Sandalwood Leading OnlineMedia

Chittara Star Awards-2025; SOUTH ICON ಆಗಿ ಮಿಂಚಿದ ಉಣ್ಣಿ ಮುಕುಂದನ್

`ಚಿತ್ತಾರ’ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ’ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ’ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು 2019 ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ’ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು,  ಖ್ಯಾತ ನಟ Sri.Unni Mukundan ಅವರು CHITTARA SOUTH ICON-2025  ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರು ತಮಿಳು ಚಿತ್ರ ಸೀದನ್ ಮೂಲಕ ಸೀದಾ ಪ್ರೇಕ್ಷಕರ ಮನಸ್ಸಿನೊಳಗೆ ಉಳಿದು ಬಿಟ್ಟವರು. ಹತ್ತು ಹಲವು ಸಣ್ಣ ಪಾತ್ರಗಳನ್ನು ನಿರ್ವಹಿಸಿದ ನಂತರ, ಇವರು ವಿಕ್ರಮಾದಿತ್ಯನ್, SMILE, ಅಚಾಯನ್ಸ್, ಮಲಿಕಪ್ಪುರಂ ಮತ್ತು ಮಾರ್ಕೊ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ಉಣ್ಣಿ ಮುಕುಂದನ್,
ತೆಲುಗಿನ ಜನತಾ ಗ್ಯಾರೇಜ್, ತಮಿಳಿನ ಗರುಡನ್ ಚಿತ್ರಗಳ ಮೂಲಕ ಬಹುಭಾಷಾ ನಟರಾಗಿ ಹೊರ ಹೊಮ್ಮಿದರು. ಇವರ ನಿರ್ಮಾಣದ ಮೆಪ್ಪಡಿಯಾನ್ ಚಿತ್ರಕ್ಕಾಗಿ NATIONAL AWARD ಪಡೆದು, ನಿರ್ಮಾಪಕರಾಗಿಯೂ ಸೈ ಅನ್ನಿಸಿಕೊಂಡರು. ವೈಶಾಖ್ ನಿರ್ದೇಶನದ ಮಲ್ಲು ಸಿಂಗ್ ಚಿತ್ರ ಇವರ ವೃತ್ತಿಜೀವನದ ಮೈಲಿಗಲ್ಲು. ಶತದಿನೋತ್ಸವ ಆಚರಿಸಿದ ಮಲ್ಲುಸಿಂಗ್ ಉಣ್ಣಿ ಅವರನ್ನು ಸೂಪರ್‌ಸ್ಟಾರ್ ಪಟ್ಟದಲ್ಲಿ ಕೂರಿಸಿತು. ಅಚಾಯನ್ಸ್ ಚಿತ್ರಕ್ಕೆ ಗೀತರಚನೆಕಾರ ಮತ್ತು ಗಾಯಕರಾಗಿ ಗಮನ ಸೆಳೆದ ಇವರು, ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಮಾಸ್ಟರ್‌ಪೀಸ್, ಚಿತ್ರದಲ್ಲಿ ಖಳನಾಯಕನಾಗಿ ನಟಿಸಿ ತಾನೋಬ್ಬ VERSTILE ಆಕ್ಟರ್ ಎಂಬುದನ್ನು ಪ್ರೂವ್ ಮಾಡಿದರು. ರಿಲೀಸ್ ಆದ ಅಯ್ಯಪ್ಪ ಸ್ವಾಮಿಯ ಮಹಿಮೆಯನ್ನು ತಿಳಿಸುವ ಮಲಿಕಾಪುರಂ ಚಿತ್ರದಲ್ಲಿ ಅಭಿನಯಿಸಿ ಆಸ್ತಿಕರ ಪಾಲಿನ ಅಭಿಮಾನದ ನಟರೆನಿಸಿಕೊಂಡರು. ಈ ವರ್ಷ ರಿಲೀಸ್ ಆದ ಮಾರ್ಕೊ ಚಿತ್ರ, 100 ಕೋಟಿಗೂ ಮೀರಿ ಕಲೆಕ್ಷನ್ ಮಾಡಿ, ಉಣ್ಣಿ ಅವರನ್ನು ಪಾನ್ ಇಂಡಿಯಾ ಸ್ಟಾರ್ ಪಟ್ಟದಲ್ಲಿ ಕೂರಿಸಿತು. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುವ ಉಣ್ಣಿ ಮುಕುಂದನ್ ಅವರಿಗೆ ಇನ್ನಷ್ಟು ಪಾತ್ರ ಅರಸಿ ಬರಲಿ ಎಂದು ಆಶಿಸುತ್ತಾ ಚಿತ್ತಾರವು, CHITTARA SOUTH ICON-2025 ಪ್ರಶಸ್ತಿ ನೀಡಿ ಗೌರವಿಸಿದೆ.

 

 

 

 

 

Share this post:

Translate »