Sandalwood Leading OnlineMedia

ಮೋಡಿಮಾಡುತ್ತಿದೆ ಸೂರಿ ನಿರ್ದೇಶನದ ಚಿತ್ರದ ಹಾಡು

 

 

ನಮಿತಾರಾವ್ ನಿರ್ಮಿಸಿ, ವಿಕ್ರಮ್ ಸೂರಿ ನಿರ್ಮಾಣ ಮಾಡಿರುವ “ಚೌಕಬಾರ” ಚಿತ್ರದ ಹಾಡುಗಳನ್ನು ಸಚಿವ ಎಸ್ ಟಿ ಸೋಮಶೇಖರ್ ಬಿಡುಗಡೆ ಮಾಡಿ ಶುಭ ಕೋರಿದರು.ಸಾಹಿತಿಗಳಾದ ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ಲಹರಿ ವೇಲು, ರವಿಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕ ಶಿವಕುಮಾರ್, ನಿರ್ದೇಶಕ ಪಿ.ಶೇಷಾದ್ರಿ, ಶಶಿಧರ್ ಕೋಟೆ ಸೇರಿದಂತೆ ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

 

ವಿಕ್ರಮ್ ಸೂರಿ

 

 ಕಣ್ಮನ ಸೆಳೆಯುವ ಸೌಂದರ್ಯ.. ಬೆರಗುಗೊಳಿಸುವ ಲುಕ್​ನಲ್ಲಿ ಆಶಿಕಾ

ವಿಕ್ರಮ್ ಸೂರಿ ಕುಟುಂಬದವರು ನನ್ನ ಆತ್ಮೀಯರು. ಅವರ ಸಮಾರಂಭಕ್ಕೆ ನಾನು ಬಂದಿರುವುದು ಖುಷಿಯಾಗಿದೆ. ಚಿತ್ರರಂಗದ ಅಭಿವೃದ್ಧಿಗೆ ಸದಾ ಸಿದ್ದ.  ಮೈಸೂರಿನ ನಂಜನಗೂಡು ಬಳಿ ಫಿಲಂಸಿಟಿ ನಿರ್ಮಾಣದ ಕಾರ್ಯವನ್ನು ಆದಷ್ಟು ಬೇಗ ಆರಂಭ ಮಾಡುವುದಾಗಿ ಸಚಿವರು ತಿಳಿಸಿದರು. ಮುಖ್ಯಮಂತ್ರಿಗಳ ಜೊತೆ ಈ ವಿಷಯದ ಬಗ್ಗೆ ‌ಚರ್ಚಿಸುವುದಾಗಿ ಸಹ ಸೋಮಶೇಖರ್ ಅವರು ಹೇಳುತ್ತಾ, “ಚೌಕಬಾರ” ಚಿತ್ರತಂಡಕ್ಕೆ  ಶುಭ ಕೋರಿದರು. ತಾವು ಸಹ ಅಂಬರೀಶ್ ಹಾಗೂ ಬಿ.ಸಿ.ಪಾಟೀಲ್ ಅವರ ಚಿತ್ರಗಳಲ್ಲಿ ಅಭಿನಯಿಸದ್ದನ್ನು‌ ಎಸ್ ಟಿ ಸೋಮಶೇಖರ್ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

 

 

ಮೈತ್ರಿಯಾಗಿ `ದೂರದರ್ಶನ’ಕ್ಕೆ ಎಂಟ್ರಿ ಕೊಟ್ಟ ಆಯಾನಾ

 

