Left Ad
'ಒಂದು ಮದುವೆ ಕಥೆ'ಯೊಳಗಿದೆ ಕಲ್ಯಾಣ ಮಂಟಪದಲ್ಲಿನ ಹಾಸ್ಯ - Chittara news
# Tags

‘ಒಂದು ಮದುವೆ ಕಥೆ’ಯೊಳಗಿದೆ ಕಲ್ಯಾಣ ಮಂಟಪದಲ್ಲಿನ ಹಾಸ್ಯ

 

 

ಸಂಪೂರ್ಣ ಹಾಸ್ಯ ಕಥೆ ಹೊಂದಿರುವ ’ಒಂದು ಮದುವೆ ಕಥೆ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಉದ್ಯಮಿ ಡಾ.ಬಿ.ಎಂ.ಉಮೇಶ್ ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ’ತಪ್ದೇ ಎಲ್ಲರೂ ಬನ್ನಿ’ ಎಂಬ ಅಡಿಬರಹವಿದೆ. ರಿಯಲ್ ಎಸ್ಟೇಟ್ ಉದ್ಯಮಿ ಬೆಂಗಳೂರಿನ ವಿಜಿಯೇಂದ್ರಗೌಡ ಬಂಡವಾಳ ಹೂಡುತ್ತಿದ್ದಾರೆ. ರಾಯಚೂರು ಮೂಲದ ಟಿ.ಹೆಚ್.ಡುಳ್ಳಯ್ಯ ತುರುಕನ ಡೋಣ ಮತ್ತು ರಮೇಶ ಸಲ್ಲೇದ ಉದ್ಬಾಲ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸುಮಾರು 250ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಹಿರಿಯ ರಂಗಕರ್ಮಿ ಕನಸುರಮೇಶ್ ಎರಡನೇ ಅನುಭವ ಎನ್ನುವಂತೆ ಸಿನಿಮಾಕ್ಕೆ ರಚನೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

 

 

 

 

 

ಇದನ್ನೂ ಓದಿ :“MADNESSSSS…’ ಹಿಂದೆ ಬಿದ್ದ ಅನಿಲ್, ಅನಿಲ್ ಹುಚ್ಚು ಕನಸಿಗೆ ಝೈದ್ ಖಾನ್ ಸಾಥ್

 

ರಾತ್ರಿಯಿಂದ ನಾಳೆ ಸಾಯಂಕಾಲದವರೆಗೆ ನಡೆಯುವ ಘಟಾವಳಿಗಳು ನಗುವಂತೆ ಮಾಡುತ್ತದೆ. ಬದುಕಿನಲ್ಲಿ ಗಂಡು-ಹೆಣ್ಣುಗೆ ತಿರುವು ಅಂತ ಬರೋದು ಮದುವೆ ಆದಾಗ ಮಾತ್ರ. ಅದು ಆಗೋದಕ್ಕೆ ಏನೆಲ್ಲಾ ಪ್ರಯತ್ನಗಳು ನಡೆಯುತ್ತವೆ. ಯಾರ‍್ಯಾರು ಅಡ್ಡಿಪಡಿಸುತ್ತಾರೆ. ಇವತ್ತಿನ ವಸ್ತುಸ್ಥಿತಿಯಲ್ಲಿ ಹೆಣ್ಣು ಭ್ರೂಣಹತ್ಯೆಯಿಂದ ಹಳ್ಳಿಗಳಲ್ಲಿ ಹುಡುಗರಿಗೆ ಹುಡುಗಿ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಯಸ್ಸಾದವನಿಗೆ ಮದುವೆ ನಿಶ್ಚಯವಾಗುತ್ತದೆ. ಇದರಿಂದ ಅಲ್ಲಿದ್ದವರಿಗೆಲ್ಲಾ ಕುತೂಹಲ ಹೆಚ್ಚಾಗಿ ಆಹ್ವಾನವಿಲ್ಲದಿದ್ದರೂ ಕಲ್ಯಾಣ ಮಂಟಪಕ್ಕೆ ಬರುತ್ತಾರೆ. ಮುಂದೆ ಆಗಬಹುದಾದ ಘಟನೆಗಳು, ದಲ್ಲಾಳಿಗಳ ಆಟಾಟೋಪ, ಸರ್ಕಾರಿ ನೌಕರಿ ಇರುವವರಿಗೆ ಮಾತ್ರ ಹೆಣ್ಣು ಕೊಡುವುದು ಎಂಬ ಪೋಷಕರ ಧೋರಣೆ. ಇವೆಲ್ಲವು ಕಾಮಿಡಿ ರೂಪದಲ್ಲಿ ಸಾಗುತ್ತದೆ. ಪ್ರತಿಯೊಂದು ಹಂತದಲ್ಲಿ ಸಮಾಜಕ್ಕೆ ಸಂದೇಶ ಸಾರುವ ಹಾಗೂ ಸಿನಿಮಾವು ಕಾಲ್ಪನಿಕ ಆದರೂ ವಾಸ್ತವ ಎನ್ನುವಂತ ದೃಶ್ಯಗಳು ಇರುತ್ತದೆ. ಕ್ಲೈಮಾಕ್ಸ್‌ದಲ್ಲಿ ಆತ ತಾಳಿ ಕಟ್ಟುತ್ತಾನಾ ಇಲ್ಲವಾ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

