾಗದ ಜ್ಯೂರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸುತ್ತಿನಲ್ಲಿ ನಾನಾ ಭಾಷೆಗಳ: ಚಿತ್ರಗಳ ನಡುವೆ ಕನ್ನಡ ಚಿತ್ರ ಕೆಂಡ ಸ್ಪರ್ಧೆಗೆ ಒಡ್ಡಿಕೊಂಡಿತ್ತು. ಅಂತಿಮವಾಗಿ ಈ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆರ ಮತ್ತೊಂದು ಗರಿ ಮೂಡಿಸಿರೋದಂತೂ ಸತ್ಯ.
ಈ ಫಿಲಂ ಫೆಸ್ಟಿವಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘನತೆ ಪ್ರತಿಷ್ಠೆಯನ್ನು ಉಳಿಸಿಕೊಂಡಿದೆ.

 

 

 

ಇದನ್ನೂ ಓದಿ :*ಜಪಾನಿನಲ್ಲಿ ಬಿಡುಗಡೆಗೆ ಸಿದ್ಧಗೊಂಡ “777 ಚಾರ್ಲಿ”*

 

ಇದಕ್ಕೆ ಪ್ರವೇಶ ಪಡೆದುಕೊಳ್ಳೋದೇ ದೊಡ್ಡ ಸಂಗತಿ ಎಂಬಂಥಾ ವಾತಾವರಣವಿಒದೆ. ಹಾಗೊಂದು ವೇಳೆ ಪ್ರವೇಶ ಸಿಕ್ಕರೂ ಕೂಡಾ ಸ್ಪರ್ಧೆಯಲ್ಲಿ ಉಳಿದುಕೊಳ್ಳುವುದು ಸಾಮಾನ್ಯದ ಸಂಗತಿಯಲ್ಲ. ಅದೆಲ್ಲವನ್ನೂ ದಾಟಿಕೊಂಡು ಸದರಿ ಮಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರೋದೇ ಕೆಂಡದ ಅಸಲೀ ಕಸುವಿಗೊಂದು ಸಾಕ್ಷಿ. ಅದರಲ್ಲಿಯೇ ನಿರ್ದೇಶನದಲ್ಲಿ ಮೊದಲ ಹೆಜ್ಜೆಯಲ್ಲಿಯೇ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಹದೇವ್ ಕೆಲವಡಿ ಅಚ್ಚರಿ ಮೂಡಿಸಿದ್ದಾರೆ.

 

 

 

ಇದನ್ನೂ ಓದಿ :ಖುಷಿ ಕೊಟ್ಟ ರಿಷಿಯ ಹೊಸ `ಅವತಾರ’!

ಹೀಗೆ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಇದೇ ಜೂನ್ ತಿಂಗಳಿನಲ್ಲಿ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ.

ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ.

Share this post:

Related Posts

To Subscribe to our News Letter.

Translate »