ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.
Send “Chittara” on WhatsApp to 73 5365 5365 or click the link http://wame.pro/chittara to cast your vote!
ಚಿತ್ತಾರ ಸ್ಟಾರ್ ಅವಾರ್ಡ್ಸ್-2025; ಅತ್ಯುತ್ತಮ ನಾಯಕ ನಟ ಸ್ಪರ್ಧೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ
ಹಲವು ವರ್ಷಗಳಿಂದ ಚಿತ್ತಾರ ನೂರಾರು ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರನ್ನು ಗುರುತಿಸಿ ಗೌರವಿಸಿದೆ. ಪ್ರತೀವರ್ಷ ಅದ್ಭುತ ವೇದಿಕೆ ಸೃಷ್ಟಿಸಿ ಸಾಧಕರನ್ನು ಗೌರವಿಸಿ ಪ್ರೋತ್ಸಾಹಿಸಿದೆ. ಈ ನಿಟ್ಟಿನಲ್ಲಿ, 2024ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಪ್ರತಿ ವರ್ಗಕ್ಕೂ, ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಮತ್ತು ಗೌರವಿಸುವ ಯೋಜನೆಯೂ ನಮ್ಮದಾಗಿದೆ. ಇದಕ್ಕೆ ಎಂದಿನ0ತೆ ಛಲ ಬಿಡದ ಚಿತ್ತಾರ ಪತ್ರಿಕೆಯು ತನ್ನ ಯೋಜನೆಯನ್ನು ಸಾಕಾರಗೊಳಿಸಲು ಅಣಿಯಾಗಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಚಿತ್ರ ಜೀವನದಲ್ಲಿ ಮತ್ತೊಂದು ಅದ್ಭುತ ಚಿತ್ರ ಅಂದ್ರೆ ಅದು ಬಘೀರ. ಈ ಹಿಂದಿನ ಮಫ್ತಿ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರವನ್ನ ಮಾಡಿದ್ದರು. ಬಘೀರ ಸಿನಿಮಾದಲ್ಲೂ ರೋರಿಂಗ್ ಸ್ಟಾರ್ ಬಘೀರ ಹೆಸರಿನ ಆಫೀಸರ್ ಆಗಿದ್ದಾರೆ. ನಟ ಶ್ರೀಮುರಳಿ ಅವರು ಈ ಸಿನಿಮಾದಲ್ಲಿ ಸೂಪರ್ ಹೀರೋ ರೀತಿಯ ಪಾತ್ರ ಮಾಡಿದ್ದಾರೆ. ಅವರ ವೃತ್ತಿಜೀವನದಲ್ಲಿ ಒಂದು ಡಿಫರೆಂಟ್ ಸಿನಿಮಾವಾಗಿ ‘ಬಘೀರ’ ಮೂಡಿಬಂದಿದೆ. ಈ ಬಘೀರ ಚಿತ್ರದ ನಟನೆಗಾಗಿ ಚಿತ್ತಾರ ಸ್ಟಾರ್ ಅವಾರ್ಡ್ ನೀಡುವ ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್ ಗೆ ನಾಮಿನೇಟ್ ಆಗಿದ್ದಾರೆ.
ಪ್ರಶಸ್ತಿಗಳ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಿದ್ದು, ಆಯ್ಕೆ ಸಮಿತಿಯ ಆಯ್ಕೆಯ ಜೊತೆಗೆ, ವಾಟ್ಸ್ಅಪ್ ಮೂಲಕ ಪ್ರೇಕ್ಷಕರು ತಮಿಷ್ಟದ ಚಿತ್ರ, ನಟ/ನಟಿ, ತಂತ್ರಜ್ಞರಿಗೆ ಆಯ್ಕೆ ಮಾಡುತ್ತಿದ್ದು, ಬಿತ್ತಿಪತ್ರಗಳ ಮೂಲಕವೂ ಕರ್ನಾಟಕಾದ್ಯಂತ ಶಾಲಾ-ಕಾಲೇಜುಗಳಲ್ಲಿ ವೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು, ಚಿತ್ತಾರ ಪತ್ರಿಕೆಯಲ್ಲಿಯೂ ಓದುಗರಿಗೆ ವೋಟಿಂಗ್ ಅವಕಾಶವನ್ನು ಕಲ್ಪಿಸಲಿದ್ದು ಅದನ್ನೂ ಆಯ್ಕೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಚಿತ್ರರಂಗದ ಹೆಮ್ಮೆಯ ಕಲಾವಿದರಾಗಿ, ತಂತ್ರಜ್ಞರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಏಳಿಗೆಯಲ್ಲಿ ನಿಮ್ಮ ಪಾತ್ರ ನಮ್ಮ ನಾಡಿನ ಹೆಮ್ಮೆಯ ಸಂಕೇತ. ಈ ನಿಮ್ಮ ಸಾಧನೆಯನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ, ನಮ್ಮ 16ನೇ ವರ್ಷದ ಸಂಭ್ರಮಕ್ಕೆ ನೀವೆಲ್ಲರೂ ಸಾಕ್ಷಿಯಾಗಲಿದ್ದೀರಿ. ಬನ್ನಿ, `ಚಿತ್ತಾರ ಸ್ಟಾರ್ ಅವಾರ್ಡ್ಸ್–2025’ ಮೂಲಕ ಎಲ್ಲರೂ ಒಟ್ಟಾಗಿ ಅದ್ಭುತ ಕ್ಷಣಗಳನ್ನು ಸಂಭ್ರಮಿಸೋಣ.