Left Ad
ಶೂಟಿಂಗ್ ಮುಗಿಸಿದ 'ಝೀಬ್ರಾ'...ಶೀಘ್ರದಲ್ಲೇ ತೆರೆಗೆ ಬರಲಿದೆ ಡಾಲಿ-ಸತ್ಯದೇವ್ ಕಾಂಬೋದ ಚಿತ್ರ - Chittara news
# Tags

ಶೂಟಿಂಗ್ ಮುಗಿಸಿದ ‘ಝೀಬ್ರಾ’…ಶೀಘ್ರದಲ್ಲೇ ತೆರೆಗೆ ಬರಲಿದೆ ಡಾಲಿ-ಸತ್ಯದೇವ್ ಕಾಂಬೋದ ಚಿತ್ರ

ಡಾಲಿ ಧನಂಜಯ್ ಹಾಗೂ ಸತ್ಯದೇವ್ ಕಾಂಬಿನೇಷನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಝೀಬ್ರಾ. ಶುರು ಆದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.

ಇದನ್ನೂ ಒದಿ  ಹದಿಹರೆಯದವರ ತುಂಟಾಟದ ಕಥಾಹಂದರ ಹೊಂದಿರುವ “ಸ್ಕೂಲ್ ಡೇಸ್” ನವೆಂಬರ್ 24 ರಂದು ತೆರೆಗೆ .

ಝೀಬ್ರಾ ಎಂಬ ಮಾಸ್ ಎಂಟರ್‌ಟೇನರ್ ಚಿತ್ರವಾಗಿದ್ದು, ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇಬ್ಬರದ್ದೂ 26ನೇ ಸಿನಿಮಾ ಎಂಬುದು ವಿಶೇಷ.

ಇದನ್ನೂ ಒದಿ  ಸಖತ್ ಸಸ್ಪೆನ್ಸ್ ಆಗಿದೆ ‘ಅನಾವರಣ’ ಟ್ರೇಲರ್…ಅರ್ಜುನ್ ಯೋಗಿ ಸಿನಿಮಾಗೆ ಕಿಚ್ಚ ಸುದೀಪ್ ಬೆಂಬಲ

ಝೀಬ್ರಾ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌ , ಸುರೇಶ್‌ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

ಇದನ್ನೂ ಒದಿ ‘ ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಗೆ ಅಭಿಮಾನಿಗಳು ಫಿದಾ .” ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 24ರಂದು ತೆರೆಗೆ .

ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ. ಪ್ಯಾನ್ ಇಂಡಿಯಾ ‘ZEBRA’ ಚಿತ್ರಕ್ಕೆ ಕೆಜಿಎಫ್​ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

Spread the love
Translate »
Right Ad