Left Ad
CSA-2025 ;  'Rising star of Kannada Music  ಪ್ರಶಸ್ತಿಗೆ ಭಾಜನರಾದ Chaitra J achar - Chittara news
# Tags

CSA-2025 ;  ‘Rising star of Kannada Music  ಪ್ರಶಸ್ತಿಗೆ ಭಾಜನರಾದ Chaitra J achar

ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು  ಹೀಗಿತ್ತು.

ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.

ರೆಡ್‌ ಕಾರ್ಪೆಟ್‌ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್‌ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.

ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು

ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ

ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..

‘Rising star of Kannada Music  / Chaitra J achar

ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿಯೂ, ಗಾಯಕಿಯಾಗಿಯೂ ಗುರುತಿಸಿಕೊಂಡು ಎಲ್ಲರೂ ಅಚ್ಚರಿ ಪಡುವಂತೆ ಬೆಳೆಯುತ್ತಿರುವ ಯುವಪ್ರತಿಭೆ ಚೈತ್ರ ಜೆ ಆಚಾರ್. ತಾವು ಒಪ್ಪಿದ ಪಾತ್ರಕ್ಕೆ ಎಷ್ಟು ಅದ್ಭುತವಾಗಿ ಜೀವ ತುಂಬುವ, ತಾವು ಹಾಡುವ ಹಾಡಿಗೆ ಅಷ್ಟೇ ಅದ್ಭುತವಾಗಿ ಭಾವ ತುಂಬುವ ಉದಯೋನ್ಮುಖ ಗಾಯಕಿ ಚೈತ್ರ ಜೆ ಆಚಾರ್.

ಇದೀಗ ಸ್ಯಾಂಡಲ್ ವುಡ್ ನಲ್ಲಿ ಇವರ ಗಾಯನಕ್ಕೆ ಎಲ್ಲಿಲ್ಲದ ಬೇಡಿಕೆ. ‘ಮಹಿರ‘, ‘ಟೋಬಿ‘, ‘ತಲೆದಂಡ‘, ‘ಸಪ್ತ ಸಾಗರದೆಲ್ಲೋ ಸೈಡ್ ಬಿ‘, ಬ್ಲಿಂಕ್, 3bhk ಚಿತ್ರದಲ್ಲಿನ ಚೈತ್ರಾ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಹುನಿರೀಕ್ಷೆಯಉತ್ತರಕಾಂಡಹಾಗೂಮಾರ್ನಮಿಚಿತ್ರಗಳಲ್ಲೂ ಚೈತ್ರ ನಟಿಸುತ್ತಿದ್ದಾರೆ.

2019 ರಲ್ಲಿ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದನೀಲಾಕಾಶ ಕೇಳುಹಾಡಿಗೆ ಮೊದಲ ಬಾರಿಗೆ ಹಿನ್ನೆಲೆ ಗಾಯನ ಮಾಡಿದರು. ಅನಂತರ ಮಾಯಾಬಜಾರ್, ಗರುಡ ಗಮನ ವೃಷಭ ವಾಹನ, ಬೆಂಕಿ, ಟಗರುಪಲ್ಯ, ಸ್ವಾತಿ ಮುತ್ತಿನಮಳೆಹನಿಯೇ, ಶಾಖಾಹಾರಿ, ಸು ಫ್ರಮ್ ಸೋ ಸೇರಿದಂತೆ ಸಾಲು ಸಾಲು ಚಿತ್ರಗಳಿಗೆ ಚೈತ್ರ ಗಾಯನ ಮೆರುಗು ತುಂಬುತ್ತಿದೆ.

ನಟನೆ ಜೊತೆಗೆ ಗಾಯಕಿಯಾಗಿ ಮಿಂಚುತ್ತಿರುವ ಬಹುಮುಖ ಪ್ರತಿಭೆಗೆ, ‘Rising star of Kannada Music” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Spread the love
Translate »
Right Ad