Left Ad
ಅದ್ದೂರಿ ಸಮಾರಂಭದಲ್ಲಿ "CSBL ಸೀಸನ್ 1" ಟ್ರೋಫಿ ಹಾಗೂ ಲೋಗೊ ಅನಾವರಣ - Chittara news
# Tags

ಅದ್ದೂರಿ ಸಮಾರಂಭದಲ್ಲಿ “CSBL ಸೀಸನ್ 1” ಟ್ರೋಫಿ ಹಾಗೂ ಲೋಗೊ ಅನಾವರಣ

 

ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.

Send “Chittara” on WhatsApp to 73 5365 5365 or click the link 👉  http://wame.pro/chittara to cast your vote!


 

 

ಅಶ್ವಿನಿ ಪುನೀತ್ ರಾಜಕುಮಾರ್,‌ ಶ್ರೀಕಾಂತ್ ಕಿಡಂಬಿ ಸೇರಿದಂತೆ ಅನೇಕ ಗಣ್ಯರು‌ ಭಾಗಿ .

STellar studio & event management ಸಂಸ್ಥೆ‌,‌ PRK AUDIO ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಅವರು ಆಯೋಜಿಸುತ್ತಿರುವ “CSBL” “ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1” ಉದ್ಘಾಟನಾ ಹಾಗೂ‌ ಲೋಗೊ ಲಾಂಚ್ ಸಮಾರಂಭ ನಗರದ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ “CSBL” ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣ ಮಾಡಿದರು‌.‌ ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ 50 ನೇ ಹುಟ್ಟುಹಬ್ಬವನ್ನು ಸಹ ಅದ್ದೂರಿಯಾಗಿ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಶರವಣ(ಸಾಯಿ ಗೋಲ್ಡ್ ಪ್ಯಾಲೆಸ್), ನಟ ಅನಿರುದ್ಧ್ ಜತ್ಕರ್, ನಟಿ ರಾಗಿಣಿ ದ್ವಿವೇದಿ, ಸಾ.ರಾ.ಗೋವಿಂದು, ಪತ್ರಕರ್ತ ಸದಾಶಿವ ಶೆಣೈ ಮುಂತಾದವರು ಸಮಾರಂಭಕ್ಕೆ ಆಗಮಿಸಿ “CSBL” ಯಶಸ್ವಿಯಾಗಲೆಂದು ಹಾರೈಸಿದರು. ವರ್ಣರಂಜಿತ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರದ ಹಾಡುಗಳಿಗೆ ಹೆಸರಾಂತ ನೃತ್ಯ ತಂಡದವರು ಹೆಜ್ಜೆ ಹಾಕಿದರು.

“CSBL” ಕುರಿತು ಮಾಹಿತಿ ನೀಡಿದ ಆಯೋಜಕರಲ್ಲಿ ಒಬ್ಬರಾದ ಚೇತನ್ ಸೂರ್ಯ, ನಾವು ಎರಡು ವರ್ಷಗಳ ಕಾಲ “ಅಪ್ಪು ಕಪ್” ಎಂಬ ಹೆಸರಲ್ಲಿ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸುತ್ತಾ ಬಂದಿದ್ದೇವೆ. ಆಗಿನಿಂದಲೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಶರವಣ ಅವರ ಸಹಕಾರವೂ ಆಗಿನಿಂದಲೂ ಇದೆ.‌ ಇನ್ನೂ ಈ ಬಾರಿ ಇಂಟರ್ ಸ್ಟೇಟ್ ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್‌ ಆಯೋಜಿಸಲಾಗಿದೆ. ಕರ್ನಾಟಕ,‌ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳ ನಾಲ್ಕು ರಾಜ್ಯಗಳ ಸೆಲೆಬ್ರಿಟಿಗಳು ಈ ಲೀಗ್ ನಲ್ಲಿ‌ ಆಡಲಿದ್ದಾರೆ. ಮುಂದಿನ ಬಾರಿ ಇನ್ನೂ ಹೆಚ್ಚಿನ ರಾಜ್ಯಗಳು ಸೇರ್ಪಡೆಯಾಗಲಿದೆ. “ಕರ್ನಾಟಕ ವಾರಿಯರ್ಸ್”, “ಚೆನೈ ಸೂಪರ್ ಸ್ಟಾರ್ಸ್”, ” ಕೇರಳ ರಾಕರ್ಸ್” ಹಾಗೂ “ತೆಲುಗು ಫೈಟರ್ಸ್” ಎಂಬ ನಾಲ್ಕು ತಂಡಗಳಿದೆ‌.‌ ನನ್ನ ಜೊತೆಗೆ ಅರ್ಜುನ್ ಹಾಗೂ ಪಾರಿತೋಷ್ ಅವರು ಈ ಬಾರಿ ಕೈಜೋಡಿಸಿದ್ದು, ಜೂನ್ ತಿಂಗಳಲ್ಲಿ ಅದ್ದೂರಿಯಾಗಿ “CSBL” ನಡೆಯಲಿದೆ ಎಂದರು.

“ಕರ್ನಾಟಕ ವಾರಿಯರ್ಸ್” ತಂಡದ ನಟರಾದ ಪ್ರಮೋದ್ ಶೆಟ್ಟಿ, ರವಿ ಚೇತನ್,‌ ಮನೋರಂಜನ್ ರವಿಚಂದ್ರನ್ ಹಾಗೂ ವಿಕ್ರಮ್ ರವಿಚಂದ್ರನ್, “ಚೆನೈ ಸೂಪರ್ ಸ್ಟಾರ್ಸ್” ತಂಡದ ಶಿವಕುಮಾರ್(ಕೌಂಟಿ ಕ್ರಿಕೇಟರ್), ವಿಕ್ರಾಂತ್(ನಟ ಹಾಗೂ ಸಿ.ಸಿ.ಎಲ್ ಕ್ಯಾಪ್ಟನ್), ಭರತ್(ನಟ), ಬಿ.ಆರ್.ಕೃಷ್ಣ (ಹಿನ್ನೆಲೆ ಗಾಯಕ),‌ “ತೆಲುಗು ಫೈಟರ್ಸ್” ತಂಡದ ಶರತ್, ನಿತೀಶ್ ಹಾಗೂ “ಕೇರಳ ರಾಕರ್ಸ್” ತಂಡದ ಮಂಜುನಾಥ್ (ನಿರ್ಮಾಪಕ), ನಟರಾದ ಸಂತೋಷ್ ಹಾಗೂ ರಾಜೀವ್ ಪಿಳ್ಳೈ ಮುಂತಾದ ಸೆಲೆಬ್ರಿಟಿ ಆಟಗಾರರು “CSBL” ಲೋಗೊ ಹಾಗೂ ಟ್ರೋಫಿ ಅನಾವರಣದಲ್ಲಿ ಉಪಸ್ಥಿತರಿದ್ದರು.

Spread the love
Translate »
Right Ad