Sandalwood Leading OnlineMedia

Chittara Star Awards-2025 ; ಕರುನಾಡ ಹೆಮ್ಮೆಯ ನಟಿ

`ಚಿತ್ತಾರ’ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ’ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ’ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು 2019 ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ’ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರಿಯಾಂಕ ಮೋಹನ್ ಅವರು CHITTARA PRIDE OF KARNATAKA – 2025′ ಪ್ರಶಸ್ತಿಗೆ ಭಾಜರಾಗಿದ್ದಾರೆ.

 

ಅಯಸ್ಕಾಂತದ0ತೆ ಸೆಳೆಯುವ ಕಣ್ಣುಗಳು, ಮೋಡಿ ಮಾಡುವ ನಗು, ಸಹಜ ಅಭಿನಯ ಎಲ್ಲವೂ ಇವರ ಅಭಿಮಾನಿ ಬಳಗವನ್ನು ದುಪ್ಪಟ್ಟಾಗಿಸಿದೆ. ಸೌತ್ ಸಿನಿರಂಗದ ಚಾರ್ಮಿಂಗ್ ಸ್ಟಾರ್ ಪ್ರಿಯಾಂಕ ಮೋಹನ್ ಮೂಲತಃ ಮಂಗಳೂರಿನ ಚೆಲುವೆ. ಇವರು ಸೌಂದರ್ಯ ಮತ್ತು ಪ್ರತಿಭೆಯ ಸಮಿಶ್ರಣ. 2024ರ ಕನ್ನಡ ಸಿನಿಮಾ ಒಂದು ಕಥೆ ಹೇಳ್ಲಾ ಚಿತ್ರದ ಮೂಲಕ ಸಿನಿ ರಂಗಕ್ಕೆ ಹೆಜ್ಜೆ ಇಟ್ಟ ಇವರು ನಂತರ ತೆಲುಗು ಗ್ಯಾಂಗ್ ಲೀಡರ್, ತಮಿಳಿನ ಡಾಕ್ಟರ್ ಸಿನಿಮಾಗಳ ಮೂಲಕ ದಕ್ಷಿಣ ಭಾರತದ ಪ್ರಖ್ಯಾತ ನಟಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಸರಿಪೋದ ಶನಿವಾರಂ, ಕ್ಯಾಪ್ಟನ್ ಮಿಲ್ಲರ್ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾ ಮೂಲಕ ಖ್ಯಾತರಾದರು. ಕನ್ನಡದ ಪ್ರತಿಭೆಯ ಸಿನಿಪಯಣ ಮತ್ತಷ್ಟು ಪ್ರಜ್ವಲಿಸಲಿ ಎಂದು ಆಶಿಸುತ್ತಾ, ಚಿತ್ತಾರವು CHITTARA PRIDE OF KARNATAKA – 2025 ಪ್ರಶಸ್ತಿ ನೀಡಿ ಗೌರವಿಸಿದೆ.

 

 

Share this post:

Translate »