ಉತ್ತರ ಪ್ರದೇಶದ ಈ ಹುಡುಗಿ ಕನ್ನಡಿಗರಿಗೆ ಹತ್ತಿರವಾಗಿ ತುಂಬಾನೇ ವರ್ಷಗಳಾಯ್ತು. ಕನ್ನಡದ ಮನೆಮಗಳಂತೆ ಚಿತ್ರರಸಿಕರು ಇವರಿಗೆ ಪ್ರೀತಿ ಕೊಟ್ಟಿದ್ದಾರೆ. ಹೀಗೆ ಕನ್ನಡ ಚಿತ್ರರಸಿಕರಿಗೆ ಮೋಡಿ ಮಾಡಿದ್ದು ವಾರಣಾಸಿಯ ಚೆಲುವಿನರಸಿ ಶಾನ್ವಿ ಶ್ರೀವಾಸ್ತವ್. `ಚಂದ್ರಲೇಖಾ’ ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾAಗ ಜಾಣ, ಸಾಹೇಬ, ತಾರಕ್, ಮಫ್ತಿ, ಗೀತಾ, ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಮಿಂಚಿದ್ದಾರೆ. ಕನ್ನಡತಿಯರು ನಾಚುವಷ್ಟು ಸೊಗಸಾಗಿ ಕನ್ನಡ ಮಾತಾಡುವ ಶಾನ್ವಿ ಯುವ ಪೀಳಿಗೆಯ ಫೇವರಿಟ್ ನಟಿ. ಇವರ ಸಾಧನೆ ಗುರುತಿಸಿ ‘ಚಿತ್ತಾರ ಸ್ಟಾರ್ ಅವಾರ್ಡ್ಸ್ – ೨೦೨೪’ ಕಾರ್ಯಕ್ರಮದಲ್ಲಿ Chittara Youth Icon ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶಾನ್ವಿ ಶ್ರೀವಾಸ್ತವ್, `ನಾನೀಗ ಪಕ್ಕ ಕನ್ನಡದ ಹುಡುಗಿ. ತುಂಬಾ ಖುಷಿಯಾಗ್ತಾ ಇದೆ. ಏನಾದ್ರೂ ಅವಾರ್ಡ್ ಇರಲಿ. ಅದೊಂದು ಥರ ಪ್ರೋತ್ಸಾಹವೇ ನಮಗೆ. ತುಂಬಾ ದಿನಗಳ ಬಳಿಕ ಈ ರೀತಿಯ ಅವಾರ್ಡ್ ನನಗೆ ಬಂದಿರುವುದು. ಇದು ಸ್ಪೆಷಲ್ ಅಂತಾನೇ ಹೇಳಬಹುದು. ಇನ್ನು ಚಿತ್ತಾರದಲ್ಲಿ ಮೊದಲ ವರ್ಷದಿಂದಾನೇ ನಾನೊಂದು ಪಾರ್ಟ್ ಆಗಿದ್ದೀನಿ. ನನಗೆ ನಿಜಕ್ಕೂ ಹೆಮ್ಮೆ ಇದೆ. ಈ ಅವಾರ್ಡ್ ಕೊಟ್ಟಂತ ಚಿತ್ತಾರಕ್ಕೆ ಧನ್ಯವಾದಗಳು’. ಎಂದಿದ್ದಾರೆ.