ಕನ್ನಡ ಸಿನಿಲೋಕದ ಈ ಅದ್ಭುತ ಪ್ರತಿಭೆ, ತಾವೊಬ್ಬ ಮಾಸ್&ಕ್ಲಾಸ್ ಸ್ಟಾರ್ ಎಂಬುದನ್ನು ಚಿತ್ರದಿಂದ ಚಿತ್ರಕ್ಕೆ ನಿರೂಪಿಸಿದ ನಟ ಶ್ರೀ ಮುರುಳಿ. ‘ಚಂದ್ರಚಕೋರಿ’ ಎಂಬ ಸುಂದರ ಕೌಟುಂಬಿಕ ಚಿತ್ರದಿಂದ ಮನೆ ಮಗನ ಇಮೇಜ್ ಗಳಿಸಿದ ಹುಡುಗ ಶ್ರೀಮುರುಳಿ. ಅನಂತರ ‘ಕಂಠಿ’, ‘ಯಶವಂತ್’, ‘ಮಿಂಚಿನ ಓಟ’, ‘ಶಿವಮಣಿ’ ಸೇರಿದಂತೆ ಹತ್ತಾರು ಸಿನಿಮಾ ಮಾಡಿ ನಿರ್ಮಾಪಕ ಮತ್ತು ನಿರ್ದೇಶಕರ ಫೇವರೇಟ್ ನಟ ಎಂದೆನಿಸಿಕೊ0ಡರು. ಸೂಪರ್ ಡೂಪರ್ ಹಿಟ್ ಆಗಿದ್ದ ‘ಉಗ್ರಂ’ ಶ್ರೀ ಮುರುಳಿಯವರಿಗೆ ಮಾಸ್ ಸ್ಟಾರ್ ಇಮೇಜ್ ಕೊಟ್ಟ ನಂತರ, ಕಥೆಯ ಆಯ್ಕೆಯಲ್ಲಿ ಜಾಗರೂಕತೆ ಮೆರೆದ ಶ್ರೀಮುರುಳಿ ‘ರಥಾವರ’, ‘ಮಫ್ತಿ’, ‘ಭರಾಟೆ’, ‘ಮದಗಜ’ ಮೂಲಕ ಹೊಸ ಇತಿಹಾಸ ಬರೆದರು. ಇದೀಗ ಶ್ರೀ ಮುರುಳಿ ನಟನೆಯ ‘ಬಘೀರ’ ದೊಡ್ಡ ನಿರೀಕ್ಷೆ ಮೂಡಿಸಿದೆ. ಶ್ರೀಮುರುಳಿಯವರ ಸಿನಿ ಸಾಧನೆಯನ್ನು ಗುರುತಿಸಿ CHITTARA STAR ICON – 2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ ಶ್ರೀಮುರುಳಿ ಅವರು, `ಸ್ಟಾರ್ ಐಕಾನ್ ಅಂತ ಹೇಳಿದ್ದಾರೆ. ಖುಷಿಯ ಜೊತೆಗೆ ಜವಾಬ್ದಾರಿ ಜಾಸ್ತಿಯಾಗಿದೆ. ಚಿತ್ತಾರ ಅವರಿಗೆ ಥ್ಯಾಂಕ್ಸ್ ಹೇಳ್ತೀನಿ” ಎಂದರು