ಕನ್ನಡದ ನಟಿಯೇ ಆದರೂ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಕರ್ನಾಟಕದ ಕ್ರಶ್ ಆಗಿದ್ದವರು ಈಗ ನ್ಯಾಶನಲ್ ಕ್ರಶ್ ಆಗಿದ್ದಾರೆ. ಎಂಗೇಜ್ಮೆಂಟ್, ಬ್ರೇಕಪ್ ಅಂತೆಲ್ಲಾ ಆದ ಮೇಲೆ ರಶ್ಮಿಕಾ ಟ್ರೋಲ್ ಆದಷ್ಟು ಇನ್ಯಾರು ಆಗಿಲ್ಲ. ಅದರಿಂದೆಲ್ಲಾ ನೋವಾಗಿದ್ದನ್ನು ಈಗ ಬಾಯ್ಬಿಡುತ್ತಿದ್ದಾರೆ.
ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ‘ನಾನು ನನ್ನ ಮೊದಲ ಸಿನಿಮಾದಲ್ಲಿ ಸಕ್ಸಸ್ ಪಡೆಯುವ ಮೊದಲು ಕನಿಷ್ಠ 25 ಬಾರಿ ರಿಜೆಕ್ಟ್ ಆಗಿದ್ದೇನೆ. ಒಂದು ಸಿನಿಮಾಗೆ ನಾನು ಸೆಲೆಕ್ಟ್ ಆಗಿ ಎರಡು ತಿಂಗಳು ಟ್ರೇನಿಂಗ್ ಪಡೆದಿದ್ದೆ. ಆ ಸಿನಿಮಾಕ್ಕೆ ಇಟ್ಟಿದ್ದ ಹೆಸರು ‘ಗೆಳೆಯರೇ ಗೆಳತಿಯರೇ’.
ಆದರೆ ಆ ಚಿತ್ರವು ಟೇಕ್ಅಪ್ ಆಗಲೇ ಇಲ್ಲ. ಅದಾದ ಬಳಿಕ ಕೂಡ ಹಲವು ಕಡೆ ರಿಜೆಕ್ಟ್ ಎಂದು ಬಾಯಿ ಬಿಟ್ಟು ಹೇಳದಿದ್ದರೂ ನಾನು ಸೆಲೆಕ್ಟ್ ಎಂದು ಹೇಳಲಿಲ್ಲ. ಹಲವರು ನನ್ನ ಫೇಸ್ ಆಕ್ಟಿಂಗ್ಗೆ ಸೂಟ್ ಆಗಲ್ಲ ಅಂದ್ರು. ಇನ್ನೂ ಕೆಲವರು ನನಗೆ ಆಕ್ಟಿಂಗ್ ಬರುವುದಿಲ್ಲ ಅಂದ್ರು. ಮತ್ತೂ ಹಲವರು ನಾನು ನಟಿಯಾಗಲು ಸೂಕ್ತವಾಗಿಲ್ಲ ಅಂದ್ರು.
ಎಲ್ಲವೂ ಓಕೆ. ಆದರೆ ನಾನು ರಿಜೆಕ್ಟ್ ಆದಾಗ ನನಗೆ ಅತೀವ ಸಂಕಟವಾಗುತ್ತಿತ್ತು. ಹೊಟ್ಟೆಯಲ್ಲಿ ಸುಟ್ಟಹಾಗಾಗುತ್ತಿತ್ತು. ನನ್ನನ್ನು ರಿಜೆಕ್ಟ್ ಮಾಡಿದವರ ಮೇಲೆ ನನಗೆ ಕೋಪ ಇರಲಿಲ್ಲ, ದ್ವೇಷ ಇರಲಿಲ್ಲ, ಆದರೆ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು’ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.