Left Ad
ಚಿತ್ತಾರ ಸ್ಟಾರ್ ಅವಾರ್ಡ್ಸ್-2025; ಚಂದನವನದ ಸ್ಟಾರ್ ನಟ/ನಟಿಯರಿಂದ ರಿವೀಲ್ ಆಯ್ತು ನಾಮಿನೇಶನ್ ಪಟ್ಟಿ. - Chittara news
# Tags

ಚಿತ್ತಾರ ಸ್ಟಾರ್ ಅವಾರ್ಡ್ಸ್-2025; ಚಂದನವನದ ಸ್ಟಾರ್ ನಟ/ನಟಿಯರಿಂದ ರಿವೀಲ್ ಆಯ್ತು ನಾಮಿನೇಶನ್ ಪಟ್ಟಿ.

 
ಹಲವು ವರ್ಷಗಳಿಂದ ಚಿತ್ತಾರ ನೂರಾರು ಪ್ರತಿಭಾವಂತ  ಕಲಾವಿದರು ಮತ್ತು ತಂತ್ರಜ್ಞರನ್ನು ಗುರುತಿಸಿ ಗೌರವಿಸಿದೆ. ಪ್ರತೀವರ್ಷ ಅದ್ಭುತ ವೇದಿಕೆ ಸೃಷ್ಟಿಸಿ ಸಾಧಕರನ್ನು ಗೌರವಿಸಿ ಪ್ರೋತ್ಸಾಹಿಸಿದೆ. ಈ ನಿಟ್ಟಿನಲ್ಲಿ, ೨೦೨೪ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಪ್ರತಿ ವರ್ಗಕ್ಕೂ, ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಮತ್ತು ಗೌರವಿಸುವ ಯೋಜನೆಯೂ ನಮ್ಮದಾಗಿದೆ. ಇದಕ್ಕೆ ಎಂದಿನ0ತೆ ಛಲ ಬಿಡದ ಚಿತ್ತಾರ ಪತ್ರಿಕೆಯು ತನ್ನ ಯೋಜನೆಯನ್ನು ಸಾಕಾರಗೊಳಿಸಲು ಅಣಿಯಾಗಿದೆ. 
 
 
ಪ್ರಶಸ್ತಿಗಳ ಆಯ್ಕೆಯನ್ನು  ಅತ್ಯಂತ ಪಾರದರ್ಶಕವಾಗಿ ನಡೆಸಲಿದ್ದು, ಆಯ್ಕೆ ಸಮಿತಿಯ ಆಯ್ಕೆಯ ಜೊತೆಗೆ, ವಾಟ್ಸ್ಅಪ್ ಮೂಲಕ ಪ್ರೇಕ್ಷಕರು ತಮಿಷ್ಟದ ಚಿತ್ರ, ನಟ/ನಟಿ, ತಂತ್ರಜ್ಞರಿಗೆ ಆಯ್ಕೆ ಮಾಡುತ್ತಿದ್ದು, ಬಿತ್ತಿಪತ್ರಗಳ ಮೂಲಕವೂ ಕರ್ನಾಟಕಾದ್ಯಂತ ಶಾಲಾ-ಕಾಲೇಜುಗಳಲ್ಲಿ ವೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು, ಚಿತ್ತಾರ ಪತ್ರಿಕೆಯಲ್ಲಿಯೂ ಓದುಗರಿಗೆ ವೋಟಿಂಗ್ ಅವಕಾಶವನ್ನು ಕಲ್ಪಿಸಲಿದ್ದು ಅದನ್ನೂ ಆಯ್ಕೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. 
 
ಚಿತ್ತಾರ ಸ್ಟಾರ್ ಅವಾರ್ಡ್ಸ್ ೨೦೨೫ ಮತದಾನ ಈಗ ಆರಂಭವಾಗಿದೆ! ನಿಮ್ಮ ಮೆಚ್ಚಿನ ತಾರೆಯರಿಗೆ ಬೆಂಬಲ ನೀಡಿ ಮತ್ತು ನಿಮ್ಮ ಅಮೂಲ್ಯ ಮತವನ್ನು ನೀಡಿ! ೭೩೫೩೬೫೫೩೬೫ಗೆ “ಚಿತ್ತಾರ” ಎಂದು ವಾಟ್ಸ್ಅಪ್ ಮೆಸೇಜ್ ಮಾಡಿ, ಲಿಂಕ್ ಅನ್ನು ಅನುಸರಿಸಿ ಮತ್ತು ವೋಟ್ ಮಾಡಿ ಅಥವಾ  wame.pro/chittara ಲಿಂಕ್ ಕ್ಲಿಕ್ ಮಾಡಿ ವೋಟ್ ಮಾಡಿ.
ಚಿತ್ರರಂಗದ ಹೆಮ್ಮೆಯ ಕಲಾವಿದರಾಗಿ, ತಂತ್ರಜ್ಞರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಏಳಿಗೆಯಲ್ಲಿ ನಿಮ್ಮ ಪಾತ್ರ ನಮ್ಮ ನಾಡಿನ ಹೆಮ್ಮೆಯ ಸಂಕೇತ. ಈ ನಿಮ್ಮ ಸಾಧನೆಯನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ, ನಮ್ಮ 16ನೇ ವರ್ಷದ ಸಂಭ್ರಮಕ್ಕೆ ನೀವೆಲ್ಲರೂ ಸಾಕ್ಷಿಯಾಗಲಿದ್ದೀರಿ. ಬನ್ನಿ, `ಚಿತ್ತಾರ ಸ್ಟಾರ್ ಅವಾರ್ಡ್ಸ್–2025’ ಮೂಲಕ ಎಲ್ಲರೂ ಒಟ್ಟಾಗಿ ಅದ್ಭುತ ಕ್ಷಣಗಳನ್ನು ಸಂಭ್ರಮಿಸೋಣ. 
 
 
 
ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಟ/ನಟಿ, ತಂತ್ರಜ್ಞರ ಪಟ್ಟಿ ಈ ಕೆಳಗಿನಂತಿದೆ. ಕೂಡಲೇ ನಿಮ್ಮಿಷ್ಟದ ಪ್ರತಿಭೆಗಳಿಗೆ ವೋಟ್ ಮಾಡಿ.
 
 
 
 
 
 
 
   
 
 
 
 
 
 
Spread the love
Translate »
Right Ad