ಒಂದು ಸಸಿನಿಮಾ ಮಾಡುವುದಕಕ್ಕೆ ನಿರ್ಮಾಪಕರ ಬೆಂಬಲ, ನಿರ್ದೇಶಕನ ಟ್ಯಾಲೆಂಟ್, ಕಲಾವಿದರ ಸಪೋರ್ಟ್ ಇದ್ದರೆ ಬಹಳ ಬೇಗನೇ ಸಿನಿಮಾ ಮುಗಿಸಿಬಿಡಬಹುದು. ಆದರೆ ಸಿನಿಮಾ ಮುಗಿದ ಮೇಲಿನ ಕೆಲಸವಿದೆಯಲ್ಲ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ಮಾತ್ರ ಆ ಸಿನಿಮಾ ಥಿಯೇಟರ್‌ನಲ್ಲಿ ಗೆಲ್ಲುವುದು. ಅದೇ ಪ್ರಮೋಷನ್ ವಿಚಾರ. ಪ್ರತಿಯೊಬ್ಬರಿಗೂ ತಲುಪಿಸಿದಾಗ ಸಿನಿಮಾ ನೋಡುವ ಕುತೂಹಲ ಜನರಲ್ಲಿ ಬರುತ್ತದೆ.
ಈಗಂತು ಡಿಜಿಟಲ್ ಯುಗ. ಕುಳಿತಲ್ಲಿಯೇ ಎಲ್ಲಾ ವಿಚಾರ ಕೈಯಲ್ಲಿ ಸಿಕ್ಕಿಬಿಡುತ್ತದೆ. ಕುಳಿತಲ್ಲಿಯೇ ನೋಡುಗರಿಗೆ ಕ್ರಿಯೆಟಿವಿಟಿಯ ಹಂಬಲವಿರುತ್ತದೆ. ಸಿನಿಮಾದ ಪ್ರಮೋಷನ್ ಮಾಡುವಾಗ ವಿಭಿನ್ನತೆಯಿಂದ ಮಾಡಿದರೆ ಜನ ಕೂಡ ಕೈಯಲ್ಲಿರುವ ಮೊಬೈಲ್‌ನಲ್ಲಿ ಒಂದರ್ಧ ಗಂಟೆ ನೀಡಿ ಆ ವಿಡಿಯೋಗಳನ್ನು ನೋಡುತ್ತಾರೆ ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೆ ಕಾರಣ ಚಂದನವನದಲ್ಲಿ ಹಲವು ವರ್ಷಗಳಿಂದ ಸಿನಿಮಾಗಳನ್ನು ಪ್ರಮೋಷನ್ ಮಾಡಿಕೊಂಡು ಬರುತ್ತಿರುವ ಕ-ಪಿಕ್ಚರ್ ಪ್ರವೀಣ್ ಏಕಾಂತ್ ಮತ್ತು ಸುಮಂತ್ ವಿಚಾರಕ್ಕೆ.
ಈಗಾಗಲೇ ಭೀಮಾ, ಪೆಪೆ, ಕಾಲಾಪತ್ಥರ್ ಸಿನಿಮಾಗಳನ್ನು ಸಿನಿಪ್ರೇಮಿಗಳು ನೋಡಿಯೇ ಇರುತ್ತೀರಿ. ಕ್ರಿಯೆಟಿವಿಟಿಯನ್ನು ಬಳಸಿ ಪ್ರಮೋಷನ್ ಮಾಡಲಾಗಿದೆ. ಹೀಗೆ ಸುಮಂತ್ ತಾನೂ ಒಪ್ಪಿಕೊಂಡ ಸಿನಿಮಾಗಳನ್ನು ಜನರಿಗೆ ಅಚ್ಚುಕಟ್ಟಾಗಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ವಿಶೇಷವಾದ ಕಾನ್ಸೆಪ್ಟ್ ಅನ್ನು ಹುಡುಕುತ್ತಾ ಇರುತ್ತಾರೆ. ಸುಮಂತ್ ಈಗಾಗಲೇ ಮತ್ಸ್ಯಗಂಧ, ಹೆಜ್ಜಾರು, ಭೀಮ, ಪೆಪೆ, ಕಾಲಾಪತ್ಥರ್ ಸಿನಿಮಾಗಳನ್ನು ವಿಭಿನ್ನವಾಗಿ ಪ್ರಮೋಟ್ ಮಾಡಿದ್ದಾರೆ. ಸದ್ಯ ಸಿದ್ಲಿಂಗು2, ರಾಯಲ್, ಅಂದೊಂದಿತ್ತು ಕಾಲ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಕನ್ನಡ ಸಿನಿಮಾಗಳನ್ನು ಜನರಿಗೆ ತಲುಪಿಸುವ ಸುಮಂತ್ ಪ್ರಯತ್ನಕ್ಕೆ ಗೆಲುವಾಗಲಿ ಎಂದೇ ಚಿತ್ತಾರವೂ ಹಾರೈಸುತ್ತದೆ.