Sandalwood Leading OnlineMedia

“ನನ್ನ ಬದುಕಿನ ಶೇಖಡಾ ಅರವತ್ತು-ಅರುವತೈದು ವರ್ಷ ಕಲೆಗಾಗಿ ಮುಡುಪಾಗಿಟ್ಟಿದ್ದೇನೆ”-ಶ್ರೀಮತಿ ಉಮಾಶ್ರೀ, ಖ್ಯಾತ ನಟಿ / CHITTARA EXCLUSIVE

ರ0ಗಭೂಮಿ, ಸಿನಿಮಾ, ಕಿರುತೆರೆ, ರಾಜಕೀಯ, ಸಮಾಜಸೇವೆ ಹೀಗೆ ತಾವು ಹೆಜ್ಜೆ ಇಟ್ಟ ಕ್ಷೇತ್ರದಲ್ಲೆಲ್ಲಾ ಯಶಸ್ಸಿನ ಹೆಜ್ಜೆ ಗುರುತು ಮೂಡಿಸಿದ ಅತ್ಯದ್ಭುತ ಕಲಾವಿದೆ, ಬಹುಮುಖ ಪ್ರತಿಭೆ ಶ್ರೀಮತಿ ಉಮಾಶ್ರೀ. ರಂಗಭೂಮಿಯಲ್ಲಿ ಹೆಸರಾಂತ ರಂಗನಿರ್ದೇಶಕರಾದ ಬಿ.ವಿ.ಕಾರಂತ್, ಗಿರೀಶ್ ಕಾರ್ನಾಡ್, ಸಿ.ಜಿ.ಕೃಷ್ಣಮೂರ್ತಿ, ಟಿ.ಎಸ್.ನಾಗಾಭರಣ ಸೇರಿದಂತೆ ನೂರಾರು ನಿರ್ದೇಶಕರ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ. ರಂಗಸ0ಪದ ಕಲಾತಂಡದಲ್ಲಿ ಸಕ್ರಿಯವಾಗಿ ಅನೇಕ ವರ್ಷಗಳ ಕಾಲ ರಂಗಭೂಮಿಗೆ ಸೇವೆ ಸಲ್ಲಿಸಿದರು. ಉಮಾಶ್ರೀಯವರ ನಟನಾ ಪ್ರತಿಭೆ ಅವರನ್ನು ರಂಗಭೂಮಿಯಿAದ ಬೆಳ್ಳಿತೆರೆಗೆ ಕರೆತಂದಿತು. ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಘನತೆ ಹೆಚ್ಚಿಸಿದ ಕಲಾವಿದರ ಸಾಲಲ್ಲಿ ಉಮಾಶ್ರೀ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕಾಶೀನಾಥ್ ನಿರ್ದೇಶನದ  ‘ಅನುಭವ’ ಸಿನಿಮಾ ಇವರ ನಟನೆಯ ಮೊದಲ ಚಿತ್ರವಾದರೂ, ಮೊದಲಿಗೆ ತೆರೆ ಕಂಡಿದ್ದು ನಾಗಾಭರಣ ಅವರ ನಿರ್ದೇಶನದ `ಬಂಗಾರದ ಜಿಂಕೆ’.

