ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಸರ್ಕಸ್’ .ಈ ಚಿತ್ರ ಜೂನ್ 23 ರಂದು ಬಿಡುಗಡೆಯಾಗಿ, ಯಶಸ್ವಿ ಒಂದು ವಾರ ಪೂರೈಸಿದೆ. ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. “ಸರ್ಕಸ್” ಚಿತ್ರದ ಸಕ್ಸಸ್ ಖುಷಿಯನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.
ಇನ್ನೂ ಓದಿ *ಅತೀ ಶೀಘ್ರದಲ್ಲಿ ರಿಲೀಸ್ ಆಗಲಿದೆ ಬಹುನಿರೀಕ್ಷಿತ, ಮಾನಸ ಜೋಶಿ ಅಭಿನಯದ `ಎವಿಡೆನ್ಸ್’ ಚಿತ್ರದ ಟೀಸರ್*
‘ಮೊದಲ ವಾರ ನಮ್ಮ ಸಿನಿಮಾ 37 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಎರಡನೇ ವಾರ ಚಿತ್ರಮಂದಿರಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದು ಮೊದಲ ಪ್ಯಾನ್ ಇಂಡಿಯಾ ತುಳು ಸಿನಿಮಾ ಕೂಡ. “ಸರ್ಕಸ್” ಸುಮಾರು 13 ದೇಶಗಳಲ್ಲಿ ಬಿಡುಗಡೆಯಾಗಿದೆ. ಸದ್ಯ ಸಿನಿಮಾ ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿದೆ’ .
ಇನ್ನೂ ಓದಿ ಹೊಸ ಬ್ಯುಸಿನೆಸ್ ಗೆ ಕಾಲಿಟ್ಟ ಅಲ್ಲು ಅರ್ಜುನ್; ಹೇಗಿದೆ ಸ್ಟೈಲೀಶ್ ಸ್ಟಾರ್ ಒಡೆತನದ AAA ಸಿನಿಮಾಸ್…?
“ಸರ್ಕಸ್” ಗೂ ನಮ್ಮ ಚಿತ್ರಕ್ಕೂ ಏನು ಸಂಬಂಧವಿಲ್ಲ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜೊತೆಗೆ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರ. ನಮ್ಮ ಜೀವನದಲ್ಲಿ ಬರುವ “ಸರ್ಕಸ್” ಗಳನ್ನು ಹೇಗೆ ಎದರಿಸುತ್ತೇವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ರೂಪೇಶ್ ಶೆಟ್ಟಿ ಮಾಹಿತಿ ನೀಡಿದರು. ರೂಪೇಶ್ ಶೆಟ್ಟಿ ಅವರಿಗೆರಚನಾ ನಾಯಕಿಯಾಗಿ ನಟಿಸಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್, ಯಶ್ ಶೆಟ್ಟಿ , ಭೋಜರಾಜ ವಾಮಂಜೂರು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ‘ಶೋಲಿನ್ ಫಿಲಂಸ್’, ‘ಆರ್. ಎಸ್ ಸಿನಿಮಾಸ್’, ‘ಮುಗ್ರೊಡಿ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.ಅವಿನಾಶ್ ಶೆಟ್ಟಿ, ಯಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮುಂತಾದವರು “ಸರ್ಕಸ್” ಬಗ್ಗೆ ಮಾತನಾಡಿದರು.