ಕಲರ್ಸ್ ಕನ್ನಡ ವಾಹಿನಿಯಲ್ಲಿ ಚಿತ್ತಾರ ಸ್ಟಾರ್ ಅವಾರ್ಡ್ಸ್ 2022
ಸ್ಯಾಂಡಲ್ವುಡ್ನಲ್ಲಿ ಮನೆಮಾತಾಗಿರುವ ಕನ್ನಡದ ನಂ.1 ಎಂಟರಟೈನ್ಮೆಂಟ್ ಮ್ಯಾಗಜಿನ್ ಚಿತ್ತಾರ ಇದೀಗ ಮತ್ತೊಂದು ವರ್ಣರಂಜಿತ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿಯ ಮುಖಾಂತರ ಕೋಟ್ಯಾಂತರ ಬಳಗಕ್ಕೆ ಸಮರ್ಪಿಸಲು ಸಿದ್ಧವಾಗಿದೆ.
“ಚಿತ್ತಾರ ಸ್ಟಾರ್ ಅವಾರ್ಡ್ಸ್ 2022” ಬಣ್ಣ, ಬೆಳಕು, ನೃತ್ಯ ವೈಭವದ ಜೊತೆಗೆ ಮುಗಿಲು ಮುಟ್ಟಿದ ಪ್ರಶಸ್ತಿ ಸಂಭ್ರಮವನ್ನು ಭಾನುವಾರ ಜೂನ್ 5ರ ಮಧಾಹ್ನ 3 ಗಂಟೆಯಿಂದ ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿರುವ ವೈಟ್ ಪೆಟಲ್ಸ್ನಲ್ಲಿ “ಚಿತ್ತಾರ ಸ್ಟಾರ್ ಅವಾರ್ಡ್ಸ್ 2022” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಸಂಖ್ಯಾತ ಪ್ರೇಕ್ಷಕರ ಸಂಭ್ರಮ, ಸಡಗರದ ನಡುವೆ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಭಾನುವಾರ ಮಧಾಹ್ನ 3 ಗಂಟೆಗೆ ವೀಕ್ಷಿಸಬಹುದು.
ಚಿತ್ತಾರ ರೈಸಿಂಗ್ ಸ್ಟಾರ್, ಚಿತ್ತಾರ ಸ್ಟಾರ್, ಚಿತ್ತಾರ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ಶ್, ಚಿತ್ತಾರ ಅಚೀವರ್ಸ್ ಅವಾರ್ಡ್ಸ್ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ತೀರ್ಪುಗಾರರು ನೀಡಿದ ನಿರ್ಣಯದ ಆಧಾರದ ಮೇಲೆ ‘ಬೆಸ್ಟ್’ಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ವಿತರಿಸಲಾಯಿತು. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ಅನೇಕ ವಿವಿಧ ಕ್ಶೇತ್ರಗಳಿಂದ ಗಣ್ಯಾತಿಗಣ್ಯರು ಆಗಮಿಸಿದ್ದರು.
ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಚಿತ್ತಾರ ಸ್ಟಾರ್ ಅವಾರ್ಡ್ಸ್ ನ ಪ್ರೋಮೋ ಬಿಡುಗಡೆ ಮಾಡಲಾಗಿದೆ.ಪ್ರತಿ ಬಾರಿಯೂ ಅವಾರ್ಡ್ಸ್ ಆರಂಭಕ್ಕೂ ಮುನ್ನ ಇಂಟರೆಸ್ಟಿಂಗ್ ಆದಂತಹ ಪ್ರೋಮೋ ಬಿಡುಗಡೆ ಮಾಡುತ್ತದೆ ಕಲರ್ಸ್ ಕನ್ನಡ ವಾಹಿನಿ. ಈಗ ಕಾರ್ಯಕ್ರಮದ ಪ್ರೋಮೋಗಳು ರಿಲೀಸ್ ಆಗಿದ್ದು ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಚಿತ್ತಾರ ಸ್ಟಾರ್ ಅವಾರ್ಡ್ಸ್ ನೋಡಲು ಕಾತರರಾಗಿದ್ದೇವೆ ಎಂದು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಹಾಡು ಮತ್ತು ಡ್ಯಾನ್ಸ್ ಗಳು ಭರ್ಜರಿಯಾಗೇ ಇದ್ದು ನಿರಂಜನ್ ದೇಶ್ ಪಾಂಡೆ – ಲಕ್ಶ್ಮೀ ಗುರುರಾಜ್ ನಿರೂಪಿಸಿದ ಈ ಕಾರ್ಯಕ್ರಮ ವೀಕ್ಷಕರಿಗೆ ಕಚಗುಳಿ ಇಡುವುದಂತೂ ಖಂಡಿತ. ತಪ್ಪದೆ ನೋಡಿ ಜೂನ್ 5ರ ಮಧ್ಯಾಹ್ನ 3 ಗಂಟೆಯಿಂದ.
https://www.instagram.com/p/CeEH3BhMq9r/