‘ರೂಪಾಂತರ’; `ಮೊಟ್ಟೆ’ ತಂಡ ದಿಂದ ಗಟ್ಟಿ ಕಥೆಯ ಚಿತ್ರ?! ವಿಭಿನ್ನ ಪಾತ್ರದಲ್ಲಿ ಆರ್.ಬಿ.ಎಸ್

1980 ರಲ್ಲಿ ಶುರುವಾದ ಉಮಾಶ್ರೀ ಕಲಾಯಾನ ಇಂದಿಗೂ ಅದೇ ವೇಗದಲ್ಲಿ ಸಾಗುತ್ತಿದೆ. ಆರಂಭದ ದಿನಗಳಲ್ಲಿ ಹಾಸ್ಯನಟಿಯಾಗಿ ಗುರುತಿಸಿಕೊಂಡರು, ನಂತರದ ದಿನಗಳಲ್ಲಿ ಎಲ್ಲಾ ರೀತಿಯ ಪಾತ್ರ ನಿಭಾಯಿಸಿ ತಾನೊಬ್ಬ ಪರಿಪೂರ್ಣ ಕಲಾವಿದೆ ಎಂಬುದನ್ನು ನಿರೂಪಿಸಿದರು. ಅನುಭವ, ಅಮೃತಘಳಿಗೆ, ಸ್ವಾಭಿಮಾನ, ಜಯಸಿಂಹ, ಒಲವಿನ ಉಡುಗೊರೆ, ಅಂಜದ ಗಂಡು, ಗೋಲ್ ಮಾಲ್ ರಾಧಾಕೃಷ್ಣ, ರಾಣಿ ಮಹಾರಾಣಿ, ಒಡಹುಟ್ಟಿದವರು, ಪುಟ್ನಂಜ, ಸಿಪಾಯಿ, ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ದಿಗ್ಗಜರು, ಲಾಲಿಹಾಡು, ಮಣಿ, ರಂಗ ಎಸ್.ಎಸ್.ಎಲ್.ಸಿ, ಕೃಷ್ಣನ್ ಲವ್ ಸ್ಟೋರಿ, ಸಂಗೊಳ್ಳಿ ರಾಯಣ್ಣ ಸೇರಿದಂತೆ ನೂರಾರು ಚಿತ್ರಗಳಿಗೆ, ವೈವಿಧ್ಯಮಯ ಪಾತ್ರಗಳಿಗೆ ಜೀವ ಕೊಟ್ಟ ಕಲಾರತ್ನ ಉಮಾಶ್ರೀ ಎಂದರೆ ಅತಿಶಯೋಕ್ತಿಯಾಗಲಾರದು.

 

‘ಇಂಡಿಯನ್ -2’ ಟ್ರೇಲರ್ ರಿಲೀಸ್; ಕಮಾಲ್ ಮಾಡುವ ಹಿಂಟ್ ಕೊಟ್ಟ ಕಮಲ್ ಸಿನಿಮಾ!

 ಕಳೆದ 35 ವರ್ಷಗಳಲ್ಲಿ ಎಲ್ಲಾ ಹೆಸರಾಂತ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದಾರೆ. `ಮಣಿ’ ಚಿತ್ರದ ನಟನೆಗೆ ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, `ಗುಲಾಬಿ ಟಾಕೀಸ್’ ಚಿತ್ರಕ್ಕೆ ಭಾರತ ಸರ್ಕಾರದ ವತಿಯಿಂದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಿರುತೆರೆಯಲ್ಲಿಯು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಪಾತ್ರದಲ್ಲಿ ಮನೋಜ್ಞ ಅಭಿನಯದಿಂದ ಮೋಡಿ ಮಾಡಿದ್ದಾರೆ. ಶ್ರೀಮತಿ ಉಮಾಶ್ರೀ ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಕರ್ನಾಟಕದ ಹೆಮ್ಮೆ. ಎಷ್ಟೋ ಪಾತ್ರಗಳ ಗತ್ತು, ಎಷ್ಟೋ ಚಿತ್ರಗಳ ತಾಕತ್ತು ಹೆಚ್ಚಿಸಿದ ಹಿರಿಮೆ ಇವರ ನಟನೆಗೆ ಸಲ್ಲುತ್ತದೆ. ರಾಜಕೀಯ ರಂಗದಲ್ಲಿಯು ಯಶಸ್ಸು ಕಂಡು ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ’ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಮಹಾನ್ ಸಾಧಕಿಯ ಕಲಾಯಾನಕ್ಕೆ, ದಿನಾಂಕ 15 ಜೂನ್ 2024 ರಂದು, ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ‘ಚಿತ್ತಾರ ಸ್ಟಾರ್ ಅವಾರ್ಡ್ಸ್ – 2024’ ಕಾರ್ಯಕ್ರಮದಲ್ಲಿ ಉಮಾಶ್ರೀ ಅವರಿಗೆ CHITTARA LIFE TIME ACHIEVEMENT ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

 

 

 

 

 

 

Share this post:

Related Posts

To Subscribe to our News Letter.

Translate »