ಇದು ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ ಚಿತ್ರ.  ಸ್ನೇಹ, ಪ್ರೀತಿ ಹಾಗೂ ಬಾಂಧವ್ಯಗಳ ಸಮ್ಮಿಲನ ಈ ಚಿತ್ರ. ಯುವಜನತೆಗೆ ಹತ್ತಿರವಾಗುವ ಈ ಸಿನಿಮಾವನ್ನು‌ ನಮಿತಾರಾವ್ ನಿರ್ಮಿಸಿದ್ದಾರೆ ಜೊತೆಗೆ ನಟನೆಯನ್ನು ಮಾಡಿದ್ದಾರೆ.‌ ಈ ಚಿತ್ರದಲ್ಲಿ ಅನೇಕ ನೂತನ ಪ್ರತಿಭೆಗಳಿಗೆ ಅಭಿನಯಕ್ಕೆ ಅವಕಾಶ ನೀಡಿರುವುದಾಗಿ‌ ತಿಳಿಸಿದ ನಿರ್ದೇಶಕ ವಿಕ್ರಮ್ ಸೂರಿ, ಹಾಡುಗಳನ್ನು ‌ಬಿಡುಗಡೆ ಮಾಡಿದ, ಸನ್ಮಾನ್ಯ ಸಚಿವರು ಸೇರಿದಂತೆ ‌ಎಲ್ಲಾ ಗಣ್ಯರಿಗೆ ಅಭಿನಂದನೆ ಸಲ್ಲಿಸಿದರು.

 

ವಿಹಾನ್ ಪ್ರಭಂಜನ್

 

 ನಿರ್ಮಾಪಕಿಯಾಗುವುದಕ್ಕಿಂತ  ಮುಂಚೆ ನಾನು, ರಂಗಭೂಮಿ ಕಲಾವಿದೆ, ನೃತ್ಯ ಗಾರ್ತಿ ಹಾಗೂ ಗಾಯಕಿ. ಈ ಚಿತ್ರದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಿದ್ದೀವಿ. ಮುಖ್ಯ ಕಾರಣ. ನಾವು ಕೆಲವು ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದಾಗ ನಾವು ಹೊಸಬರು. ಆಗ ನಮಗೂ ಉತ್ತಮ ಬೆಂಬಲ ದೊರಕಿತು. ಹಾಗಾಗಿ ಹೆಚ್ಚು ಪ್ರತಿಭೆಗಳಿಗೆ ಅವಕಾಶ ನೀಡಿರುವುದಾಗಿ ತಿಳಿಸಿದ ನಮಿತಾರಾವ್, “ಚೌಕಬಾರ” ದ ಕಲಾವಿದರನ್ನು ‌ಪರಿಚಯಿಸಿದರು.

 

 

ಗ್ಲಾಮರಸ್ ಲುಕ್ನಲ್ಲಿ “ರಶ್ಮಿಕಾ ಮಂದಣ್ಣ” : ಹೊಸ ಲುಕ್ ನೋಡಿ ಫಿದಾ ಆದ ಅಭಿಮಾನಿಗಳು!!

 

ನಮಿತಾರಾವ್, ವಿಹಾನ್ ಪ್ರಭಂಜನ್, ಕಾವ್ಯ ರಮೇಶ್, ಸುಜಯ್ ಹೆಗಡೆ, ಸಂಜಯ್ ಸೂರಿ, ಕೀರ್ತಿ ಭಾನು, ಮಧು ಹೆಗಡೆ, ಶಶಿಧರ್ ಕೋಟೆ, ಪ್ರಥಮ ಪ್ರಸಾದ್, ಸೀತಾ ಕೋಟೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಕ್ರಮ್ ಸೂರಿ ಚಿತ್ರಕಥೆ ಬರೆದು‌ ನಿರ್ದೇಶಿಸಿರುವ ಈ ಚಿತ್ರಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದಾರೆ. ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ವಿಕ್ರಮ್ ಸೂರಿ ಹಾಗೂ ಹರೀಶ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಚೈತ್ರ, ವ್ಯಾಸರಾಜ ಸೋಸಲೆ, ಸಿದ್ಧಾರ್ಥ್ ಬೆಳ್ಮಣ್ಣು, ನಕುಲ್ ಅಭಯಂಕರ್ ಹಾಗೂ ಹರೀಶ್ ಭಟ್ “ಚೌಕಬಾರ” ದ ಹಾಡುಗಳಲ್ಲಿ ಹಾಡಿದ್ದಾರೆ. ರವಿರಾಜ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶಶಿಧರ್ ಅವರ ಸಂಕಲನವಿದೆ.

 

Watch Yava Chumbaka Lyrical Video Song from Chowka Bara New Kannada Movie.

 

Share this post:

Translate »