 

 

 

 

ಇದನ್ನೂ ಓದಿ :“My biggest fear is – being loved by someone ‘’ – Tanisha Kuppanda : chittara exclusive

ರವಿಸಿರಿ, ಗಹನ ಮುಖ್ಯ ಪಾತ್ರದಲ್ಲಿದ್ದರೂ, ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ’ಬೌ ಬೌ ಬಿರಿಯಾನಿ’ ಖ್ಯಾತಿಯ ಜಯರಾಮ್ ಮೊದಲ ಬಾರಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪೋಷಕ ಕಲಾವಿದರುಗಳು ಇಡೀ ಚಿತ್ರವನ್ನು ತೆಗೆದುಕೊಂಡು ಹೋಗುವುದು ವಿಶೇಷ. ಬಹುತೇಕ ಹಾಸ್ಯ ಕಲಾವಿದರ ದಂಡೇ ಇರಲಿದೆ. ತಾರಾಗಣದಲ್ಲಿ ಗಣೇಶ್‌ರಾವ್‌ಕೇಸರ್‌ಕರ್, ಕಿಲ್ಲರ್‌ವೆಂಕಟೇಶ್, ಮಿಮಿಕ್ರಿಗೋಪಿ, ರಂಜನ್‌ಸನತ್, ’ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಜಗ್ಗಪ್ಪ, ಸುಶ್ಮಿತಜಗ್ಗಪ್ಪ, ಗಿಲ್ಲಿನಟ ಇವರೊಂದಿಗೆ ಸಂತನಟರಾಜ್, ಸಿಲ್ಲಿಲಲ್ಲಿ ಶ್ರೀನಿವಾಸಗೌಡ, ಸಾಹಳ್ಳಿ ರಮೇಶ್, ಅನಿಲ್‌ಕುಮಾರ್, ಪ್ರಸನ್ನ, ಸುಜಾತಹಿರೇಮಠ್ ಮುಂತಾದವರು ನಟಿಸುತ್ತಿದ್ದಾರೆ.

 

 

 

 

ಇದನ್ನೂ ಓದಿ :ಮಾದೇವ’ನಿಗಾಗಿ ವಿನೋದ್ ಪ್ರಭಾಕರ್ ಡೆಡಿಕೇಷನ್ : ಮೂಕನಾಗಿ ಶೂಟಿಂಗ್ ಮುಗಿಸಿದ `ಮಾದೇವ’

ರವಿಕುಮಾರ್ ಕಪ್ಪುಸೋಗೆ ಸಾಹಿತ್ಯದ ಮೂರು ಹಾಡುಗಳಿಗೆ ಮನು ರಾವ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೀಪಕ್‌ಕುಮಾರ್.ಜೆ.ಕೆ, ಸಂಕಲನ ಜಾಬ್ಸನ್, ಸಂಭಾಷಣೆ ದಿಲೀಪ್‌ಸಂಜೀವ್ ಅವರದಾಗಿದೆ. ಮೈಸೂರು ಮತ್ತು ಮಂಡ್ಯ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

 

 

Spread the love
Translate »
Right Ad