Left Ad
ಚಿತ್ತಾರಮ್ಯೂಸಿಕ್‌ಅವಾರ್ಡ್‌-2025; ಧರೆಗಿಳಿದ ಗಾನ ಗಂಧರ್ವ ಲೋಕ - Chittara news
# Tags

ಚಿತ್ತಾರಮ್ಯೂಸಿಕ್‌ಅವಾರ್ಡ್‌-2025; ಧರೆಗಿಳಿದ ಗಾನ ಗಂಧರ್ವ ಲೋಕ

ಕನ್ನಡ ಚಿತ್ರರಂಗ ಮತ್ತು ಸಿನಿಮಾಸಕ್ತ ಓದುಗರನ್ನು ಬೆಸೆಯುವ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿರುವ ಕರ್ನಾಟಕದ ಹೆಮ್ಮೆಯ ಸಂಸ್ಥೆ ಚಿತ್ತಾರ. ಇಂದು ಜನಮನ್ನಣೆ ಗಳಿಸಿದ ಅನೇಕ ಪ್ರತಿಭಾವಂತರ ಕುರಿತು ಮೊದಲ ಬಾರಿಗೆ ಬೆಳಕು ಚೆಲ್ಲಿದ ಪತ್ರಿಕೆಯೆಂಬ ಹೆಮ್ಮೆ ಚಿತ್ತಾರಕ್ಕಿದೆ.

ಈ ಹಿಂದೆ ‘ಚಿತ್ತಾರ ಶಾರ್ಟ್ ಫಿಲ್ಡ್ ಅವಾರ್ಡ್ಸ್’, ‘ಚಿತ್ತಾರ ಸನ್ಮಾನ’, ‘ಅಭಿಮಾನಿಯೊಂದಿಗೆ ತಾರೆ’, ‘ಎ ಡೇ ವಿತ್ ಸ್ಟಾರ್’, ‘ಚಿತ್ತಾರ ಸ್ಟಾರ್ ಅವಾರ್ಡ್ಸ್’.. ಸೇರಿದಂತೆ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದ ಹೆಗ್ಳಳಿಕೆ ‘ಚಿತ್ತಾರ’ ಹೊಂದಿದೆ. ಕನ್ನಡ ಹಾಡುಗಳ ಮಾರುಕಟ್ಟೆ ವಿಸ್ತರಿಸಲೆಂದೇ ‘ಸಿ ಮ್ಯೂಸಿಕ್’ ಎಂಬ‌ ಆಡಿಯೋ ಸಂಸ್ಥೆ ಆರಂಭಿಸಿದ ಹಿರಿಮೆ ಚಿತ್ತಾರದ್ದು. ನಮ್ಮ ಚಂದನವನವನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ ಪ್ರತಿವರ್ಷ ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ.

ಈ ಎಲ್ಲಾ ಯೋಚನೆಗಳನ್ನು, ಯೋಜನೆಗಳನ್ನು ಜಗಮೆಚ್ಚುವಂತೆ ಮಾಡಿದ್ದು ‘ಮಾಧ್ಯಮ ಲೋಕದ ಕನಸುಗಾರ’ ಎಂದೇ ಕರೆಯಲ್ಪಡುವ ಚಿತ್ತಾರ ಪತ್ರಿಕೆಯ ಸಂಸ್ಥಾಪಕ ಕೆ. ಶಿವಕುಮಾರ್.  ಅವರು ತಮ್ಮ ಯಶಸ್ಸಿನ ಅಷ್ಟೂ ಶ್ರೇಯಸ್ಸನ್ನು ಕನ್ನಡ ಚಿತ್ರರಸಿಕರು ಮತ್ತು ಚಿತ್ತಾರ ಓದುಗರಿಗೆ ಅರ್ಪಿಸುವ ಇವರ ಪರಿಶ್ರಮ, ಶ್ರದ್ಧೆಯೇ ಚಿತ್ತಾರವನ್ನು ಮುಗಿಲೆತ್ತರಕ್ಕೆ ಬೆಳೆಸುತ್ತಿದೆ.

 ಚಿತ್ತಾರದ ಕಾರ್ಯಕ್ರಮವೆಂದರೆ ಸ್ಯಾಂಡಲ್‌ವುಡ್‌ನ ಗಣ್ಯಾತಿಗಣ್ಯರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ತುಂಬು ಪ್ರೀತಿ ಮತ್ತು ಅಭಿಮಾನದಿಂದ ಪಾಲ್ಗೊಳ್ಳುತ್ತಿರುವುದು ಚಿತ್ತಾರ ಗಳಿಸಿದ ಜನಮನ್ನಣೆಗೆ ಸಾಕ್ಷಿ.  ಪ್ರಸ್ತುತ ಚಿತ್ತಾರ ಸಂಸ್ಥೆ ಪ್ರಮುಖ ದೃಶ್ಯಮಾಧ್ಯಮಗಳ ಮೂಲಕ ತಾನು ಆಯೋಜಿಸಿದ ಪ್ರತಿ ಕಾರ್ಯಕ್ರಮವು ಕೋಟ್ಯಾಂತರ ಕನ್ನಡಿಗರನ್ನು ತಲುಪುವಂತೆ ಮಾಡಿದೆ. ಈಗ ಹೊಸತೊಂದು ವಿಭಿನ್ನ ಸಂಗೀತ ಕ್ರಾಂತಿಗೆ ‘ಚಿತ್ತಾರ’ ಮುನ್ನುಡಿ ಬರೆದಿದೆ. 

ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರರಂಗದ ಮತ್ತು ಸಂಗೀತ ಲೋಕದ ಸಾಧಕರನ್ನು ಗುರುತಿಸಿ, ಗೌರವಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಸಿನಿಮಾ ಯಶಸ್ಸಿಗೆ ಹಾಡುಗಳೇ ಮುನ್ನುಡಿ ಬರೆಯುತ್ತದೆ ಎಂಬುದನ್ನು ನಂಬಿರುವ ಚಿತ್ತಾರ,  ‘ಚಿತ್ತಾರ ಮ್ಯೂಸಿಕ್ ಅವಾರ್ಡ್ಸ್ – 2025’ ಆಯೋಜಿಸುವ ಮೂಲಕ ಪ್ರತಿವರ್ಷ ಕನ್ನಡ ಚಿತ್ರಲೋಕಕ್ಕೆ ಮತ್ತು ಸಂಗೀತ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಸಂಗೀತ ನಿರ್ದೇಶಕರನ್ನು, ಗಾಯಕ ಗಾಯಕಿಯರನ್ನು ಸನ್ಮಾನಿಸಿ ಗೌರವಿಸಲಿದೆ.

ಇಲ್ಲಿ ಸಾಧಕರನ್ನು ನೇರವಾಗಿ ಆನ್ ಲೈನ್ ವೋಟಿಂಗ್ ಮೂಲಕ ಜನರೇ ಆಯ್ಕೆ ಮಾಡಿರುವುದು ಮತ್ತೊಂದು ವಿಶೇಷ. ಚಂದನವನದ ಮತ್ತು ಸಂಗೀತ ಕ್ಷೇತ್ರದ ಯುವಪ್ರತಿಭೆಗಳನ್ನು ಹಾಗೂ  ಸಂಗೀತ ಸಾಧಕರನ್ನು ಗುರುತಿಸಿ ಸನ್ಮಾನಿಸಲು  ಚಿತ್ತಾರ ಮ್ಯೂಸಿಕ್ ಅವಾರ್ಡ್ಸ್ವೇದಿಕೆಯಾಗಬೇಕೆಂಬುದೇ ಚಿತ್ತಾರ ತಂಡದ ಆಶಯ. ಕನ್ನಡದ ಅಸಾಧಾರಣ ನವ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಕನ್ನಡ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇನ್ನಷ್ಟು ವೇಗ ನೀಡುವ ಉದ್ದೇಶದಿಂದಲೇ ಚಿತ್ತಾರ ಮ್ಯೂಸಿಕ್ ಅವಾರ್ಡ್ಸ್-2025′ ಹೆಸರಿನಲ್ಲಿ ಮೊದಲ ಆವೃತ್ತಿಯನ್ನು ಹೆಮ್ಮೆಯಿಂದ ʻಚಿತ್ತಾರʼ ಕನ್ನಡಿಗರ ಮುಂದಿಟ್ಟಿದೆ.

‘ಚಿತ್ತಾರ ಮ್ಯೂಸಿಕ್ ಅವಾರ್ಡ್ಸ್-2025’  ಮೂವತ್ತಕ್ಕೂ ಹೆಚ್ಚು ವಿಭಾಗದಲ್ಲಿ  ಇನ್ನೂರ ಐವತ್ತಕ್ಕೂ ಹೆಚ್ಚು ಪ್ರತಿಭೆಗಳು ನಾಮನಿರ್ದೇಶನಗೊಂಡಿದ್ದು, ವೆಬ್ ಸೈಟ್ ಮೂಲಕ ವೋಟಿಂಗ್ ಪ್ರಕ್ರಿಯೆ ನಡೆದಿತ್ತು. ಪ್ರತೀ ವಿಭಾಗದಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದ್ದು, ಪಬ್ಲಿಕ್ ವೋಟಿಂಗ್‌ನ್ನು ಆಧಾರವಾಗಿಟ್ಟುಕೊಂಡು ‘ಆಯ್ಕೆ ಸಮಿತಿ’ ಸದಸ್ಯರು ಅಸಲಿ ಪ್ರತಿಭೆಗಳಿಗೆ ನ್ಯಾಯ ಸಲ್ಲಿಸಲಿದ್ದಾರೆ.

ಕನ್ನಡ ಚಿತ್ರರಂಗ ಮತ್ತು  ಸಂಗೀತ ಕ್ಷೇತ್ರದ ಹೆಮ್ಮೆಯ ಗಾಯಕಗಾಯಕಿಯರಾಗಿರಾಗಿಸಂಗೀತ ನಿರ್ದೇಶಕರಾಗಿ ಸಂಗೀತ ಲೋಕದ ಬೆಳವಣಿಗೆಗೆ ನೀವು ನೀಡಿದ ಕೊಡುಗೆ ದೊಡ್ಡದು. ನಿಮ್ಮ ಸಾಧನೆಯನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ.  ಈ ಕರ್ತವ್ಯವನ್ನು ಚಿತ್ತಾರ ಜವಾಬ್ದಾರಿಯುತವಾಗಿ ನಿರ್ವಹಿಸಿದೆ.

ಬಾರಿಯ ಸಂಗೀತಮಯ ಸಂಜೆಗೆ ಇಡೀ ದಕ್ಷಿಣ ಭಾರತ ಚಿತ್ರರಂಗ ಸಾಕ್ಷಿಯಾಗಿದ್ದು, ಚಿತ್ತಾರ ಮ್ಯೂಸಿಕ್ ಅವಾರ್ಡ್ಸ್-2025′ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸದವರ ಪಟ್ಟಿ ಈ ಕೆಳಗಿನಂತಿದೆ.

Spread the love
Translate »
Right Ad