ಭಾಗ್ಯಲಕ್ಷ್ಮೀ ಧಾರಾವಾಹಿ 700 ಸಂಚಿಕೆಗಳನ್ನು ಪೂರೈಸಿದೆ. ಈ ಖುಷಿ ಒಂದು ಕಡೆಯಾದರೆ ಮತ್ತೊಂದು ಕಡೆ ಹೊರ ಜಗತ್ತಿನ ಎಲ್ಲಾ ಹೆಣ್ಣು ಮಕ್ಕಳಿಗಾಗಿ ಕಲರ್ಸ್ ಕನ್ನಡ ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದೆ. ನಾನು ಭಾಗ್ಯ ಎಂಬ ಅಭಿಯಾನವನ್ನು #IAMBHAGYA ನೊಂದಿಗೆ ಶುರು ಮಾಡಿದೆ. ಭಾಗ್ಯ ಈಗ ದಿಟ್ಟ ಮಹಿಳೆಯಾಗಿದ್ದಾಳೆ. ಆ ಧೈರ್ಯ ಹೊರ ಜಗತ್ತಿನ ಮಹಿಳೆಯರಿಗೂ ಸ್ಪೂರ್ತಿಯಾಗಬೇಕಾಗಿದೆ. ಇದೇ ಉದ್ದೇಶ ಕಲರ್ಸ್ ಕನ್ನಡದ್ದು.
ತಾಂಡವ್‌ಗೆ ಶ್ರೇಷ್ಠಾ ಸಿಕ್ಕ ಮೇಲೆ ಭಾಗ್ಯ ದಡ್ಡಿಯಂತೆ ಕಾಣುವುದಕ್ಕೆ ಶುರು ಆಯ್ತು. ಮಾತಿಗೆ ಮುನ್ನ ಹೆಂಡತಿಯನ್ನ ದಡ್ಡಿ, ಎಮ್ಮೆ ಎನ್ನುವುದಕ್ಕೆ ಶುರು ಮಾಡಿದ. ಎಸ್ಎಸ್ಎಲ್ಸಿ ಕೂಡ ಪಾಸ್ ಮಾಡಿಲ್ಲ ಎಂದ. ಅತ್ತೆ ಹಠ ಮಾಡಿದಳು. ಓದು ಎಂದಳು. ಭಾಗ್ಯಾ ಬುದ್ದಿವಂತೆ. ಮಗಳ ಜೊತೆಗೆ ಶಾಲೆಗೆ ಸೇರಿ ಎಸ್ಎಸ್ಎಲ್ಸಿ ಪಾಸ್ ಮಾಡಿದಳು. ಇದನ್ನು ಸಹೊಸದ ತಾಂಡವ್ ಡಿವೋರ್ಸ್ ಬೇಕು ಅಂದ, ಮನೆಯಲ್ಲಿ ಅರ್ಧ ಖರ್ಚು ಕೇಳಿದ. ಆಗ ಭಾಗ್ಯಾ ಮಾಡಿದ್ದೆ ತನಗೆ ಬರುವ ಅಡುಗೆಯನ್ನೇ ಬಂಡವಾಳ ಮಾಡಿಕೊಂಡು ಕೆಲಸ ಹುಡುಕಿದಳು. ಒಳ್ಳೆಯ ಫೈವ್ ಸ್ಟಾರ್ ಹೊಟೇಲ್ ಗೆ ಕೆಲಸಕ್ಕೆ ಹೋದಳು. ತಾಂಡವ್‌ಗೆ ಸರಿಸಮಾನವಾಗಿ ದುಡಿಯುವುದಕ್ಕೆ ಶುರು ಮಾಡಿದಳು. ಇಲ್ಲಿಯೂ ತಾಂಡವ್‌ಗೆ ಸಹಿಸಲಾಗದೆ ರಂಪಾಟ ಮಾಡಿದ. ಶ್ರೇಷ್ಠಾ ಹಾಗೂ ತಾಂಡವ್ ಕಳ್ಳಾಟವೂ ಭಾಗ್ಯಾ ಮುಂದೆ ಬಯಲಾಯ್ತು. ಆದ್ರೆ ಈಗ ಭಾಗ್ಯ ಎಲ್ಲವನ್ನು ಸಹಿಸಿಕೊಂಡು, ಮೂಲೆಯಲ್ಲಿ ಕೂತು ಕಣ್ಣೀರು ಹಾಕುವವಳಲ್ಲ. ಬದುಕು ನಂದೆ, ಅತ್ತೆ ಮಾವನು ನನ್ನವರೆ, ಬದುಕಿ ತೋರಿಸುತ್ತೀನಿ ಎಂದು ಧೈರ್ಯದಿ ಹೇಳುವವಳಾಗಿದ್ದಾಳೆ.
ಒಂದು ಹೆಣ್ಣು ಎಲ್ಲವನ್ನು ಸಹಿಸುತ್ತಾಳೆ. ಆದರೆ ತಾನಿದ್ದೂ ಇನ್ನೊಬ್ಬಳ ಜೊತೆಗೆ ಸಂಸಾರ ಹಂಚಿಕೊಳ್ಳಲ್ಲ. ಬದಲಾಗದ ಗಂಡನನ್ನ ಬಿಟ್ಟು ಭಾಗ್ಯ ನಡೆದಿದ್ದಾಳೆ. ವೀಕ್ಷಕರೆಲ್ಲರೂ ಈಗ ಭಾಗ್ಯಾಗೆ ಸಪೋರ್ಟ್. ಕಲರ್ಸ್ ಕನ್ನಡ ಕೂಡ ಈಗ ನಾನು ಭಾಗ್ಯ ಎಂಬ ಅಭಿಯಾನ ಶುರು ಮಾಡಿದೆ. ತನ್ನನ್ನು ತಾನು ಕಂಡುಕೊಂಡ ಭಾಗ್ಯಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು ಹಾಗೂ ಧೈರ್ಯವನ್ನು ಸಂಭ್ರಮಿಸುವುದೇ “ನಾನು ಭಾಗ್ಯ” ಅಭಿಯಾನದ ಗುರಿಯಾಗಿದೆ.
ಈ ಅಭಿಯಾನಕ್ಕೆ ಎಲ್ಲಾ ಮಹಿಳೆಯರ ಬೆಂಬಲವೂ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಟ್ರೆಂಡಿಂಗ್‌ನಲ್ಲಿದೆ. ಭಾಗ್ಯಳ ಮುಂದಿನ ಹೆಜ್ಜೆಗಳು ಅವಳನ್ನು ಎಲ್ಲಿಗೆ ಕರೆದೊಯ್ಯಲಿವೆ ಎಂಬ ಕುತೂಹಲ ತಣಿಯಲು ನೀವು ಕಲರ್ಸ್ ಕನ್ನಡ ವೀಕ್ಷಿಸುವುದನ್ನು ಮರೆಯಬೇಡಿ.