ಸೂಪರ್‌ಹಿಟ್ ಹಾಡುಗಳ ಮೂಲಕ ಗಾಯಕ, ಸಂಗೀತ ನಿರ್ದೇಶಕರಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಟನಾ ಜರ್ನಿಗೂ ಪ್ರೇಕ್ಷಕರಿಂದ ಪ್ರೀತಿಯ ಸ್ವಾಗತ ಸಿಕ್ಕಿದೆ. ‘ಚುಕ್ಕಿತಾರೆ’ ಎನ್ನುವ ಧಾರಾವಾಹಿಯಲ್ಲಿ ನವೀನ್ ಸಜ್ಜು ಅವರು ನಾಯಕನ ಪಾತ್ರ ಮಾಡುತ್ತಿದ್ದಾರೆ. ಬೇರೆ ಧಾರಾವಾಹಿಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನವಾಗಿ ಮೂಡಿಬರುತ್ತಿದೆ
ಇದನ್ನೂ ಓದಿ:ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ
ಕಿರುತೆರೆಯ ಹೊಸ ಧಾರಾವಾಹಿ ‘ಚುಕ್ಕಿತಾರೆ’ಯ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ ಗಾಯಕ ನವೀನ್ ಸಜ್ಜು. ಅವರ ಪಾತ್ರ ಮತ್ತು ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ಹೀರೊ ಆಗಿ ನಟಿಸುತ್ತಿರುವ ಅವರು ಈ ಮೂಲಕ ಹಿರಿತೆರೆಯಲ್ಲಿಯೂ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಹೊಸ ಭರವಸೆ
ಈ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿರುವ ನವೀನ್ ಸಜ್ಜು, ‘ಉತ್ತಮ ಪಾತ್ರದ ಮೂಲಕ ಕಿರುತೆರೆಯಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿ ಇದೆ. ಅಪ್ಪ ಮಗಳ ಪ್ರೀತಿಯ ಬೆಸುಗೆಯ ಕಥೆಯಲ್ಲಿ ಪುಟ್ಟ ಮಗಳ ತಂದೆಯಾಗಿ ನಟಿಸುತ್ತಿದ್ದೇನೆ. ಈ ಪಾತ್ರ ಬಹಳ ಬೇಗ ಜನರ ಮನಸ್ಸಿಗೆ ತಲುಪಿದೆ. ಹೊಸ ಅನುಭವ ನನ್ನಲ್ಲಿ ಹೊಸ ಹೊಸ ಭರವಸೆ ಮೂಡಿಸಿದೆ. ನನ್ನ ನಟನಾ ವೃತ್ತಿಗೆ ಉತ್ತಮ ಅಡಿಪಾಯ ಒದಗಿಸಿದೆ ಈ ಪಾತ್ರ’ ಎಂದಿದ್ದಾರೆ.
ಇದನ್ನೂ ಓದಿ :‘ಮ್ಯಾಕ್ಸ್’ ಬಗ್ಗೆ ಬಿಗ್ ಅಪ್ಡೇಟ್ ಕೊಟ್ರು ಕಿಚ್ಚ ಸುದೀಪ್
ನಟನೆ ಮೇಲೆ ವಿಶೇಷ ಒಲವು
ವಿಶಿಷ್ಟ ಧ್ವನಿಯ ಮೂಲಕ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿರುವ ನವೀನ್ ಸಜ್ಜುಗೆ ಮೊದಲಿನಿಂದಲೂ ನಟನೆ ಮೇಲೆ ವಿಶೇಷ ಒಲವು. ‘ಗಾಯಕನಾಗಿ ಗುರುತಿಸಿಕೊಳ್ಳುವ ಮೊದಲು ನನಗೆ ನಟನೆ ಮೇಲೆ ಆಸಕ್ತಿ ಇತ್ತು. ಹೀಗಾಗಿ ನಾನು ರಂಗಭೂಮಿಯಲ್ಲಿ ಸಕ್ರಿಯನಾಗಿ, ಉತ್ತಮ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೆ. ಅಂತಹ ಪಾತ್ರಗಳು ಈಗ ನನ್ನನ್ನು ಅರಸಿ ಬಂದಿವೆ. ನಾನು ಸಿನಿಮಾಗಳಲ್ಲೂ ನಟಿಸುತ್ತಿದ್ದೇನೆ. ನನ್ನ ಸಿನಿಮಾ ನಟನೆಗೆ ಕಿರುತೆರೆ ಅನುಭವ ಉತ್ತಮ ಸಹಕಾರ ನೀಡಿದೆ. ಇಂಥ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ, ಆದರೆ ನನಗೆ ಸಿಕ್ಕಿದೆ’ ಎನ್ನುವುದು ನವೀನ್ ಮಾತು.
ಇದನ್ನೂ ಓದಿ :Bengaluru: ರಾಮೇಶ್ವರಂ ಕೆಫೆ ಕೇಸ್; ಬೆಂಗಳೂರಿನಲ್ಲಿ ಇಬ್ಬರನ್ನ ವಶಕ್ಕೆ ಪಡೆದ ಎನ್ಐಎ
ಸಿನಿಮಾ ಹೀರೊ
ಶೀಘ್ರದಲ್ಲೇ ಟೈಟಲ್ ಅನೌನ್ಸ್ ಆಗಲಿರುವ ಚಿತ್ರದಲ್ಲಿ ನವೀನ್ ಸಜ್ಜು ನಾಯಕರಾಗಿದ್ದಾರೆ. ಈ ಸಿನಿಮಾದ ಸಂಗೀತ ನಿರ್ದೇಶನ ಕೂಡ ಅವರು ಮಾಡಲಿದ್ದಾರೆ. ಇದರ ಜತೆ ಚಿತ್ರೀಕರಣ ಮುಗಿಸಿರುವ ‘ಮ್ಯಾನ್ಷನ್ ಹೌಸ್ ಮುತ್ತು’ ಚಿತ್ರದಲ್ಲಿ ಅವರು ಹೀರೊ ಆಗಿದ್ದು, ಈ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ‘ಇವೆರಡು ಸಿನಿಮಾಗಳಲ್ಲಿ ನಾನು ನಾಯಕ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರಿಗೆ ಈ ಚಿತ್ರಗಳು ಖಂಡಿತಾ ಮನರಂಜನೆ ನೀಡಲಿವೆ’ ಎಂದಿದ್ದಾರೆ ನವೀನ್.
“ನನ್ನ ನಟನಾ ಪ್ರಯಾಣಕ್ಕೆ ಪ್ರೇಕ್ಷಕರಿಂದ ಸಿಕ್ಕಿರುವ ಪ್ರೀತಿಯ ಪ್ರತಿಕ್ರಿಯೆ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದೆ ಕೂಡ ಉತ್ತಮ ಪಾತ್ರದ ಮೂಲಕ ಜನರನ್ನು ರಂಜಿಸಬೇಕೆಂಬ ಆಸೆಯಿದೆ” ಎಂದಿದ್ದಾರೆ ನಟ, ಗಾಯಕ ನವೀನ್ ಸಜ್ಜು