Left Ad
ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ;  ಸಂಗೀತ ಕ್ಷೇತ್ರದ ಸಾಧನೆಗೆ ವಿಶೇಷ ಪ್ರಶಸ್ತಿ - Chittara news
# Tags

ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ;  ಸಂಗೀತ ಕ್ಷೇತ್ರದ ಸಾಧನೆಗೆ ವಿಶೇಷ ಪ್ರಶಸ್ತಿ

ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು  ಹೀಗಿತ್ತು.

ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.

ರೆಡ್‌ ಕಾರ್ಪೆಟ್‌ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್‌ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.

ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು

ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ

ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..

‘Chittara Music Achievers’  / ಶ್ರೀಮತಿ ನಂದಿತಾ

ಕನ್ನಡ ಚಿತ್ರರಂಗಕ್ಕೆ ಮತ್ತು ಸಿನಿಮಾ ಸಂಗೀತಕ್ಕೆ ವರದಂತೆ ಸಿಕ್ಕ ಗಾನಕೋಗಿಲೆ ಶ್ರೀಮತಿ ನಂದಿತಾ. ಮೂಲತಃ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲ್ಲೂಕಿನ ನಂದಿತಾ ಇಂಜಿನಿಯರಿಂಗ್ ಪದವೀಧರೆ. ಬಿ. ಮುಗಿಸಿ ಹೆಸರಾಂತ ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಸಂಗೀತದ ಸೆಳೆತ ಅವರನ್ನು ಕನ್ನಡದ ಅತ್ಯಂತ ಯಶಸ್ವಿ ಹಿನ್ನೆಲೆ ಗಾಯಕಿಯನ್ನಾಗಿಸಿತು.

ಹಂಸಲೇಖ ಅವರ ಸಾಕಷ್ಟು ಸಿನಿಮಾಗಳಿಗೆ ನಂದಿತಾ ಟ್ರಾಕ್ ಹಾಡುತ್ತಿದ್ದರು. ಹೀಗಿರುವಾಗ ಅವರ ಹಿನ್ನೆಲೆ ಗಾಯನದ ಟ್ರಾಕ್ ಶುರುವಾಗಲು ಕಾರಣವಾಗಿದ ಚಿತ್ರಹಬ್ಬ‘. ವಿಷ್ಣುವರ್ಧನ್, ಅಂಬರೀಶ್, ದೇವರಾಜ್ ಸೇರಿದಂತೆ ಬಹುತಾರಾಗಣವಿದ್ದಹಬ್ಬಸಿನಿಮಾದ 4 ಹಾಡುಗಳಿಗೆ ನಂದಿತಾ ಹಾಡಿದರು. ಅಲ್ಲಿಂದ ಸ್ಯಾಂಡಲ್ ವುಡ್ ನಲ್ಲಿ ನಂದಿತಾಪರ್ವ ಶುರುವಾಯಿತು.

ಹಂಸಲೇಖ, ವಿ.ಮನೋಹರ್, ಮನೋಮೂರ್ತಿ, ರಾಜೇಶ್ ರಾಮನಾಥ್, ಸಾಧು ಕೋಕಿಲ, ಗುರುಕಿರಣ್ ಸೇರಿದಂತೆ ಕನ್ನಡದ ಎಲ್ಲಾ ಸುಪ್ರಸಿದ್ಧ ಸಂಗೀತ ನಿರ್ದೇಶಕರ  ಹಾಡುಗಳಿಗೆ ನಂದಿತಾ ಹಾಡಿದ್ದಾರೆ.

ಹಬ್ಬ, ಯುವರಾಜ, ಪ್ಯಾರಿಸ್ ಪ್ರಣಯ, ಕಲ್ಲರಳಿ ಹೂವಿ, ಯಶವಂತ್ಜೋಗುಳ, ಮತದಾನ, ಒರಟ ಲವ್ ಯು, ಶಾಸ್ತ್ರಿ, ದಾಸ, ಕಲಾಸಿಪಾಳ್ಯ, ದಿನಗಳು, ದುನಿಯಾ, ಆಪ್ತಮಿತ್ರ, ಇಂತಿ ನಿನ್ನ ಪ್ರೀತಿಯ, ರಾಮ್, ಕೃಷ್ಣ ಸೇರಿದಂತೆ ನೂರಾರು ಯಶಸ್ವಿ ಚಿತ್ರಗಳಿಗೆ ನಂದಿತಾ ಗಾಯನ ಜೀವ ತುಂಬಿದೆ.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿಯು ಹಾಡಿ ಬಹುಭಾಷಾ ಗಾಯಕಿಯಾಗಿರುವ ನಂದಿತಾ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದಾರೆ. 2000 ಕ್ಕೂ ಹೆಚ್ಚು ಸಿನಿಮಾ ಹಾಡಿದ ದಾಖಲೆ ಇವರದು. ಇದರ ಜೊತೆಗೆ ಜನಪದ, ಸುಗಮಸಂಗೀತ ಕ್ಷೇತ್ರದಲ್ಲಿ ಮನೆಮಾತಾಗಿದ್ದು 5000 ಕ್ಕೂ ಹೆಚ್ಚು ಗೀತೆಗಳಿಗೆ ತಮ್ಮ ಧ್ವನಿಯಿಂದ ಜೀವ ತುಂಬಿದ್ದಾರೆ.

ಮಾಧುರ್ಯಕ್ಕೆ ಮತ್ತೊಂದು ಹೆಸರಾಗಿ, ಹೊಸ ತಲೆಮಾರಿನ ಗಾಯಕಿಯರಿಗೆ ಸದಾ ಮಾದರಿಯಾಗಿ ನಿಂತ ಸೌಮ್ಯ ಸ್ವಭಾವದ, ಭರಪೂರ ಪ್ರತಿಭೆಯ ಗಾಯಕಿ ನಂದಿತಾ. ಗಾಯನ ಲೋಕದಲ್ಲಿ ಇವರು ಮಾಡಿದ ಸಾಧನೆ ಗುರುತಿಸಿ, ‘Chittara Achievers’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Spread the love
Translate »
Right Ad