ಕಲರ್ಸ್ ಕನ್ನಡದಲ್ಲಿ ಒಂದೊಂದು ಧಾರಾವಾಹಿಯೂ ವಿಭಿನ್ನ ಕಥೆ, ಕುತೂಹಲವನ್ನು ಹೊಂದಿವೆ. ಪ್ರತಿದಿನ ರೋಚಕ ಟ್ವಿಸ್ಟ್‌ಗಳನ್ನು ನೀಡುತ್ತಿದೆ. ಎಲ್ಲಾ ಧಾರಾವಾಹಿಗೂ ಅಭಿಮಾನಿ ಬಳಗವೇ ಇದೆ. ಇಷ್ಟು ದಿನ ಸೋಮವಾರದಿಂದ ಶುಕ್ರವಾರದವರೆಗೂ ಮಾತ್ರ ಧಾರಾವಾಹಿ ಪ್ರಸಾರವಾಗುತ್ತಿತ್ತು. ಆದರೆ ಇನ್ಮುಂದೆ ಇಡೀ ವಾರ ಧಾರಾವಾಹಿ ಪ್ರಸಾರವಾಗಲಿದೆ. ಶುಕ್ರವಾರ ಕೊಟ್ಟ ಟ್ವಿಸ್ಟ್‌ನಿಂದ ಉತ್ತರಕ್ಕಾಗಿ ಸೋಮವಾರದವರೆಗೂ ಕಾಯುವ ಅವಶ್ಯಕತೆ ಇರುವುದಿಲ್ಲ.
ಕರಿಮಣಿ, ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ, ಶ್ರೀಗೌರಿ, ದೃಷ್ಟಿಬೊಟ್ಟು, ನಿನಗಾಗಿ ಎಲ್ಲಾ ಧಾರಾವಾಹಿಗಳು ವಾರವಿಡಿ ರಂಜಿಸಲಿದೆ. ಇದು ವೀಕ್ಷಕರಿಗೆ ಸಹಜವಾಗಿಯೇ ಖುಷಿ ಕೊಟ್ಟಿದೆ. ಬರುತ್ತಿರುವ ಒಂದೊಂದು ಧಾರಾವಾಹಿಯಲ್ಲೂ ಅಷ್ಟು ಕುತೂಹಲ ಮನೆ ಮಾಡಿದೆ. ಅದಕ್ಕೆಲ್ಲಾ ಯಾವಾಗ ಬ್ರೇಕ್ ಸಿಗಲಿದೆ ಎಂದೇ ಕಾಯುತ್ತಿದ್ದಾರೆ.
ಕರಿಮಣಿಯಲ್ಲಿ ಬ್ಲಾಕ್ ರೋಸ್, ಭಾಗ್ಯಲಕ್ಷ್ಮೀಯಲ್ಲಿ ತಾಂಡವ್-ಶ್ರೇಷ್ಠಾ ನಿಜರೂಪ ಬಯಲಾಗುವುದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಯ ಬಂಡವಾಳ ತಿಳಿಯುವುದು, ಶ್ರೀಗೌರಿಯಲ್ಲಿ ಅಪ್ಪು ಗೆಲುವು, ನಿನಗಾಗಿಯಲ್ಲಿ ಜೀವಾ-ರಚನಾ ಮದುವೆಯಾಗುವುದು, ದೃಷ್ಟಿಬೊಟ್ಟುವಿನಲ್ಲಿ ಶರಾವತಿಯ ಕರಾಳ ಮುಖ ದತ್ತನಿಗೆ ತಿಳಿಯುವುದು. ಈ ಎಲ್ಲವೂ ಕುತೂಹಲ ಘಟ್ಟದಲ್ಲಿ ಸಾಗುತ್ತಿದೆ. ಹೀಗಾಗಿ ಇಡೀ ವಾರವೂ ಪ್ರಸಾರವಾದರೆ ಅಲ್ಲಿಯೇ ಉತ್ತರ ಸಿಕ್ಕಿ ಬಿಡುತ್‌ತದೆ. ಒಳ್ಳೆಯ ಮನರಂಜನೆಯೂ ಸಿಗಲಿದೆ.