Sandalwood Leading OnlineMedia

‘CHITTARA STAR ACHIEVER – 2024’ ಪ್ರಶಸ್ತಿ ಸ್ವೀಕರಿಸಿ ಮನಬಿಚ್ಚಿ ಮಾತನಾಡಿದ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್

ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್‌ಕುಮಾರ್ ಕುಟುಂಬದ ಸೊಸೆಯಾಗಿ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮಡದಿಯಾಗಿ, ಪಿಆರ್‌ಕೆ ಪ್ರೊಡಕ್ಷನ್ ಚಿತ್ರ ಸಂಸ್ಥೆಯ ನಿರ್ಮಾಪಕಿಯಾಗಿ ತಮ್ಮ ಎಲ್ಲಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು ಅಶ್ವಿನಿ ಪುನೀತ್ ರಾಜ್‌ಕುಮಾರ್. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿ ಬದುಕಿನುದ್ದಕ್ಕೂ ಜೊತೆಯಾಗಿ, ಬೆಂಬಲವಾಗಿ ನಿಂತವರು ಅಶ್ವಿನಿ. ನಿರ್ಮಾಣದ ಸೂಕ್ಷö್ಮಗಳನ್ನು ಕಲಿತ ಅಶ್ವಿನಿಯವರು ಪಿಆರ್‌ಕೆ ಪ್ರೊಡಕ್ಷನ್ ಮತ್ತು ಪಿಆರ್‌ಕೆ ಆಡಿಯೋ ಸಮಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಯಾರು ಊಹಿಸದ ತಿರುವುಗಳು ಬದುಕಲ್ಲಿ ನಡೆದರು, ಅದೆಲ್ಲವನ್ನು ಸಹಿಸಿ, ಸಂಭಾಳಿಸಿಕೊAಡು ಪಿಆರ್‌ಕೆ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪುನೀತ್ ಅವರ ಆಸೆ, ಆಶಯದಂತೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ, ಕ್ರಿಯಾಶೀಲ ತಂಡವನ್ನು ಗುರುತಿಸುವ ಕೆಲಸವನ್ನು ಪಿಆರ್‌ಕೆ ಪ್ರೊಡಕ್ಷನ್ ಸಂಸ್ಥೆ ಮಾಡುತ್ತಿದೆ. ಹಾಗೇ ಆಡಿಯೋ ಲೋಕದಲ್ಲಿ ಪಿಆರ್‌ಕೆ ಆಡಿಯೋ ಸಂಸ್ಥೆ ಹೊಸ ಸಿನಿಮಾಗಳ ಹಾಡುಗಳಿಗೆ ನಂಬಿಕಾರ್ಹ ವೇದಿಕೆಯಾಗಿದೆ. ಪಿಆರ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ಕವಲುದಾರಿ, ಲಾ, ಫ್ರೆಂಚ್ ಬಿರಿಯಾನಿ, ಫ್ಯಾಮಿಲಿ ಪ್ಯಾಕ್, ಆಚಾರ್ ಅಂಡ್ ಕೋ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನಿರ್ಮಿಸಿದ್ದಾರೆ. ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ಸಲ್ಲಿಸುತ್ತಿರುವ ಮಹತ್ತರ ಸೇವೆ ಗುರುತಿಸಿ ‘CHITTARA STAR ACHIEVER – 2024’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಚಿತ್ತಾರ ಪತ್ರಿಕೆಗೆ ತುಂಬು ಹೃದಯದ ಧನ್ಯವಾದಗಳು. ತುಂಬಾ ಖುಷಿಯಾಗುತ್ತೆ ಈ ರೀತಿಯ ಪ್ರಶಸ್ತಿ ಪಡೆದುಕೊಳ್ಳುವುದು. ಕನ್ನಡ ಚಿತ್ರರಂಗದಲ್ಲಿ ಇನ್ನು ಒಳ್ಳೊಳ್ಳೆ ಸಿನಿಮಾಗಳು ಬರಬೇಕು ಎಂಬುದು ನಮ್ಮ ಆಶಯ’ ಎಂದಿದ್ದಾರೆ.

 

 

Share this post:

Related Posts

To Subscribe to our News Letter.

Translate »