Sandalwood Leading OnlineMedia

ಝೈದ್ ಖಾನ್ – ರಚಿತಾ ರಾಮ್ ಜೋಡಿಯ ಬಹು ನಿರೀಕ್ಷಿತ “ಕಲ್ಟ್” ಚಿತ್ರವನ್ನು ಪ್ರತಿಷ್ಠಿತ ಕೆ.ವಿ.ಎನ್ ಸಂಸ್ಥೆ ಅರ್ಪಿಸುತ್ತಿದೆ “ಕಲ್ಟ್” .

 

ಫೆಬ್ರವರಿ 11, ನಾಯಕನ‌ ಹುಟ್ಟುಹಬ್ಬದ ದಿನ ಮೊದಲ ಟೀಸರ್ ಬಿಡುಗಡೆ. .

“ಬನಾರಸ್” ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ ಹಾಗೂ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಕ್ತಾಯವಾಗಿದೆ. ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ಮತ್ತೊಂದು ಮಹತ್ವದ ಸುದ್ದಿ ಹೊರಬಂದಿದೆ. ಸದಭಿರುಚಿ ಹಾಗೂ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣ ಹಾಗೂ ವಿತರಣೆಯಲ್ಲಿ ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರತಿಷ್ಠಿತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ “ಕಲ್ಟ್” ಚಿತ್ರವನ್ನು ಅರ್ಪಿಸುತ್ತಿದೆ. ಈಗಾಗಲೇ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿರುವ ಈ ಚಿತ್ರದ ಜೊತೆಗೆ ಈಗ ಕೆ‌.ವಿ.ಎನ್ ಸಂಸ್ಥೆ ಸಹ ಕೈ ಜೋಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಫಸ್ಟ್‌‌ ಲುಕ್ ಮೂಲಕ ಮೋಡಿ ಮಾಡಿರುವ “ಕಲ್ಟ್” ಚಿತ್ರದ ಟೀಸರ್ ಫೆಬ್ರವರಿ 11, ಝೈದ್ ಖಾನ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆಯಾಗಲಿದೆ. ಟೀಸರ್ ಹೇಗೆ ಮೂಡಿಬಂದಿರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

 

Share this post:

Translate »