ಇಷ್ಟು ದಿನ ಲಕ್ಷ್ಮೀಬಾರಮ್ಮ ಧಾರಾವಾಹಿ ನೋಡುತ್ತಿದ್ದವರಿಗೆ ನಿಜಕ್ಕೂ ಲಕ್ಷ್ಮೀ ಮೇಲೆ ಕೀರ್ತಿ ಆತ್ಮ ಬರುತ್ತಿದೆ ಎಂಬ ಅನುಮಾನವೇ ಇತ್ತು. ಆದರೆ ಕೀರ್ತಿ ಸಾವಿನ ಸತ್ಯ ತಿಳಿದುಕೊಳ್ಳುವುದಕ್ಕಾಗಿ ಲಕ್ಷ್ಮೀ ಮಾಡುತ್ತಿರುವ ನಾಟಕವಿದು ಎಂಬುದು ನಿನ್ನೆಯ ಎಪಿಸೋಡಿನಲ್ಲಿ ಅರ್ಥವಾಗಿದೆ. ಕೀರ್ತಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಕಾರುಣ್ಯ ಒಂದು ಸತ್ಯವನ್ನು ಹೇಳಿದ್ದಾಳೆ. ಕೀರ್ತಿಯ ಸಾವಿಗೆ ಕಾವೇರಿಯೇ ಕಾರಣ. ಕೀರ್ತಿಯ ರೂಮಿನಲ್ಲಿ ಒಂದು ಡೈರಿ ಇದೆ ಅದನ್ನು ಓದಿದರೆ ನಿನಗೆ ಎಲ್ಲವೂ ಅರ್ಥವಾಗುತ್ತೆ ಅಂತ.
ಕೀರ್ತಿಯ ಸಾವಿನ ಹಿಂದಿನ ಸತ್ಯ ತಿಳಿದುಕೊಳ್ಳಬೇಕು ಅಂದ್ರೆ ದೆವ್ವ ಬಂದಿರುವ ನಾಟಕವಾಡಲೇಬೇಕಾಗಿತ್ತು. ಅದಕ್ಕೆ ಗಂಗಾಳ ಸಹಾಯವನ್ನು ತೆಗೆದುಕೊಂಡಿದ್ದಾಳೆ. ಕಾವೇರಿಗೆ ಭ್ರಮೆ, ಭಯ ಎರಡು ಒಟ್ಟೊಟ್ಟಿಗೆ ಕಾಡುವುದಕ್ಕೆ ಶುರುವಾಗಿದೆ. ಹೀಗಾಗಿಯೇ ಲಕ್ಷ್ಮೀಯ ಹಾವಭಾವದಲ್ಲಿ ಸ್ವಲ್ಪ ಬದಲಾವಣೆಯಾದರು ಕೀರ್ತಿಯೇ ಅವಳ ಮೈಮೇಲೆ ಬಂದಿದ್ದಾಳೆ ಎಂಬ ನಿರ್ಧಾರಕ್ಕೆ ಬರುತ್ತಿದ್ದಾಳೆ. ದೆವ್ವ ಬಿಡಿಸಲು ಹೋಗಿ ಮನೆಯವರ ಮುಂದೆಲ್ಲ ಕೆಟ್ಟವಳಾಗಿದ್ದಾಳೆ. ಈಗಲೂ ಕಾವೇರಿ ಭಯದಲ್ಲಿಯೇ ಬದುಕುತ್ತಿದ್ದಾಳೆ.
ಮನೆಯವರೆಲ್ಲರ ಮುಂದೆ ಕೀರ್ತಿ ವಿಚಾರ ಎತ್ತಿದಾಗ ಕಾವೇರಿಯ ಆತಂಕ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಸುಪ್ರೀತಾ ಬೇರೆ ಕೀರ್ತಿಗೆ ನೀವೇ ಏನೋ ಮಾಡಿರಬೇಕು ಎಂದು ಮಾತು ಶುರು ಮಾಡಿದ್ದಾಳೆ. ಲಕ್ಷ್ಮೀ ಸತ್ಯ ತಿಳಿಯುವ ತನಕ ಕಾಡುವುದಕ್ಕೆ ಬಿಡುವುದಿಲ್ಲ. ಆಗಾಗ ಧ್ವನಿ ಬದಲಾಯಿಸಿಕೊಂಡು ಹೇಳಿ ಅತ್ತೆ ಸತ್ಯವನ್ನ ಎಂದು ಕಾಡುತ್ತಿದ್ದಾಳೆ. ಕಾವೇರಿಗೆ ಅತ್ತೆಗೆ ಮಾಡಿದ ಅನ್ಯಾಯ, ಕೀರ್ತಿಯನ್ನು ಕೊಂದ ಭಯ ಹೆಚ್ಚಾಗಿದೆ. ಎಲ್ಲರ ಮುಂದೆ ಸತ್ಯ ಒಪ್ಪಿಕೊಳ್ಳುವಷ್ಟು ಧೈರ್ಯವೂ ಇಲ್ಲ, ಕೊಲೆಯನ್ನು ಮುಚ್ಚಾಕುವಷ್ಟು ಐಡಿಯಾವೂ ಅವಳ ಬಳಿ ಇಲ್ಲ. ಲಕ್ಷ್ಮೀಯ ನಾಟಕಕ್ಕೆ ಒಂದಲ್ಲ ಒಂದು ದಿನ ಕಾವೇರಿ ಸತ್ಯವನ್ನು ಹೇಳಿಯೇ ಹೇಳುತ್ತಾಳೆ.