ಬರ್ತ್ಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಸ್ಟಾರ್ ಅಂದ್ರೆ ಕಾಫಿನಾಡು ಚಂದು. ತನ್ನ ಪ್ರತಿ ವೀಡಿಯೋದಲ್ಲೂ ತಾನು ಶಿವಣ್ಣ ಮತ್ತು ಪುನೀತ್ ಅವರ ಅಭಿಮಾನಿ ಎಂದು ಹೇಳಿಯೇ ಬರ್ತ್ಡೇ ಸಾಂಗ್ ಅನ್ನು ಹೇಳುತ್ತಿದ್ದರು. ಜತೆಗೆ ಸಾಕಷ್ಟು ಬಾರಿ ತಾವು ಶಿವಣ್ಣ ಅವರನ್ನ ಭೇಟಿಯಾಗಬೇಕು ಎಂದು ಹೇಳಿಕೊಂಡಿದ್ದರು. ಈಗ ಆ ಆಸೆ ನೆರವೇರಿದೆ. ಕೊನೆಗೂ ಶಿವಣ್ಣ ಅವರನ್ನ ಭೇಟಿಯಾಗಿ ತಮ್ಮ ಮಹಾದಾಸೆಯನ್ನ ಈಡೇರಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಕಾಫಿನಾಡು ಚಂದು ಶೇರ್ ಮಾಡಿದ್ದಾರೆ.
https://www.instagram.com/p/Chb7lxtLq9-/
ಅವರ ಬಹುದಿನದ ಕನಸು ಅವರ ಆರಾಧ್ಯ ದೈವ ಹ್ಯಾಟ್ರಿಕ್ ಹೀರೋ ಶಿವಣ್ಣನನ್ನು ಭೇಟಿ ಮಾಡುವ ಸುದಿನ ಕಾಫೀ ನಾಡು ಚಂದು ಗೆ ಬಂದಿದೆ. ಅದೂ ಕೂಡ ಕರ್ನಾಟಕದ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡಾನ್ಸ್ ಮೂಲಕ…!! ಹೌದು ಯಾರೇ ಹೊಗಳಲಿ ಅಥವಾ ತೆಗಳಲಿ ಕಾಫಿ ನಾಡು ಚಂದು ಅವರು ಶಿವಣ್ಣ ಜಡ್ಜ್ ಮಾಡುತ್ತಿರುವ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಶೋ ಡಾನ್ಸ್ ಕರ್ನಾಟಕ ಡಾನ್ಸ್ ಗೆ ಎಂಟ್ರಿ ಕೊಟ್ಟಿದ್ದು ‘ನನಗೆ ಯಾರು ಏನು ಮಾಡುವರು” ಎಂದು ಶಿವಣ್ಣನ ಮುಂದೆ ಹಾಡಿರುವ ವಿಡಿಯೋ ಒಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.