Sandalwood Leading OnlineMedia

CSA-2025: ಧ್ರುವ ಸರ್ಜಾ  ನಿರೀಕ್ಷೇಯನ್ನು ಸಫಲಗೊಳಿಸ್ತಾನಾ `ಮಾರ್ಟಿನ್’?

 

ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.

Send “Chittara” on WhatsApp to 73 5365 5365 or click the link 👉  http://wame.pro/chittara to cast your vote!


 

CSA-2025: ಧ್ರುವ ಸರ್ಜಾ  ನಿರೀಕ್ಷೇಯನ್ನು ಸಫಲಗೊಳಿಸ್ತಾನಾ `ಮಾರ್ಟಿನ್’?

    ಹಲವು ವರ್ಷಗಳಿಂದ ಚಿತ್ತಾರ ನೂರಾರು ಪ್ರತಿಭಾವಂತ  ಕಲಾವಿದರು ಮತ್ತು ತಂತ್ರಜ್ಞರನ್ನು ಗುರುತಿಸಿ ಗೌರವಿಸಿದೆ. ಪ್ರತೀವರ್ಷ ಅದ್ಭುತ ವೇದಿಕೆ ಸೃಷ್ಟಿಸಿ ಸಾಧಕರನ್ನು ಗೌರವಿಸಿ ಪ್ರೋತ್ಸಾಹಿಸಿದೆ. ಈ ನಿಟ್ಟಿನಲ್ಲಿ, 2024ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಪ್ರತಿ ವರ್ಗಕ್ಕೂ, ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಮತ್ತು ಗೌರವಿಸುವ ಯೋಜನೆಯೂ ನಮ್ಮದಾಗಿದೆ. ಇದಕ್ಕೆ ಎಂದಿನ0ತೆ ಛಲ ಬಿಡದ ಚಿತ್ತಾರ ಪತ್ರಿಕೆಯು ತನ್ನ ಯೋಜನೆಯನ್ನು ಸಾಕಾರಗೊಳಿಸಲು ಅಣಿಯಾಗಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹೆಸರಿಗೆ ತಕ್ಕಂತೆ ಸಾಕಷ್ಟು ಆಕ್ಷನ್‌ ಕಂಟೆಂಟ್‌ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.. ಕಳೆದ ವರ್ಷ ಬಿಡುಗಡೆಯಾದ ಬಹು ನಿರೀಕ್ಷಿತ ಎ.ಪಿ. ಅರ್ಜುನ್‌ ನಿರ್ದೇಶನದ ಮಾರ್ಟಿನ್‌ ಚಿತ್ರ ಥಿಯೇಟರ್‌ಗಳಲ್ಲಿ ಸಖ್ಖತ್‌ ಸೌಂಡ್‌ ಮಾಡಿತ್ತು. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡಿಗಡೆಯಾದ ಈ ಚಿತ್ರವನ್ನ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಉದಯ್ ಕೆ ಮೆಹ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ರು… ಭಾರೀ ಬಜೆಟ್‌ನಲ್ಲಿ ‘ಮಾರ್ಟಿನ್’ ಸಿನಿಮಾ ಕಟ್ಟಿಕೊಡಲಾಗಿತ್ತು. ದ್ವಿಪಾತ್ರದಲ್ಲಿ ನಟಿಸಿ ಧ್ರುವ ಸರ್ಜಾ ತೆರೆ ಮೇಲೆ ಅಬ್ಬರಿಸಿದ್ದರು. ಅರ್ಜುನ್ ಸರ್ಜಾ ಬರೆದ ಕಥೆಗೆ ಚಿತ್ರಕಥೆ ಬರೆದು ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು.  ಆಕ್ಷನ್, ಮೇಕಿಂಗ್ ಗಳಲ್ಲಿ ಧ್ರುವ ಸರ್ಜಾ ಪರ್ಫಾರ್ಮನ್ಸ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ‘ಅದ್ಧೂರಿ’, ‘ಬಹದ್ಧೂರ್’ ಹಾಗೂ ‘ಭರ್ಜರಿ’ ರೀತಿಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ಧ್ರುವ ಸರ್ಜಾ ಮೇಲೆ ಭಾರೀ ನಿರೀಕ್ಷೆಯಿತ್ತು. 3 ವರ್ಷಗಳ ಬಳಿಕ ಬಂದ ‘ಮಾರ್ಟಿನ್’ ಧ್ರುವಾಗೆ ಮತ್ತೊಂದು ಮೈಲಿಗಲ್ಲು ಕೊಟ್ಟಿತ್ತು. ಈ ಚಿತ್ರದ ನಟನೆಗೆ ಚಿತ್ತಾರ ಸ್ಟಾರ್‌ ಅವಾರ್ಡ್‌ ನೀಡುವ ಬೆಸ್ಟ್‌ ಆಕ್ಟರ್‌ ಇನ್‌ ಲೀಡಿಂಗ್‌ ರೋಲ್‌ ಗೆ ನಾಮಿನೇಟ್‌ ಆಗಿದ್ದಾರೆ.

ಪ್ರಶಸ್ತಿಗಳ ಆಯ್ಕೆಯನ್ನು  ಅತ್ಯಂತ ಪಾರದರ್ಶಕವಾಗಿ ನಡೆಸಲಿದ್ದು, ಆಯ್ಕೆ ಸಮಿತಿಯ ಆಯ್ಕೆಯ ಜೊತೆಗೆ, ವಾಟ್ಸ್ಅಪ್ ಮೂಲಕ ಪ್ರೇಕ್ಷಕರು ತಮಿಷ್ಟದ ಚಿತ್ರ, ನಟ/ನಟಿ, ತಂತ್ರಜ್ಞರಿಗೆ ಆಯ್ಕೆ ಮಾಡುತ್ತಿದ್ದು, ಬಿತ್ತಿಪತ್ರಗಳ ಮೂಲಕವೂ ಕರ್ನಾಟಕಾದ್ಯಂತ ಶಾಲಾ-ಕಾಲೇಜುಗಳಲ್ಲಿ ವೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು, ಚಿತ್ತಾರ ಪತ್ರಿಕೆಯಲ್ಲಿಯೂ ಓದುಗರಿಗೆ ವೋಟಿಂಗ್ ಅವಕಾಶವನ್ನು ಕಲ್ಪಿಸಲಿದ್ದು ಅದನ್ನೂ ಆಯ್ಕೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಚಿತ್ರರಂಗದ ಹೆಮ್ಮೆಯ ಕಲಾವಿದರಾಗಿ, ತಂತ್ರಜ್ಞರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಏಳಿಗೆಯಲ್ಲಿ ನಿಮ್ಮ ಪಾತ್ರ ನಮ್ಮ ನಾಡಿನ ಹೆಮ್ಮೆಯ ಸಂಕೇತ. ಈ ನಿಮ್ಮ ಸಾಧನೆಯನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ, ನಮ್ಮ 16ನೇ ವರ್ಷದ ಸಂಭ್ರಮಕ್ಕೆ ನೀವೆಲ್ಲರೂ ಸಾಕ್ಷಿಯಾಗಲಿದ್ದೀರಿ. ಬನ್ನಿ, `ಚಿತ್ತಾರ ಸ್ಟಾರ್ ಅವಾರ್ಡ್ಸ್–2025’ ಮೂಲಕ ಎಲ್ಲರೂ ಒಟ್ಟಾಗಿ ಅದ್ಭುತ ಕ್ಷಣಗಳನ್ನು ಸಂಭ್ರಮಿಸೋಣ.

Share this post:

Translate »