Sandalwood Leading OnlineMedia

Chittara Star Awards-2025 ; KARNATAKA ICON ಪ್ರಶಸ್ತಿಗೆ ಭಾಜನರಾದ ಕರುನಾಡ ಚಕ್ರವರ್ತಿ

`ಚಿತ್ತಾರ’ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ’ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ’ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು 2019 ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ’ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು CHITTARA KARNATAKA ICON-2025′ ಪ್ರಶಸ್ತಿಗೆ ಭಾಜರಾಗಿದ್ದಾರೆ.

 

ಕನ್ನಡ ಚಿತ್ರರಂಗದ ಆಲ್ ಟೈಮ್ ಎನರ್ಜಿ ಬೂಸ್ಟರ್ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್. ತನ್ನ ವಿಶಿಷ್ಟ ಅಭಿನಯದ ಮೂಲಕ ತನ್ನದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡ ಅದ್ಭುತವಾದ ಕಲಾವಿದ. ಪಾತ್ರ ಹೇಗಿದ್ದರೂ ಅದನ್ನು ಸಲೀಸಾಗಿ ನಿಭಾಯಿಸುವ ಗತ್ತು, ಗೈರತ್ತು, ತಾಕತ್ತು ಹೊಂದಿರುವ ನಟ ಶಿವಣ್ಣ. ಶಿವಣ್ಣನ ನಟನೆ, ನೃತ್ಯ, ಸಾಹಸ ಮತ್ತು ಡೈಲಾಗ್ ಡೆಲಿವರಿಗಿರುವ ಫ್ಯಾನ್ ಬೇಸ್ ಊಹೆಗೂ ಮೀರಿದ್ದು. ೪೦ ವರ್ಷಗಳಿಂದ ದಣಿವರಿಯದೇ ಚಿತ್ರರಂಗದಲ್ಲಿ ಯಶಸ್ವಿ ನಾಯಕನಾಗಿ 125  ಹೆಚ್ಚು ಸಿನಿಮಾಗಳಿಂದ ಚಿತ್ರ ರಸಿಕರನ್ನು ರಂಜಿಸುತ್ತಾ ಇಂದಿಗೂ ಯುವ ನಟರಿಗೂ ಸವಾಲಾಗುವಂತೆ ನಟಿಸುತ್ತಿದ್ದಾರೆ. ಆನಂದ್, ರಥಸಪ್ತಮಿ, ಓಂ, ಎಕೆ 47, ಜನುಮದ ಜೋಡಿ, ನಮ್ಮೂರ ಮಂದಾರ ಹೂವೇ, ತವರಿಗೆ ಬಾ ತಂಗಿ, ಜೋಗಿ, ಟಗರು, ಮಫ್ತಿ, ವೇದ, ಭೈರತಿ ರಣಗಲ್ ಸೇರಿದಂತೆ ಬಹಳಷ್ಟು ಟ್ರೆಂಡ್ ಸೆಟ್ಟರ್ ಚಿತ್ರಗಳನ್ನು ಶಿವಣ್ಣ ಕೊಟ್ಟಿದ್ದಾರೆ. ಪ್ರಸ್ತುತ ಕಲಾವಿದರ ಪೈಕಿ ಅತಿ ಹೆಚ್ಚು ವೈವಿಧ್ಯಮಯ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ಬಹುಶಃ ಶಿವಣ್ಣ ಹೊಸ ನಿರ್ದೇಶಕರಿಗೆ ಕೊಟ್ಟಷ್ಟು ಅವಕಾಶ, ಪ್ರೋತ್ಸಾಹ, ಸ್ವಾತಂತ್ರ‍್ಯ, ಧೈರ್ಯ ಮತ್ತೆಲ್ಲೂ ಕಾಣ ಸಿಗದು. ಈಗ ನಟನೆಯ ಜೊತೆಗೆ ಚಿತ್ರ ನಿರ್ಮಾಪಕರಾಗಿಯು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ‘ವೇದ’ ಅದಕ್ಕೊಂದು ಉತ್ತಮ ನಿದರ್ಶನ. ಕನ್ನಡ ಚಿತ್ರರಂಗದ ಹೆಮ್ಮೆ ಮತ್ತು ಹೆಗ್ಗುರುತಾಗಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಸಾಧನೆಯೂ ಅನೇಕರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತಾ ಚಿತ್ತಾರವು CHITTARA KARNATAKA ICON-2025  ಪ್ರಶಸ್ತಿ ನೀಡಿ ಗೌರವಿಸಿದೆ.

 

 

Share this post:

Translate »