ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಪಾತ್ರರಾದ ಕನ್ನಡದ ಖ್ಯಾತ ರ್ಯಾಪರ್ ಆಲ್ ಓಕೆ
ಅಲೋಕ್ ಅಲಿಯಾಸ್ ಆಲ್ ಓಕೆ. ಇವರು ಓದಿದ್ದು ಬಿಬಿಎಮ್ ಆದ್ರೆ, ಇವರು ಕಟ್ಟಿದ್ದು ಬ್ಯಾಂಡ್ ಗ್ರೂಪ್. 2009ರಲ್ಲಿ ತೆರೆಕಂಡ ಜೋಶ್ ಸಿನಿಮಾದಲ್ಲಿ ಬಣ್ಣ ಹಚ್ಚಿದ ಇವರು, ೨೦೧೪ ರಲ್ಲಿ ಹೆಂಗ್ ಎಂಗೋ ಎಂಬ ರ‍್ಯಾಪ್ ಸಾಂಗ್ ಮೂಲಕ ರ‍್ಯಾಪರ್ ಆಗಿ ಎಂಟ್ರಿ ಕೊಟ್ಟರು.
ಮೊದಲನೆಯ ರ‍್ಯಾಪ್ ಸಾಂಗ್ ಮೂಲಕ ಯುವಕರ ಗಮನ ಸೆಳೆದರು. ಹಾಗೆ ಕನ್ನಡ ಚಿತ್ರಗಳಾದ ನಿನ್ನಿಂದಲೆ, ಗಜಕೇಸರಿ, ಭರಾಟೆ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಯಾಕಿಂಗೆ, ಡೋಂಟ್ ವರಿ ಅಂತ ಯುವಕರನ್ನು ಹುರುದುಂಬಿಸುವ ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅವರ ಟೀಮ್ ಜೊತೆ ಸೇರಿಸಿಕೊಂಡು ಗುರಿಯತ್ತ ಕರೆದುಕೊಂಡು ಹೋಗುತ್ತಿದ್ದಾರೆ.
ಹೀಗೆ ಕನ್ನಡಿಗರಿಗೆ ಇನ್ನು ಹಲವಾರು ರ‍್ಯಾಪ್ ಸಾಂಗ್ ನೀಡಲೆಂದು ಚಿತ್ತಾರವು ಆಶಿಸುತ್ತಾ ಸಂಗೀತ ಕ್ಷೇತ್ರದ ಸಾಧನೆಗಾಗಿ ‘ಚಿತ್ತಾರ ರೈಸಿಂಗ್ ಸ್ಟಾರ್ ಅವಾರ್ಡ್’ ನೀಡಿ ಗೌರವಿಸುತ್ತದೆ.