`ಚಿತ್ತಾರ‘ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ‘ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ‘ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು 2019 ‘ಚಿತ್ತಾರ ಸ್ಟಾರ್ ಅವಾರ್ಡ್ಸ್‘ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ‘ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಖ್ಯಾತ ನಟಿ ಶ್ರೀಲೀಲಾ ಅವರು CHITTARA SOUTH ICON – 2025′ ಪ್ರಶಸ್ತಿಗೆ ಭಾಜರಾಗಿದ್ದಾರೆ.
ದಕ್ಷಿಣ ಭಾರತದ ಮೋಸ್ಟ್happening ಹೀರೋಯಿನ್… ಅಂದಕ್ಕೆ ಕೇರ್ ಆಫ್ ಅಡ್ರೆಸ್, ಡ್ಯಾನ್ಸ್ಗೆ ಡೋರ್ ನಂಬರ್ ಕನ್ನಡಿಗರ ಹೆಮ್ಮೆ ನಟಿ ಶ್ರೀಲೀಲಾ. ಕಲೆಗೆ ಕನಸಿಗಿಂತಲೂ ತಯಾರಿ ಬಹಳ ಮುಖ್ಯ. ಚಿಕ್ಕಂದಿನಿ0ದಲೇ ಭರತನಾಟ್ಯ ಕಲಿತ ಇವರು ಸಾಕಷ್ಟು stage showಗಳನ್ನು ಕೂಡ ನೀಡಿದ್ದಾರೆ. ಕಿಸ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಬೆಳ್ಳಿ ತೆರೆಯನ್ನು ಚುಂಬಿಸಿ ಕಿಸಾಕ್ ಹಾಡಿನ ಮೂಲಕ ಇಡೀ ಭಾರತ ಚಿತ್ರರಂಗವನ್ನೇ ಕುಣಿಸಿದ ಚಂದುಳ್ಳಿ ಚೆಲುವೆ ಇವರು. ತೆಲುಗಿನ ಮಹಾನ್ ನಿರ್ದೇಶಕ ಕೆ ರಾಘವೇಂದ್ರ ರಾವ್ ನಿರ್ದೇಶನದ ಪೆಳ್ಳಿ ಸಂದಡಿ ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗದ ಪಲಕ್ಕಿ ಏರಿದ ಇವರನ್ನು ತೆಲುಗು ಚಿತ್ರರಂಗ ಪಲಕ್ಕಿಯಲ್ಲೆ ಮೆರೆಸುತ್ತಿರುವುದು ಸುಳ್ಳಲ್ಲಾ. ರಾಮ್, ನಿತಿನ್, ಮಹೇಶ್ ಬಾಬು, ಬಾಲಕೃಷ್ಣ ರಂಥ ಹಿರಿಯ ನಟರೊಂದಿಗೆ ಕೂಡ ಲೀಲಾ ಎಂಬ ಹೆಸರಿಗೆ ತಕ್ಕಂತೆ ಲೀಲಾಜಾಲಾವಾಗಿ ನಟಿಸಿ ಸೈಅನಿಸಿಕೊಂಡವರು. Chance ಗೋಸ್ಕರ ಕಾಯೋ ಸಾವಿರಾರು ಪ್ರತಿಭೆಗಳ ನಡುವೆ, ಇವರ datesಗೋಸ್ಕರ ನಿರ್ಮಾಪಕರು ಕಾಯುವ ರೀತಿ ಬೆಳೆದ ನಮ್ಮ ಕನ್ನಡದ ಹುಡುಗಿಯ ಬೆಳವಣಿಗೆ ವಿಸ್ಮಯ. ಪರಭಾಷೆಯಲ್ಲಿ ಸಾಕಷ್ಟು busy ಆಗಿದ್ದರೂ ಇವರ ಕನ್ನಡ ಪ್ರೀತಿ ಶ್ಲಾಘನೀಯ, ಅದಕ್ಕೆ ಆಗಾಗ ಇವರು ನಟಿಸುತ್ತಿರುವ ಕನ್ನಡ ಚಿತ್ರಗಳೆ ಸಾಕ್ಷಿ. ಈಗ ಬಾಲಿವುಡ್ ನಲ್ಲೂ ತಮ್ಮ ಟ್ಯಾಲೆಂಟ್ ತೋರಿಸಲು ಸಿದ್ಧರಾಗಿರುವ ಇವರು, ಆಶಿಕಿ 3 ತಮಿಳಿನ ಪರಾಸಕ್ತಿ ಹೀಗೆ ಈ ವರ್ಷದ most anticipated ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯುವ ಹೃದಯಗಳ ಆಳುತ್ತಿರುವ ಯುವರಾಣಿ ಶ್ರೀ ಲೀಲಾ ಅವರ ಸಿನಿ ಬದುಕು ಇನ್ನಷ್ಟು ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಲಿ ಮತ್ತು ಅವರ ಸಿನಿ ಪಯಣ ಯಶಸ್ವಿಯಾಗಿ ಸಾಗಲಿ ಎಂದು ಆಶಿಸುತ್ತಾ ಚಿತ್ತಾರವು CHITTARA SOUTH ICON – 2025 ಪ್ರಶಸ್ತಿ ನೀಡಿ ಪ್ರಶಸ್ತಿ ನೀಡಿ ಗೌರವಿಸಿದೆ.